11 ತಿಂಗಳ ಬಳಿಕ ಭರ್ಜರಿ ಶತಕ ಸಿಡಿಸಿದ ಶುಭ್ಮನ್ ಗಿಲ್: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ವಿಶೇಷ ದಾಖಲೆ ಬರೆದ ಪ್ರಿನ್ಸ್

Shubman Gil Century: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಶುಭ್ಮನ್ ಎರಡನೇ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದರು. ಕಳೆದ 12 ಇನ್ನಿಂಗ್ಸ್ ಗಳಿಂದ ಟೀಕೆ ಎದುರಿಸುತ್ತಿದ್ದ ಗಿಲ್ ಕೊನೆಗೂ ತಮ್ಮ ಕ್ಲಾಸ್ ಪ್ರದರ್ಶನ ನೀಡಿ, ಟೆಸ್ಟ್ ನಲ್ಲಿ ಶತಕ ಸಿಡಿಸಿದ್ದರು.

Written by - Bhavishya Shetty | Last Updated : Feb 4, 2024, 04:48 PM IST
    • 11 ತಿಂಗಳ ನಂತರ ಭರ್ಜರಿ ಶತಕ ಸಿಡಿಸಿದ ಶುಭ್ಮನ್ ಗಿಲ್
    • ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಶುಭ್‌ಮನ್ ಶತಕ
    • ಇದು ಗಿಲ್ ಅಂತಾರಾಷ್ಟ್ರೀಯ ವೃತ್ತಿ ಬದುಕಿನ 10ನೇ ಶತಕವಾಗಿದೆ
11 ತಿಂಗಳ ಬಳಿಕ ಭರ್ಜರಿ ಶತಕ ಸಿಡಿಸಿದ ಶುಭ್ಮನ್ ಗಿಲ್: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ವಿಶೇಷ ದಾಖಲೆ ಬರೆದ ಪ್ರಿನ್ಸ್ title=
Shubman Gill

Shubman Gil Century: ಶುಭ್ಮನ್ ಗಿಲ್ ಕೊನೆಗೂ ಫಾರ್ಮ್ ಮರಳಿದ್ದು, 11 ತಿಂಗಳ ನಂತರ ಭರ್ಜರಿ ಶತಕ ಸಿಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಶುಭ್‌ಮನ್ ಶತಕ ಪೂರೈಸಿದರು. ಆದರೆ ಈ ಶತಕದ ಅಬ್ಬರ ನೋಡಲು ಸುಮಾರು 12 ಇನ್ನಿಂಗ್ಸ್‌ಗಳ ಸುದೀರ್ಘ ಸಮಯ ಕಾಯಬೇಕಾಯಿತು.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಶುಭ್ಮನ್ ಎರಡನೇ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದರು. ಕಳೆದ 12 ಇನ್ನಿಂಗ್ಸ್ ಗಳಿಂದ ಟೀಕೆ ಎದುರಿಸುತ್ತಿದ್ದ ಗಿಲ್ ಕೊನೆಗೂ ತಮ್ಮ ಕ್ಲಾಸ್ ಪ್ರದರ್ಶನ ನೀಡಿ, ಟೆಸ್ಟ್ ನಲ್ಲಿ ಶತಕ ಸಿಡಿಸಿದ್ದರು. ಇನ್ನು 104 ರನ್ ಗಳಿಸಿ ಪೆವಿಲಿಯನ್’ಗೆ ಮರಳಿದ ಗಿಲ್, ಈ ಇನ್ನಿಂಗ್ಸ್‌’ನಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್‌ ಸಿಡಿಸಿದ್ದರು. ಇದು ಗಿಲ್ ಅಂತಾರಾಷ್ಟ್ರೀಯ ವೃತ್ತಿ ಬದುಕಿನ 10ನೇ ಶತಕವಾಗಿದೆ.

ಇದನ್ನೂ ಓದಿ: ಗ್ಯಾಜೆಟ್ ಗಳಿಂದ ಮಾನಸಿಕ ಆರೋಗ್ಯ ಹಾಳಾಗುತ್ತಿದೆ, ಆತಂಕಗೊಂಡ ಸರ್ಕಾರದಿಂದ ಅಭಿಯಾನ ಆರಂಭ!

ಶತಕ ಬಾರಿಸಿದ ನಂತರ, ಸಾಮಾನ್ಯವಾಗಿ ಶುಭ್ಮನ್ ಗಿಲ್ ವಿಶಿಷ್ಟ ಶೈಲಿಯಲ್ಲಿ ಆಚರಿಸುತ್ತಾರೆ. ಆದರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌’ನಲ್ಲಿ ಹೀಗೆ ಮಾಡಲಿಲ್ಲ. ಈ ಬಾರಿ ಶತಕ ಪೂರೈಸಿದ ಗಿಲ್ ಅವರು ಅತ್ಯಂತ ಸರಳ ರೀತಿಯಲ್ಲಿ ಹೆಲ್ಮೆಟ್ ತೆಗೆದು ಬ್ಯಾಟ್ ತೋರಿಸಿ, ಬೆಂಬಲ ನೀಡಿದ ಮೈದಾನದಲ್ಲಿದ್ದ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಗಿಲ್ 21 ಟೆಸ್ಟ್ ಪಂದ್ಯಗಳ 39 ಇನ್ನಿಂಗ್ಸ್‌ಗಳಲ್ಲಿ 1063 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ 2 ಶತಕ ಮತ್ತು 4 ಅರ್ಧ ಶತಕ ಕೂಡ ಒಳಗೊಂಡಿದೆ. ಇನ್ನು ODI ಸ್ವರೂಪದಲ್ಲಿ 44 ಪಂದ್ಯಗಳಲ್ಲಿ 61 ಕ್ಕಿಂತ ಹೆಚ್ಚಿನ ಸರಾಸರಿಯೊಂದಿಗೆ 2271 ರನ್ ಗಳಿಸಿದ್ದಾರೆ. ಇದರಲ್ಲಿ 6 ಶತಕ ಮತ್ತು 13 ಅರ್ಧ ಶತಕಗಳು ಸೇರಿವೆ. ಟಿ20 ಅಂತರಾಷ್ಟ್ರೀಯ ಪಂದ್ಯಗಳ ಬಗ್ಗೆ ಮಾತನಾಡುವುದಾದರೆ 14 ಪಂದ್ಯಗಳಲ್ಲಿ 335 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲೂ 1 ಶತಕ ಮತ್ತು 1 ಅರ್ಧ ಶತಕ ಹೊಂದಿದ್ದಾರೆ.

ಸಚಿನ್-ವಿರಾಟ್ ದಾಖಲೆ:

ಶುಭ್ಮನ್ ಅವರ ಈ ಶತಕ ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ 10ನೇ ಶತಕವಾಗಿದೆ. ಅವರು 24 ನೇ ವಯಸ್ಸಿನಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಅಂತರಾಷ್ಟ್ರೀಯ ಶತಕಗಳನ್ನು ಗಳಿಸಿದ ಭಾರತದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 99 ಇನ್ನಿಂಗ್ಸ್‌’ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದಾರೆ.

ಇದುವರೆಗೆ 30 ಶತಕ ಸಿಡಿಸಿರುವ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 21 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಮತ್ತು ರವಿಶಾಸ್ತ್ರಿ ಅವರಂತಹ ದಿಗ್ಗಜರು 24 ನೇ ವಯಸ್ಸಿನಲ್ಲಿ ತಲಾ 9 ಅಂತರಾಷ್ಟ್ರೀಯ ಶತಕಗಳನ್ನು ಗಳಿಸಿದ್ದಾರೆ.

ಇದಲ್ಲದೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌’ನಲ್ಲಿ ಭಾರತದ ಪರ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿಷಯದಲ್ಲಿ ಗಿಲ್ ಜಂಟಿ ಮೂರನೇ ಸ್ಥಾನವನ್ನು ತಲುಪಿದ್ದಾರೆ. ಇವರಲ್ಲದೆ, ಕೆಎಲ್ ರಾಹುಲ್, ಅಜಿಂಕ್ಯ ರಹಾನೆ ಮತ್ತು ರಿಷಬ್ ಪಂತ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ತಲಾ 3 ಶತಕಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ: ಬರದ ಬಗ್ಗೆ ಒಂದು ದಿನವೂ ಸಭೆ ಮಾಡದ ಬಿಜೆಪಿಗರು ನಮ್ಮ ವಿರುದ್ಧ ಮಾತಾಡುತ್ತಿದ್ದಾರೆ: ಡಿಸಿಎಂ ಆಕ್ರೋಶ

ಗಿಲ್ ಅವರ ಈ ಶತಕದ ಆಧಾರದ ಮೇಲೆ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 255 ರನ್ ಗಳಿಸಿತು. ಇದರಿಂದಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 143 ರನ್‌ಗಳ ಮುನ್ನಡೆ ಸಾಧಿಸಿರುವ ಭಾರತ ಇಂಗ್ಲೆಂಡ್‌ಗೆ 399 ರನ್‌ಗಳ ಗುರಿಯನ್ನು ನೀಡಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News