ಪತ್ನಿಯಿಂದ ವಿಚ್ಛೇದನ ಪಡೆದ ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟರ್‌, ದೂರವಾಗಲು ಮಾನಸಿಕ ಹಿಂಸೆಯೇ ಕಾರಣ!

Shikhar Dhawan Divorce : ಭಾರತ ಕ್ರಿಕೆಟ್ ತಂಡದ ಸ್ಟಾರ್ ಓಪನರ್ ಶಿಖರ್ ಧವನ್ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬೀಳುತ್ತಿದೆ. ಧವನ್ ಪತ್ನಿ ಆಯೇಷಾ ಮುಖರ್ಜಿಯಿಂದ ವಿಚ್ಛೇದನ ಪಡೆದಿದ್ದಾರೆ.   

Written by - Chetana Devarmani | Last Updated : Oct 5, 2023, 10:32 AM IST
  • ಸ್ಟಾರ್‌ ಕ್ರಿಕೆಟರ್‌ ಬಾಳಲ್ಲಿ ವಿಚ್ಛೇದನದ ಬಿರುಗಾಳಿ
  • ಭಾರತ ಕ್ರಿಕೆಟ್ ತಂಡದ ಸ್ಟಾರ್ ಓಪನರ್ ಶಿಖರ್ ಧವನ್
  • ಪತ್ನಿ ಆಯೇಷಾ ಮುಖರ್ಜಿಯಿಂದ ವಿಚ್ಛೇದನ ಪಡೆದ ಕ್ರಿಕೆಟರ್‌
ಪತ್ನಿಯಿಂದ ವಿಚ್ಛೇದನ ಪಡೆದ ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟರ್‌, ದೂರವಾಗಲು ಮಾನಸಿಕ ಹಿಂಸೆಯೇ ಕಾರಣ!   title=
Shikhar Dhawan

ನವದೆಹಲಿ : ದೆಹಲಿಯ ಪಟಿಯಾಲ ಹೌಸ್ ಕಾಂಪ್ಲೆಕ್ಸ್‌ನಲ್ಲಿರುವ ಕೌಟುಂಬಿಕ ನ್ಯಾಯಾಲಯ ಶಿಖರ್ ಧವನ್ ವಿಚ್ಛೇದನವನ್ನು ಅಂಗೀಕರಿಸಿದೆ. ಶಿಖರ್ ಧವನ್ ಅವರ ಪತ್ನಿ ಧವನ್ ಗೆ ತನ್ನ ಏಕೈಕ ಪುತ್ರನಿಂದ ವರ್ಷಗಟ್ಟಲೆ ಪ್ರತ್ಯೇಕವಾಗಿ ಬದುಕುವಂತೆ ಒತ್ತಾಯಿಸಿ ಮಾನಸಿಕ ನೋವು ಉಂಟು ಮಾಡಿದ್ದನ್ನು ಕೋರ್ಟ್ ಮುಂದೆ ಸಾಭಿತುಪಡಿಸಲಾಗಿದೆ.

ವಿಚ್ಛೇದನ ಅರ್ಜಿಯಲ್ಲಿ ಪತ್ನಿ ವಿರುದ್ಧ ಧವನ್ ಮಾಡಿರುವ ಎಲ್ಲಾ ಆರೋಪಗಳನ್ನು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಹರೀಶ್ ಕುಮಾರ್ ಎದುರು ಸಾಬೀತು ಮಾಡಿದ್ದಾರೆ. ಶಿಖರ್‌ ಧವನ್ ಅವರ ಪತ್ನಿ ಮೇಲಿನ ಆರೋಪಗಳು ನಿಜವೆಂದು ಸಾಭೀತಾಗಿವೆ. ಸ್ವತಃ ಸಮರ್ಥಿಸಿಕೊಳ್ಳಲು ಅವರು ವಿಫಲರಾಗಿದ್ದಾರೆ ಎಂದು ಕೌಟುಂಬಿಕ ನ್ಯಾಯಾಲಯ ಹೇಳಿದೆ.

ನ್ಯಾಯಾಲಯವು ಧವನ್‌ಗೆ ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ತನ್ನ ಮಗನನ್ನು ನಿರ್ದಿಷ್ಟ ಅವಧಿಗೆ ಭೇಟಿಯಾಗುವ ಹಕ್ಕನ್ನು ನೀಡಿದೆ. ಅವನೊಂದಿಗೆ ವಿಡಿಯೋ ಕಾಲ್‌ ಮೂಲಕ ನ್ಯಾಯಾಲಯ ಸಂವಾದ ನಡೆಸಿತು.

ಇದನ್ನೂ ಓದಿ : ವಿಶ್ವಕಪ್‌ ಮೊದಲ ಪಂದ್ಯಕ್ಕೂ ಮುನ್ನವೇ ಇಂಗ್ಲೆಂಡ್ ತಂಡಕ್ಕೆ ಬಿಗ್‌ ಶಾಕ್‌.!!

ಶೈಕ್ಷಣಿಕ ಕ್ಯಾಲೆಂಡರ್‌ನಲ್ಲಿ ಕನಿಷ್ಠ ಅರ್ಧದಷ್ಟು ಶಾಲಾ ರಜೆಯ ಅವಧಿಯವರೆಗೆ ಧವನ್ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ರಾತ್ರಿಯ ತಂಗುವಿಕೆ ಸೇರಿದಂತೆ ಭೇಟಿ ಉದ್ದೇಶಗಳಿಗಾಗಿ ಮಗುವನ್ನು ಭಾರತಕ್ಕೆ ಕರೆತರುವಂತೆ ಧವನ್ ಅವರ ಪತ್ನಿ ಆಯೇಷಾ ಅವರಿಗೆ ನ್ಯಾಯಾಲಯ ಆದೇಶಿಸಿದೆ.

ಅರ್ಜಿದಾರ ಶಿಖರ್ ಧವನ್ ಖ್ಯಾತ ಅಂತಾರಾಷ್ಟ್ರೀಯ ಕ್ರಿಕೆಟಿಗ. ಅವರು ನಾಗರಿಕ ಮತ್ತು ಜವಾಬ್ದಾರಿಯುತ ತಂದೆಯಾಗಿ ಹಕ್ಕುಗಳನ್ನು ಹೊಂದಿದ್ದಾರೆ. ಇದಲ್ಲದೆ, ತನ್ನ ತಂದೆ ಮತ್ತು ಕುಟುಂಬದ ಸಹವಾಸದಲ್ಲಿರಲು ಮಗುವಿನ ಹಕ್ಕಿನ ಬಗ್ಗೆ ನ್ಯಾಯಾಲಯವು ಗಮನಹರಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ.

37 ವರ್ಷದ ಶಿಖರ್ ಧವನ್ ಏಕದಿನ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿಲ್ಲ. ಪ್ರಸ್ತುತ, ಕ್ರಿಕೆಟ್‌ನಲ್ಲಿ ಅವರಿಗೆ ಸಮಯ ಚೆನ್ನಾಗಿಲ್ಲ. ತಂಡದಲ್ಲಿ ಸ್ಥಾನ ಪಡೆಯಲು ಹರಸಾಹಸ ಪಡುತ್ತಿದ್ದಾರೆ. 68 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಧವನ್‌ 1759 ರನ್, 27.92 ಸರಾಸರಿ, 11 ಅರ್ಧ ಶತಕ ಬಾರಿಸಿದ್ದಾರೆ. 167 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 6793 ರನ್, 44.11 ಸರಾಸರಿ, 17 ಶತಕ ಮತ್ತು 39 ಅರ್ಧ ಶತಕ ಸಿಡಿಸಿದ್ದಾರೆ. 34 ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ 2315 ರನ್ಗಳು, 40.61 ಸರಾಸರಿ, ಏಳು ಶತಕಗಳು ಮತ್ತು 5 ಅರ್ಧ ಶತಕಗಳು ಮತ್ತು 217 ಐಪಿಎಲ್ ಪಂದ್ಯಗಳಲ್ಲಿ 6616 ರನ್, 35.19 ಸರಾಸರಿ, ಎರಡು ಶತಕ ಮತ್ತು 50 ಅರ್ಧ ಶತಕ ಧವನ್‌ ಹೆಸರಿನಲ್ಲಿವೆ. 

ಹರ್ಭಜನ್ ಸಿಂಗ್ ಅವರ ಫೇಸ್‌ಬುಕ್ ಫ್ರೆಂಡ್ ಲಿಸ್ಟ್‌ನಲ್ಲಿ ಶಿಖರ್ ಧವನ್ ಅವರು ಆಯೇಷಾಳನ್ನು ನೋಡಿದ್ದರು. ಅವರ ಫೋಟೋ ನೋಡಿದ ತಕ್ಷಣ ಇಷ್ಟಪಟ್ಟರು ಎಂದು ಹೇಳಲಾಗುತ್ತದೆ. ಇದಾದ ನಂತರ ಶಿಖರ್ ಆಯೇಷಾಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಇಬ್ಬರ ನಡುವೆ ಮಾತುಕತೆ ನಡೆದಿದ್ದು, ಫೇಸ್ ಬುಕ್ ನಲ್ಲಿಯೇ ಪ್ರೀತಿ ಕುಡಿಯೊಡೆದಿತ್ತು ಎನ್ನಲಾಗಿದೆ. ಶಿಖರ್ ಆಯೇಷಾ ಅವರಿಗಿಂತ 10 ವರ್ಷ ಚಿಕ್ಕವರು. 

2009ರಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಾದ ಬಳಿಕ ಧವನ್ 2012ರಲ್ಲಿ ಆಯೇಷಾ ಅವರನ್ನು ವಿವಾಹವಾದರು. ಇದು ಶಿಖರ್ ಅವರ ಮೊದಲ ಮದುವೆ, ಆದರೆ ಆಯೇಷಾ ಅವರ ಎರಡನೇ ಮದುವೆ. ಆಯೇಷಾಳ ಮೊದಲ ವಿವಾಹವು ಆಸ್ಟ್ರೇಲಿಯಾದ ಉದ್ಯಮಿಯೊಂದಿಗೆ ಆಗಿತ್ತು, ಅದು ಮುರಿದುಬಿತ್ತು. ಆಯೇಷಾ ಮತ್ತು ಅವರ ಮೊದಲ ಪತಿಗೆ ರಿಯಾ ಮತ್ತು ಆಲಿಯಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಶಿಖರ್ ಮತ್ತು ಆಯೇಷಾ ದಂಪತಿಗೆ ಜೋರಾವರ್ ಎಂಬ ಮಗನಿದ್ದಾನೆ.

ಇದನ್ನೂ ಓದಿ : ವಿಶ್ವಕಪ್’ಗೂ ಮುನ್ನ ನಾಯಕತ್ವ ಕಳೆದುಕೊಂಡ ರೋಹಿತ್! ಇನ್ಮುಂದೆ 35 ಹರೆಯದ ಈ ಸ್ಟಾರ್ ಬ್ಯಾಟ್ಸ್’ಮನ್’ ಕ್ಯಾಪ್ಟನ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.  

 

Trending News