ವಿರಾಟ್ ಕೊಹ್ಲಿ ಪಾಕಿಸ್ತಾನಕ್ಕೆ ಬಂದ್ರೆ ಭಾರತವನ್ನೇ ಮರೆಯುವಂತೆ ಮಾಡುತ್ತೇವೆ! ಪಾಕ್ ಕ್ರಿಕೆಟಿಗನ ಶಾಕಿಂಗ್ ಹೇಳಿಕೆ

Shahid Afrid Statement on Virat Kohli: ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಕೋಪಗೊಂಡಿದ್ದು, ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರಲೇಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ಎಲ್ಲದರ ಮಧ್ಯೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿಕೆಯೊಂದನ್ನು ನೀಡಿದ್ದು, ವಿರಾಟ್ ಕೊಹ್ಲಿ ಪಾಕಿಸ್ತಾನಕ್ಕೆ ಬಂದರೆ ಭಾರತವನ್ನು ಮರೆಯುವ ರೀತಿಯಲ್ಲಿ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.

Written by - Bhavishya Shetty | Last Updated : Jul 12, 2024, 07:20 PM IST
    • ಎರಡು ದೇಶಗಳ ನಡುವಿನ ಕ್ರಿಕೆಟ್ ಸಂಬಂಧ ಬೆಳೆಯಲು ಇದು ಸಹಾಯ
    • ವಿರಾಟ್ ಕೊಹ್ಲಿ ಪಾಕಿಸ್ತಾನಕ್ಕೆ ಬಂದರೆ ಭಾರತವನ್ನು ಮರೆಯುವ ರೀತಿಯಲ್ಲಿ ಸ್ವಾಗತಿಸುತ್ತೇವೆ
    • ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿಕೆ
ವಿರಾಟ್ ಕೊಹ್ಲಿ ಪಾಕಿಸ್ತಾನಕ್ಕೆ ಬಂದ್ರೆ ಭಾರತವನ್ನೇ ಮರೆಯುವಂತೆ ಮಾಡುತ್ತೇವೆ! ಪಾಕ್ ಕ್ರಿಕೆಟಿಗನ ಶಾಕಿಂಗ್ ಹೇಳಿಕೆ title=
Virat Kohli

Shahid Afrid Statement on Virat Kohli: ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದ್ದು, ಮುಂದಿನ ಗಮನ ಚಾಂಪಿಯನ್ಸ್ ಟ್ರೋಫಿಯತ್ತ ನೆಟ್ಟಿದೆ. ಆದರೆ ಈ ಪಂದ್ಯಾವಳಿಯ ವಿಚಾರದಲ್ಲಿ ಸದ್ಯ ಗೊಂದಲವಿದ್ದು, ಪಾಕಿಸ್ತಾನದಲ್ಲಿ ನಡೆಯಲಿದೆಯೇ ಎಂಬುದು ಈಗಿನ ಚರ್ಚೆಯ ವಿಷಯ,

ಇದನ್ನೂ ಓದಿ: ಅಪರ್ಣಾ ಧ್ವನಿಯನ್ನು ಬದಲಾಯಿಸುತ್ತಾ ‘ನಮ್ಮ ಮೆಟ್ರೋ’? ಅಚ್ಚ ಕನ್ನಡತಿ ಅಗಲಿಕೆ ಬೆನ್ನಲ್ಲೇ ನಿರ್ಧಾರ

ಈ ಮಧ್ಯೆ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಕೋಪಗೊಂಡಿದ್ದು, ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರಲೇಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ಎಲ್ಲದರ ಮಧ್ಯೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿಕೆಯೊಂದನ್ನು ನೀಡಿದ್ದು, ವಿರಾಟ್ ಕೊಹ್ಲಿ ಪಾಕಿಸ್ತಾನಕ್ಕೆ ಬಂದರೆ ಭಾರತವನ್ನು ಮರೆಯುವ ರೀತಿಯಲ್ಲಿ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.

“ಭಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಏಕೆ ಬರುವುದಿಲ್ಲ ಎಂದು ಮೊದಲು ನಿಮ್ಮ ಆಡಳಿತಗಾರರನ್ನು ನೀವೇ ಕೇಳಬೇಕು.. ನಿಮಗೆ ನಿಖರವಾದ ಉತ್ತರ ಸಿಗುತ್ತದೆ. ವಿಶ್ವದಾದ್ಯಂತ ಕ್ರಿಕೆಟ್ ತಂಡಗಳು ಮತ್ತು ಲೀಗ್ ತಂಡಗಳು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಬುಮ್ರಾ ಅವರನ್ನು ನೋಡಲು ಹಾತೊರೆಯುತ್ತಿವೆ” ಎಂದು ಹೇಳಿದ್ದಾರೆ.

“ಬಿಸಿಸಿಐ ಬೇರೆ ರೀತಿಯಲ್ಲಿ ಯೋಚಿಸಬೇಕು. ಎರಡು ದೇಶಗಳ ನಡುವಿನ ಕ್ರಿಕೆಟ್ ಸಂಬಂಧ ಬೆಳೆಯಲು ಇದು ಸಹಾಯ ಮಾಡುತ್ತದೆ. ಜೊತೆಗೆ ವಿರಾಟ್ ಕೊಹ್ಲಿ ಆಟ ನೋಡುವ ಅವಕಾಶ ನಮ್ಮ ದೇಶದ ಪ್ರೇಕ್ಷಕರಿಗೆ ಸಿಗುತ್ತದೆ” ಎಂದಿದ್ದಾರೆ.

ಇದನ್ನೂ ಓದಿ: ತಮಿಳುನಾಡಿಗೆ ನೀರು ಬಿಡಲು ಆದೇಶದ ವಿರುದ್ಧ CWMAಗೆ ಮೇಲ್ಮನವಿ ಸಲ್ಲಿಸಲು ಸರ್ಕಾರದ ನಿರ್ಧಾರ

“ವಿರಾಟ್ ಕೊಹ್ಲಿ ಇಲ್ಲಿನ ಆತಿಥ್ಯ ಕಂಡರೆ ನಿಮ್ಮ ದೇಶದ ಆತಿಥ್ಯವನ್ನೂ ಮರೆಯುತ್ತೀರಿ. ನಾನು ಭಾರತ ತಂಡವನ್ನು ಸ್ವಾಗತಿಸುತ್ತೇನೆ. ಪಾಕಿಸ್ತಾನ ಪ್ರವಾಸ ಕೈಗೊಂಡಾಗಲೂ ನಾವು ಭಾರತದಿಂದ ಅಪಾರ ಗೌರವ ಮತ್ತು ಪ್ರೀತಿ ಪಡೆದಿದ್ದೇವೆ” ಎಂದು ಅಫ್ರಿದಿ ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News