ಅಭಿಷೇಕ್ ಜೀವನದಲ್ಲಿ ಐಶ್ವರ್ಯಾ ರೈ ಎರಡನೇ ಮಹಿಳೆನಾ..? ವಿಚ್ಛೇದನ ವದಂತಿ ನಡುವೆ ಶಾಕಿಂಗ್‌ ಸತ್ಯ ಬಿಚ್ಚಿಟ್ಟ ನಟಿ..!

Aishwarya Rai and abhishek Bachchan Divorce: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಸಂಬಂಧದಲ್ಲಿ ಭಿನ್ನಾಭಿಪ್ರಾಯವಿದೆ ಎಂಬ ಸುದ್ದಿ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ವಿಚ್ಛೇದನದ ಸುದ್ದಿ ಹರಿದಾಡುತ್ತಿದೆ, ಆದರೆ ಸತ್ಯ ಇನ್ನೂ ಯಾರಿಗೂ ಬಹಿರಂಗವಾಗಿಲ್ಲ. ಏತನ್ಮಧ್ಯೆ, ದಂಪತಿಗಳ ಕೆಲವು ಹಳೆಯ ವೀಡಿಯೊಗಳು ವೈರಲ್ ಆಗುತ್ತಿವೆ. ಈ ಪೈಕಿ ಒಂದು ವಿಡಿಯೋ ಹೊರಬಿದ್ದಿದ್ದು, ಇದರಲ್ಲಿ ಐಶ್ವರ್ಯಾ ಆಘಾತಕಾರಿ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.  

Written by - Zee Kannada News Desk | Last Updated : Aug 4, 2024, 09:59 AM IST
  • ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಸಂಬಂಧದಲ್ಲಿ ಭಿನ್ನಾಭಿಪ್ರಾಯವಿದೆ ಎಂಬ ಸುದ್ದಿ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ.
  • ವಿಡಿಯೋ ಹೊರಬಿದ್ದಿದ್ದು, ಇದರಲ್ಲಿ ಐಶ್ವರ್ಯಾ ಆಘಾತಕಾರಿ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
  • ಅನೇಕ ಜನರು ತಮ್ಮ ಸಂಬಂಧದಲ್ಲಿ ಹುಳುಕಿಗೆ ಸಹೋದರಿ ಶ್ವೇತಾ ಬಚ್ಚನ್ ಕಾರಣ ಎಂದು ಹೇಳುತ್ತಿದ್ದಾರೆ.
ಅಭಿಷೇಕ್ ಜೀವನದಲ್ಲಿ ಐಶ್ವರ್ಯಾ ರೈ ಎರಡನೇ ಮಹಿಳೆನಾ..? ವಿಚ್ಛೇದನ ವದಂತಿ ನಡುವೆ ಶಾಕಿಂಗ್‌ ಸತ್ಯ ಬಿಚ್ಚಿಟ್ಟ ನಟಿ..! title=

Aishwarya Rai and abhishek Bachchan Divorce: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಸಂಬಂಧದಲ್ಲಿ ಭಿನ್ನಾಭಿಪ್ರಾಯವಿದೆ ಎಂಬ ಸುದ್ದಿ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ವಿಚ್ಛೇದನದ ಸುದ್ದಿ ಹರಿದಾಡುತ್ತಿದೆ, ಆದರೆ ಸತ್ಯ ಇನ್ನೂ ಯಾರಿಗೂ ಬಹಿರಂಗವಾಗಿಲ್ಲ. ಏತನ್ಮಧ್ಯೆ, ದಂಪತಿಗಳ ಕೆಲವು ಹಳೆಯ ವೀಡಿಯೊಗಳು ವೈರಲ್ ಆಗುತ್ತಿವೆ. ಈ ಪೈಕಿ ಒಂದು ವಿಡಿಯೋ ಹೊರಬಿದ್ದಿದ್ದು, ಇದರಲ್ಲಿ ಐಶ್ವರ್ಯಾ ಆಘಾತಕಾರಿ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

ಐಶ್ವರ್ಯಾ ಅವರ ಈ ವೀಡಿಯೊ ಸಾಕಷ್ಟು ಹಳೆಯದಾಗಿದೆ, ಇದರಲ್ಲಿ ಅವರು ಅಭಿಷೇಕ್ ಜೀವನದಲ್ಲಿ ಎರಡನೇ ಮಹಿಳೆ ಎಂದು ಕರೆಸಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ. ಕಾಫಿ ವಿತ್ ಕರಣ್ ಸಂಚಿಕೆಯಲ್ಲಿ ಐಶ್ವರ್ಯಾ ಈ ಹೇಳಿಕೆ ನೀಡಿದ್ದಾರೆ. ಆಗ ಅವರ ಜೊತೆ ಅಭಿಷೇಕ್ ಬಚ್ಚನ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

2020 ರಲ್ಲಿ ಐಶ್ವರ್ಯಾ ಮತ್ತು ಅಭಿಷೇಕ್ ಕರಣ್ ಜೋಹರ್ ಅವರ ಕಾರ್ಯಕ್ರಮ ಕಾಫಿ ವಿತ್ ಕರಣ್ ರಲ್ಲಿ ಭಾಗವಹಿಸಿದ್ದರು. ಕರಣ್‌ ಅವರು ಅಭಿಷೇಕ್ ಅವರನ್ನು 3 ಮಹಿಳೆಯರ ಜಯಾ ಆಂಟಿ, ಶ್ವೇತಾ ಮತ್ತು ಐಶ್ವರ್ಯಾ ನಡುವೆ ನಿಮಗೆ ಯಾರು ಮೊದಲು ಎಂದು ಕೇಳಿದರು.

ಇದನ್ನೂ ಓದಿ: 16 ವರ್ಷದ ಯುವತಿಯಂತೆ ಕಾಣುವ ಈ 43 ವರ್ಷದ ನಟಿ 2 ಮಕ್ಕಳ ತಾಯಿ..ಯಾರು ಗೊತ್ತಾ..?

ಇದಾದ ನಂತರ ಐಶ್ವರ್ಯಾ ರೈ ಕೂಡಲೇ ಉತ್ತರಿಸಿ "ನಾನೆಂದೂ ಅಭಿಷೇಕ್‌ನ ಜೀವನದಲ್ಲಿ ಎರಡನೇ ಮಹಿಳೆ ಎಂದು ಕರೆಸಿಕೊಳ್ಳಲು ಭಯಸುವುದಿಲ್ಲ" ಎಂದಿದ್ದರು. ಇದನ್ನು ಕೇಳಿ ಅಭಿಷೇಕ್ ಕೂಡ ಮೌನವಾದರು. ಆಗ ನಟಿಯ ಈ ಹೇಳಿಕೆ ಭಾರೀ ಕೋಲಾಹಲ ಸೃಷ್ಟಿಸಿತ್ತು. ಆದರೆ, ಐಶ್ವರ್ಯಾ ರೈ ಅವರ ಈ ಹೇಳಿಕೆಯನ್ನು ಕೇಳಿದ ನಂತರ ಜನರು ಹೆಚ್ಚು ಮಾತನಾಡಲಿಲ್ಲ ಏಕೆಂದರೆ ಆ ಸಮಯದಲ್ಲಿ ಇಬ್ಬರ ನಡುವಿನ ಮನಸ್ತಾಪದ ಬಗ್ಗೆ ಯಾರ ಮನಸ್ಸಿನಲ್ಲಿಯೂ ಯಾವುದೇ ಆಲೋಚನೆಗಳು ಬಂದಿರಲಿಲ್ಲ.

ಆದರೆ, ಈಗ ವಿಚ್ಛೇದನದ ಸುದ್ದಿಗೆ ವೇಗ ಸಿಕ್ಕಿದ್ದು, ಐಶ್ವರ್ಯಾ ಅವರ ಈ ಹಳೆಯ ಹೇಳಿಕೆಯನ್ನು ಜನ ಹೆಚ್ಚಾಗಿ ಪ್ರಸ್ತಾಪಿಸುತ್ತಿದ್ದಾರೆ. ಈ ಹೇಳಿಕೆಯೂ ವೈರಲ್ ಆಗಿದೆ. ಅವರ ಸಂಬಂಧವು ಬಹಳ ಹಿಂದಿನಿಂದಲೂ ಹಳಸಿದೆ ಎಂದು ಅನೇಕರು ನಂಬಿದ್ದರು ಮತ್ತು ಅವರ ಸಂಬಂಧದಲ್ಲಿ ಬಿರುಕು ಉಂಟಾಗಲು ಇದೇ ಕಾರಣವಾಗಿತ್ತು. ಅನೇಕ ಜನರು ತಮ್ಮ ಸಂಬಂಧದಲ್ಲಿ ಹುಳುಕಿಗೆ ಸಹೋದರಿ ಶ್ವೇತಾ ಬಚ್ಚನ್ ಕಾರಣ ಎಂದು ಹೇಳುತ್ತಿದ್ದಾರೆ. ಜಯಾ ಬಚ್ಚನ್ ಎಂದಿಗೂ ಐಶ್ವರ್ಯಾ ರೈ ಅವರನ್ನು ಚೆನ್ನಾಗಿ ನಡೆಸಿಕೊಂಡಿಲ್ಲ ಎಂದು ಹಲವರು ಟೀಕಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News