Cricket Facts: ಟೀಂ ಇಂಡಿಯಾದಲ್ಲಿ ಎಷ್ಟು ಬಾರಿ ಜೆರ್ಸಿ ಬದಲಾವಣೆಯಾದರೂ, ಪ್ರಮುಖ ಬಣ್ಣ ನೀಲಿಯೇ ಆಗಿರುತ್ತದೆ. ಆದರೆ ಎಂದಾದರೂ ಗಮನವಿಟ್ಟು ನೋಡಿದ್ದಿರಾ? ಭಾರತೀಯ ಪುರುಷರ ಕ್ರಿಕೆಟ್ ತಂಡದ ಜರ್ಸಿಯಲ್ಲಿ, BCCI ಲಾಂಛನದ ಮೇಲೆ ಮೂರು ನಕ್ಷತ್ರಗಳಿವೆ. ಒಂದು ವೇಳೆ ಗಮನಿಸಿಲ್ಲವಾದರೆ, ಈ ಮೇಲೆ ನೀಡಿರುವ ಫೋಟೋದಲ್ಲಿ ನೋಡಬಹುದು. ಆಟಗಾರರ ಜರ್ಸಿಯಲ್ಲಿ ಈ ಸ್ಟಾರ್ʼಗಳನ್ನು ಏಕೆ ಮಾಡಲಾಗಿದೆ ಎಂದು ನಿಮಗೆ ತಿಳಿದಿದೆಯೇ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಟೀಂ ಇಂಡಿಯಾದಲ್ಲಿ ಎಷ್ಟು ಬಾರಿ ಜೆರ್ಸಿ ಬದಲಾವಣೆಯಾದರೂ, ಪ್ರಮುಖ ಬಣ್ಣ ನೀಲಿಯೇ ಆಗಿರುತ್ತದೆ. ಆದರೆ ಎಂದಾದರೂ ಗಮನವಿಟ್ಟು ನೋಡಿದ್ದಿರಾ? ಭಾರತೀಯ ಪುರುಷರ ಕ್ರಿಕೆಟ್ ತಂಡದ ಜರ್ಸಿಯಲ್ಲಿ, BCCI ಲಾಂಛನದ ಮೇಲೆ ಮೂರು ನಕ್ಷತ್ರಗಳಿವೆ. ಒಂದು ವೇಳೆ ಗಮನಿಸಿಲ್ಲವಾದರೆ, ಈ ಮೇಲೆ ನೀಡಿರುವ ಫೋಟೋದಲ್ಲಿ ನೋಡಬಹುದು. ಆಟಗಾರರ ಜರ್ಸಿಯಲ್ಲಿ ಈ ಸ್ಟಾರ್ʼಗಳನ್ನು ಏಕೆ ಮಾಡಲಾಗಿದೆ ಎಂದು ನಿಮಗೆ ತಿಳಿದಿದೆಯೇ?
ಕೆಲ ಮಾಹಿತಿಗಳ ಪ್ರಕಾರ, ಈ ಸ್ಟಾರ್ʼಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. ಇದು ಭಾರತೀಯ ಪುರುಷರ ಕ್ರಿಕೆಟ್ ತಂಡವು ಸಾಧಿಸಿದ ವಿಶೇಷ ವಿಜಯದ ಬಗ್ಗೆ ಸೂಚಿಸುತ್ತವೆ. ಅಂದರೆ ಟೀಂ ಇಂಡಿಯಾ ಗೆದ್ದ ವಿಶ್ವಕಪ್ ಅನ್ನು ನೆನಪಿಸುತ್ತವೆ.
ಇದುವರೆಗಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತೀಯ ಪುರುಷರ ಕ್ರಿಕೆಟ್ ತಂಡವು 4 ಬಾರಿ ವಿಶ್ವಕಪ್ ಗೆದ್ದಿರುವುದು ನಮಗೆಲ್ಲ ತಿಳಿದಿದೆ. ಹಾಗಾದರೆ 4 ಸ್ಟಾರ್ ಇರಬೇಕಲ್ಲವೇ ಎಂಬುದು ಕೆಲವರ ವಾದ. ಅಷ್ಟೇ ಅಲ್ಲದೆ, ಟಿ20 ಜೆರ್ಸಿಯಲ್ಲಿ 2 ಸ್ಟಾರ್‌ಗಳಿದೆ. ಇದು ಎರಡು ಬಾರಿ ಟಿ20 ವಿಶ್ವಕಪ್ ಗೆದ್ದಿದ್ದೇವೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಆದರೆ ಒಡಿಐ ಜೆರ್ಸಿಯಲ್ಲಿ ಮೂರು ಸ್ಟಾರ್ʼಗಳಿದ್ದು, ಭಾರತ ಇದುವರೆಗೆ ಗೆದ್ದಿದ್ದು ಎರಡು ಒಡಿಐ ವಿಶ್ವಕಪ್. ಹಾಗಾದ್ರೆ ಆ ಮೂರನೇ ಸ್ಟಾರ್ ಯಾಕೆ ಎಂಬುದು ಸದ್ಯದ ಪ್ರಶ್ನೆ.
ಅಂದಹಾಗೆ ಈ ಪ್ರಶ್ನೆ ಮಾಡಿದವರ ಕಳಕಳಿ, ಟೀಂ ಇಂಡಿಯಾವನ್ನು ದೂಷಿಸುವುದಾಗಲಿ, ಟೀಕಿಸುವುದಾಗಲಿ ಅಲ್ಲ. ಬದಲಾಗಿ ಒಡಿಐ ಜೆರ್ಸಿಯಲ್ಲಿ ಮೂರನೇ ಸ್ಟಾರ್ ಯಾಕೆ ಇದೆ ಎಂದು ಯಾರಿಗಾದರೂ ತಿಳಿದಿದ್ದರೆ ತಿಳಿಸಿ ಎಂಬುದಾಗಿದೆ.
ಒಂದು ವೇಳೆ ಚಾಂಪಿಯನ್ಸ್ ಟ್ರೋಫಿಯನ್ನು ಪರಿಗಣನೆಗೆ ತೆಗೆದುಕೊಂಡರೆ, 4 ಸ್ಟಾರ್ʼಗಳು ಇರಬೇಕು. ಏಕೆಂದರೆ ಭಾರತ ಎರಡು ಬಾರಿ ಟ್ರೋಫಿ ಗೆದ್ದಿದೆ. ಸದ್ಯ ಇದು ಹಾಟ್ ಟಾಪಿಕ್ ಆಗಿದ್ದು. ಈ ವಿಷಯದ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.