Sanju Samson Fails Again: ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಮತ್ತೊಂದು ಅವಕಾಶವನ್ನು ಸದುಪಯೋಗ ಪಡಸಿಕೊಳ್ಳದೆ ವ್ಯರ್ಥ ಮಾಡಿದ್ದಾರೆ. ಸತತ ಎರಡನೇ ಪಂದ್ಯದಲ್ಲೂ ಅವರು ಡಕ್ ಆಗುವ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧದ ಎರಡನೇ ಟಿ20ಯಲ್ಲಿ ಗೋಲ್ಡನ್ ಡಕ್ ಔಟ್ ಆಗುವ ಮೂಲಕ ಫೀಲ್ಡ್ನಿಂದ ಹೊರನಡೆದಿದ್ದ ಸಂಜು ಸ್ಯಾಮ್ಸನ್ ಮೂರನೇ ಟಿ20ಯಲ್ಲಿಯೂ ಯಾವುದೇ ರನ್ ಗಳಿಸದೇ ಹಿಂತಿರುಗಿದರು.
ಎರಡನೇ ಟಿ20ಯಲ್ಲಿ ಶುಭಮನ್ ಗಿಲ್ ಬದಲಿಗೆ ಓಪನರ್ ಆಗಿ ಕಣಕ್ಕೆ ಇಳಿದ ಸಂಜು ಸ್ಯಾಮ್ಸನ್ ಕಳೆದ ಪಂದ್ಯದಲ್ಲಿ ರಿಷಬ್ ಪಂತ್ ಬದಲಿಗೆ ತಂಡಕ್ಕೆ ಬಂದು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಆರಂಭಿಸಿದ್ದರು. ಆದರೆ ಚಮಿಂದು ವಿಕ್ರಮಸಿಂಘೆ ಬೌಲಿಂಗ್ ನಲ್ಲಿ ಹಸರಂಗಾಗೆ ಕ್ಯಾಚ್ ನೀಡಿ ಪೆವಿಲಿಯನ್ಗೆ ತೆರಳಿದರು.
ಸಂಜು ಸ್ಯಾಮ್ಸನ್ ಎರಡು ಅವಕಾಶಗಳನ್ನು ಕೈಚೆಲ್ಲಿರುವ ವೈಫಲ್ಯದ ಬಗ್ಗೆ ಅಭಿಮಾನಿಗಳು ಕೋಪಗೊಂಡಿದ್ದಾರೆ. ಯಾರೊಬ್ಬರೂ ಸ್ಯಾಮ್ಸನ್ನನ್ನು ಉಳಿಸಲು ಸಾಧ್ಯವಿಲ್ಲ ಮತ್ತು ಅವರ ವೃತ್ತಿಜೀವನ ಆರಂಭಕ್ಕೂ ಮುನ್ನವೇ ಅಂತ್ಯವಾಗಲಿದೆ ಎಂದು ಸಂಜು ಅಭಿಮಾನಿಗಳುಚರ್ಚೆ ಶುರು ಮಾಡಿದ್ದಾರೆ.
ಇದನ್ನೂ ಓದಿ: ಕೈತಪ್ಪಿದ ಒಲಂಪಿಕ್ ಪದಕ..1 ಅಂಕ, 1 ಸೆಕೆಂಡ್ನಲ್ಲಿ ನುಚ್ಚುನೂರಾದ ಸಾವಿರ ಅಭಿಮಾನಿಗಳ ಕನಸು..!
ಒಂದೆಡೆ ರಿಷಬ್ ಪಂತ್ ರೀ ಎಂಟ್ರಿ, ಇನ್ನೊಂದೆಡೆ ಧ್ರುವ್ ಜುರೆಲ್ ಹಾಗೂ ಜಿತೇಶ್ ಶರ್ಮಾ ಜೊತೆ ಪೈಪೋಟಿ ಮಧ್ಯದಲ್ಲಿ ರಿಯಾನ್ ಪರಾಗ್ ಆಲ್ ರೌಂಡರ್ ಆಗಿ ಬೆಳೆಯುತ್ತಿದ್ದಂತೆ ತಂಡದಲ್ಲಿ ಸಂಜು ಸ್ಯಾಮ್ಸನ್ ಹಾದಿ ಮುಚ್ಚಿದಂತಾಗಿದೆ. ವಿಕೆಟ್ ಕೀಪರ್ ಆಗಿ ಅಲ್ಲದಿದ್ದರೂ, ಟಿ20 ಗೆ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ ಬದಲಿಗೆ ಸಂಜು ಸ್ಯಾಮ್ಸನ್ಗೆ ಅವಕಾಶ ಸಿಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅವರ ಕಳಪೆ ಪ್ರದರ್ಶನದಿಂದ ಟೀಂ ಇಂಡಿಯಾವನ್ನು ಕಳಪೆ ಮಾಡಲಿದೆ ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ, ಮಂಗಳವಾರನಡೆದ ಕೊನೆ ಟಿ20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಟೀಂ ಇಂಡಿಯಾ 48 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಯಶಸ್ವಿ ಜೈಸ್ವಾಲ್(10), ಸಂಜು ಸ್ಯಾಮ್ಸನ್(0), ರಿಂಕು ಸಿಂಗ್(1), ಸೂರ್ಯಕುಮಾರ್ ಯಾದವ್(8) ಮತ್ತು ಶಿವಂ ದುಬೆ(13) ದಯನೀಯವಾಗಿ ವಿಫಲರಾದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ