ವಿಶ್ವಕಪ್ ನಲ್ಲಿ ಸಚಿನ್ ತೆಂಡೂಲ್ಕರ್ ನಿರ್ವಹಿಸುತ್ತಾರೆ ಈ ಹುದ್ದೆ...!

ಭಾರತದ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಇಂಗ್ಲೆಂಡ್ ನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ಈ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.ಗುರುವಾರದಂದು ಇಂಗ್ಲೆಂಡಿನ ವೇಲ್ಸ್ ನಲ್ಲಿ ವಿಶ್ವಕಪ್ ಟೂರ್ನಿ ಪ್ರಾರಂಭವಾಗಲಿದೆ.

Last Updated : May 30, 2019, 01:10 PM IST
ವಿಶ್ವಕಪ್ ನಲ್ಲಿ ಸಚಿನ್ ತೆಂಡೂಲ್ಕರ್ ನಿರ್ವಹಿಸುತ್ತಾರೆ ಈ ಹುದ್ದೆ...!  title=
file photo

ನವದೆಹಲಿ: ಭಾರತದ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಇಂಗ್ಲೆಂಡ್ ನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ಈ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.ಗುರುವಾರದಂದು ಇಂಗ್ಲೆಂಡಿನ ವೇಲ್ಸ್ ನಲ್ಲಿ ವಿಶ್ವಕಪ್ ಟೂರ್ನಿ ಪ್ರಾರಂಭವಾಗಲಿದೆ.

ಲಂಡನ್ನಿನ ಓವೆಲ್ ಮೈದಾನ್ ದಲ್ಲಿ ಪ್ರಾರಂಭವಾಗಲಿರುವ ದಕ್ಷಿಣ ಆಫ್ರಿಕಾ- ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ  ಅವರು ಕಾಮೆಂಟರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗಿದೆ.1:30 ಕ್ಕೆ ಸಚಿನ್ ತಮ್ಮದೇ ಹೆಸರಿನಲ್ಲಿ 'Sachin Opens Again' ಎನ್ನುವ ಕಾರ್ಯಕ್ರಮದಲ್ಲಿ ಕ್ರಿಕೆಟ್ ಪರಿಣಿತರೊಂದಿಗೆ ಭಾಗವಹಿಸಿ ಕ್ರಿಕೆಟ್ ಬಗ್ಗೆ ವಿಶ್ಲೇಷಣೆ ನಡೆಸಲಿದ್ದಾರೆ ಎನ್ನಲಾಗಿದೆ.

ಸಚಿನ್ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಕಾಲಾವಧಿಯಲ್ಲಿ ಇದುವರೆಗೆ ಆರು ವಿಶ್ವಕಪ್ ಆವೃತ್ತಿಗಳಲ್ಲಿ ಆಡುವುದರ ಮೂಲಕ 2,278 ರನ್ಗಳನ್ನು ಗಳಿಸಿದ್ದಾರೆ. 2003 ರಲ್ಲಿ 11 ಪಂದ್ಯಗಳಲ್ಲಿ 673 ವಿಶ್ವಕಪ್ನ ಏಕೈಕ ಆವೃತ್ತಿಯಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆಯನ್ನು ಸಹ ಹೊಂದಿದ್ದಾರೆ. ಇನ್ನು 24 ವರ್ಷಗಳ ವೃತ್ತಿಜೀವನದಲ್ಲಿ  34,357 ರನ್ ಗಳಿಸಿದ್ದಾರೆ.

1989 ರಲ್ಲಿ 16 ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪಾದಾರ್ಪಣೆ ಮಾಡಿದ ಸಚಿನ್ ತೆಂಡುಲ್ಕರ್ ಟೆಸ್ಟ್ ಪಂದ್ಯಗಳಲ್ಲಿ 15,921 ರನ್ಗಳು ಮತ್ತು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 18,426 ರನ್ ಗಳಿಸಿದ್ದಾರೆ.ಎಲ್ಲಾ ಮಾದರಿಯ  ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 30,000 ಕ್ಕಿಂತ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರ ಎನ್ನುವ ಖ್ಯಾತಿಯನ್ನು ಸಚಿನ್ ಹೊಂದಿದ್ದಾರೆ.

ಟೆಸ್ಟ್ (51) ಮತ್ತು ಏಕದಿನ (49) ಎರಡರಲ್ಲೂ ಅತ್ಯಧಿಕ ಶತಕಗಳನ್ನು ಗಳಿಸಿದ ಸಚಿನ್, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಶತಕಗಳನ್ನು ಗಳಿಸಿದ ಏಕೈಕ ವ್ಯಕ್ತಿ.ಇದಲ್ಲದೆ, ಏಕದಿನ ಪಂದ್ಯದಲ್ಲಿ ದ್ವಿಶತಕವನ್ನು ಗಳಿಸಿದ ಮೊದಲ ಆಟಗಾರ ಎನ್ನುವ ಶ್ರೇಯವನ್ನು ಅವರು ಹೊಂದಿದ್ದಾರೆ.

Trending News