Rohit Sharma : MI ನಾಯಕತ್ವದಿಂದ ರೋಹಿತ್ ಶರ್ಮಾ ಹೊರ ಬರಲು ಕ್ರಿಕೆಟ್‌ ಗಾಡ್‌ ಸಚಿನ್‌ ಕಾರಣವೇ..? 

Rohit Sharma and Sachin Tendulkar : MI ತಂಡದ ನಾಯಕತ್ವದಿಂದ ರೋಹಿತ್‌ ಶರ್ಮಾ ಅವರನ್ನು ತೆಗೆದುಹಾಕಲಾಗಿದೆ. ಹಾರ್ದಿಕ್ ಪಾಂಡ್ಯ ಅವರನ್ನು ನೂತನ ನಾಯಕರನ್ನಾಗಿ ನೇಮಿಸಲಾಗಿದೆ. ಇದೇ ವಿಚಾರವಾಗಿ ಇದೀಗ ಹೊಸ ಮಾತೊಂದು ಕೇಳಿ ಬಂದಿದೆ. ರೋಹಿತ್‌ ಮುಂಬೈ ಇಂಡಿಯನ್ಸ್‌ ಟೀಮ್‌ ತೊರೆಯಲು ಕಾರಣ ಸಚಿನ್‌ ತೆಂಡಲ್ಕೂರ್‌ ಎಂದು ಹೇಳಲಾಗುತ್ತಿದೆ.. ಅದಕ್ಕೆ ಬಲವಾದ ಕಾರಣಗಳಿವೆ..

Written by - Krishna N K | Last Updated : Mar 19, 2024, 01:30 PM IST
  • MI ತಂಡದ ನಾಯಕತ್ವದಿಂದ ರೋಹಿತ್‌ ಶರ್ಮಾ ಔಟ್‌.
  • ಈ ಕುರಿತು ಕುತೂಹಲಕಾರಿ ಅಂಶವೊಂದು ಬೆಳಕಿಗೆ ಬಂದಿದೆ.
  • ರೋಹಿತ್‌ ಕ್ಯಾಪ್ಟಸ್ಸಿಯಿಂದ ಹೊರ ಬರಲು ಸಚಿನ್ ತೆಂಡೂಲ್ಕರ್ ಕಾರಣ.
Rohit Sharma : MI ನಾಯಕತ್ವದಿಂದ ರೋಹಿತ್ ಶರ್ಮಾ ಹೊರ ಬರಲು ಕ್ರಿಕೆಟ್‌ ಗಾಡ್‌ ಸಚಿನ್‌ ಕಾರಣವೇ..?  title=
rohit sharma

Rohit Sharma : ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾ ಅವರನ್ನು ವಜಾಗೊಳಿಸಲಾಗಿದೆ. ಈ ಕುರಿತು ಕುತೂಹಲಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ರೋಹಿತ್‌ ಕ್ಯಾಪ್ಟಸ್ಸಿಯಿಂದ ಹೊರ ಬರಲು ಕ್ರಿಕೆಟ್‌ ಗಾಡ್‌ ಸಚಿನ್ ತೆಂಡೂಲ್ಕರ್ ಕಾರಣ ಎಂದು ಹೇಳಲಾಗುತ್ತಿದೆ. ಈ ಕುರಿತ ವರದಿ ಇಲ್ಲಿದೆ ನೋಡಿ..

ಹೌದು.. MI ತಂಡದ ನಾಯಕತ್ವದಿಂದ ರೋಹಿತ್‌ ಶರ್ಮಾ ಅವರನ್ನು ತೆಗೆದುಹಾಕಲಾಗಿದೆ. ಹಾರ್ದಿಕ್ ಪಾಂಡ್ಯ ಅವರನ್ನು ನೂತನ ನಾಯಕರನ್ನಾಗಿ ನೇಮಿಸಲಾಗಿದೆ. 5 ಬಾರಿ ತಂಡದ ಗೆಲುವಿಗೆ ಕಾರಣವಾಗಿದ್ದ, ನಾಯಕನ ಹಠಾತ್ ಬದಲಾವಣೆ ಹಿಟ್‌ ಮ್ಯಾನ್‌ ಅಭಿಮಾನಿಗಳಿಗೆ ಶಾಕ್‌ ನೀಡಿತ್ತು.

ಇದನ್ನೂ ಓದಿ:CSK vs RCB ಮ್ಯಾಚ್‌..! ಧೋನಿ ಪಡೆ ಸಹಾಯ ಕೇಳಿದ ಕ್ರಿಕೆಟಿಗ ಆರ್‌. ಅಶ್ವಿನ್‌..!

ರೋಹಿತ್ ಶರ್ಮಾ ಅತ್ಯುತ್ತಮ ನಾಯಕನಾಗಿದ್ದರೂ, ತಂಡದ ಭವಿಷ್ಯವನ್ನು ಪರಿಗಣಿಸಿ ಈ ಬದಲಾವಣೆ ಮಾಡಲಾಗಿದೆ ಎಂದು ಮುಂಬೈ ಇಂಡಿಯನ್ಸ್ ವಿವರಿಸಿದೆ. ಆದರೆ ರೋಹಿತ್ ಶರ್ಮಾ ಅವರನ್ನು ನಾಯಕ ಸ್ಥಾನದಿಂದ ವಜಾಗೊಳಿಸಿರುವುದರ ಹಿಂದೆ ಸಚಿನ್ ತೆಂಡೂಲ್ಕರ್ ಕೈವಾಡವಿದೆ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

ಸಚಿನ್ ತೆಂಡೂಲ್ಕರ್ ಮತ್ತು ರೋಹಿತ್ ಶರ್ಮಾ ನಡುವೆ ಕಳೆದ 2 ವರ್ಷಗಳಿಂದ ಭಿನ್ನಾಭಿಪ್ರಾಯವಿದೆ. ಇದಕ್ಕೆ ಕಾರಣ, ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಅರ್ಜುನ್ ತೆಂಡೂಲ್ಕರ್‌ಗೆ ರೋಹಿತ್ ಅವಕಾಶ ನೀಡಲಿಲ್ಲ. ಇದರಿಂದ ಕೋಪಗೊಂಡಿದ್ದ ಅರ್ಜುನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣದಲ್ಲಿ ರೋಹಿತ್ ಶರ್ಮಾ ವಿರುದ್ಧ ವಾಗ್ದಾಳಿ ನಡೆಸಿದರು. 

ಇದನ್ನೂ ಓದಿ:ಸ್ಮೃತಿ ಮಂದಾನ ಬಾಯ್‌ ಫ್ರೆಂಡ್ ಪಲಾಶ್ ಮುಚ್ಚಲ್ ಯಾರು.. ಎಷ್ಟು ಕೋಟಿಯ ಒಡೆಯ ಗೊತ್ತೇ!

ಅಲ್ಲದೆ, ಕಳೆದ ಎರಡು ವರ್ಷಗಳಿಂದ ರೋಹಿತ್ ಶರ್ಮಾ ಅವರು ಶತಕ ಬಾರಿಸಿದಾಗ ಮತ್ತು ವಿವಿಧ ಸಾಧನೆಗಳನ್ನು ಮಾಡಿದಾಗ ಸಚಿನ್ ತೆಂಡೂಲ್ಕರ್ ಅಭಿನಂದಿಸಿಲ್ಲ. ಕ್ರಿಕೆಟ್‌ಗೆ ಸಂಬಂಧಿಸಿದ ವಿಷಯಗಳಲ್ಲಿ ಯಾವಾಗಲೂ ಅಪ್‌ಡೇಟ್ ಆಗಿರುವ ಸಚಿನ್, ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧ 51, ಪಾಕಿಸ್ತಾನ ವಿರುದ್ಧ 86, ಇಂಗ್ಲೆಂಡ್ ವಿರುದ್ಧ 87 ಮತ್ತು ಅಫ್ಘಾನಿಸ್ತಾನ ವಿರುದ್ಧ 133 ರನ್ ಗಳಿಸಿದಾಗ ಒಂದು ವಿಶ್‌ ಸಹ ಮಾಡಲಿಲ್ಲ. ವಿರಾಟ್ ಕೊಹ್ಲಿ ಮತ್ತು ಸಬ್ಮನ್ ಗಿಲ್ ಸೇರಿದಂತೆ ಇತರೆ ಆಟಗಾರರನ್ನು ಹೊಗಳುತ್ತಾರೆ.

ಇದರಿಂದಾಗಿ ಇಬ್ಬರ ನಡುವೆ ಎನೂ ಸರಿಯಿಲ್ಲ ಎನ್ನುವುದು ಅರ್ಥವಾಗುತ್ತದೆ. ಅಲ್ಲದೆ, ಇವು ಆಕಸ್ಮಿಕವಾಗಿ ನಡೆದಂತೆ ಕಾಣುತ್ತಿಲ್ಲ. ಸಚಿನ್ ಉದ್ದೇಶಪೂರ್ವಕವಾಗಿ ರೋಹಿತ್ ಶರ್ಮಾ ಅವರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ತೋರುತ್ತದೆ. ಅಂದಹಾಗೆ, ಅರ್ಜುನ್ ತೆಂಡೂಲ್ಕರ್ ಇನ್‌ಸ್ಟಾಗ್ರಾಮ್‌ನಲ್ಲಿ ಹಾರ್ದಿಕ್ ಪಾಂಡ್ಯ ಸೇರಿದಂತೆ 530 ಜನರನ್ನು ಫಾಲೋ ಮಾಡುತ್ತಾರೆ, ರೋಹಿತ್ ಶರ್ಮಾ ಬಿಟ್ಟಿದ್ದಾರೆ.

ಇದನ್ನೂ ಓದಿ: RCB : ಕಿಂಗ್‌‌ ಕೊಹ್ಲಿ ದಾಖಲೆ ಮುರಿದ RCBಯ ಆ ಒಂದು ಪೋಸ್ಟ್‌..!

ಇವೇಲ್ಲ ಘಟನೆಗಳಿಂದಾಗಿ ಬಹುಶಃ ರೋಹಿತ್ ಅವರನ್ನು ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ತೆಗೆದುಹಾರುವ ನಿರ್ಧಾರಹಿಂದೆ ಸಚಿನ್‌ ತೆಂಡಲ್ಕೂರ್‌ ಇದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಈ ಕುರಿತು ಯಾವುದೇ ಅಧಿಕೃತವಾದ ಹೇಳಿಕೆ, ಮಾಹಿತಿ ಇಲ್ಲ. ಇದು ಎಲ್ಲಿಗೆ ಬಂತು ನಿಲ್ಲುತ್ತೆ ಆಂತ ಕಾಯ್ದು ನೋಡಬೇಕಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News