RR Vs LSG : ಸ್ಯಾಮ್ಸನ್ ರೋಚಕ ಆಟ, ಲಖ್ನೌಗೆ 194 ರನ್ ಗಳ ಗುರಿ ನೀಡಿದ ರಾಜಸ್ಥಾನ್

RR Vs LSG : ಮಾರ್ಚ್ 24 ರಂದು ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ IPL 4ನೇ ಪಂದ್ಯ ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ  ನಡೆಯುತ್ತಿದ್ದು, ರಾಜಸ್ಥಾನ್ ರಾಯಲ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ಗೆ 194 ರನ್ ಗಳ ಗೆಲುವಿನ ಗುರಿ ನೀಡಿದೆ.

Written by - Zee Kannada News Desk | Last Updated : Mar 24, 2024, 05:58 PM IST
  • ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು, ಬ್ಯಾಟಿಂಗ್ ಆಯ್ದು ಕೊಂಡಿತು.
  • 52 ಎಸೆತಗಳಲ್ಲಿ 82 ರನ್ ಗಳಿಸಿದ ಸಂಜು ಸ್ಯಾಮ್ಸನ್ 6 ಸಿಕ್ಸ್, 3 ಫೋರ್ ಗಳಿಸಿ 194 ರನ್ ಗಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು.
  • ನವೀನ್ ಉಲ್ ಹಕ್ 2 ವಿಕೆಟ್, ರವಿ ಬಿಷ್ಣೋಯ, ಮೊಹ್ಸಿನ್ ಖಾನ್ ತಲಾ 1 ವಿಕೆಟ್ ಪಡೆದುಕೊಂಡರು.
RR Vs LSG : ಸ್ಯಾಮ್ಸನ್ ರೋಚಕ ಆಟ, ಲಖ್ನೌಗೆ 194 ರನ್ ಗಳ ಗುರಿ ನೀಡಿದ ರಾಜಸ್ಥಾನ್ title=

Rajasthan Royals :  ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್‌ನ 4 ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡವು ಕೆಎಲ್ ರಾಹುಲ್ ಅವರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯ ಪ್ರಾರಂಭವಾಗಿ, 

ರಾಜಸ್ಥಾನ್ ರಾಯಲ್ಸ್  ಟಾಸ್ ಗೆದ್ದು, ಬ್ಯಾಟಿಂಗ್ ಆಯ್ದು ಕೊಂಡಿತು. 

ಇದನ್ನುಓದಿ :  SSE Side-B : ಸಪ್ತ ಸಾಗರದಾಚೆ ಎಲ್ಲೋ ಸೈಡ್-ಬಿ : ಇಂದು ಸಂಜೆ 7.30ಕ್ಕೆ ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ

ಮೊದಲ ಇನ್ನಿಂಗ್ಸ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಕಣಕ್ಕಿಳಿದು ಯಶಸ್ವಿ ಜೈಸ್ವಾಲ್ 24(12), ಜೋಸ್ ಬಟ್ಲರ್11(9), ಸಂಜು ಸ್ಯಾಮ್ಸನ್82(52), ರಿಯಾನ್ ಪರಾಗ್43(29) ಶಿಮ್ರಾನ್ ಹೆಟ್ಮೆಯರ್ 5(7), ಧ್ರುವ್ ಜುರೆಲ್ 20(12) ರನ್ ಗಳಿಸಿದರು. 

 52 ಎಸೆತಗಳಲ್ಲಿ 82 ರನ್ ಗಳಿಸಿದ ಸಂಜು ಸ್ಯಾಮ್ಸನ್ 6 ಸಿಕ್ಸ್, 3 ಫೋರ್ ಗಳಿಸಿ 194 ರನ್ ಗಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು. 

ಇದಕ್ಕೆ ವಿರುದ್ಧವಾಗಿ  ಲಕ್ನೋ ಸೂಪರ್ ಜೈಂಟ್ಸ್ ತಂಡ ಬೌಲಿಂಗ್ ನಲ್ಲಿ ನವೀನ್ ಉಲ್ ಹಕ್ 2 ವಿಕೆಟ್, ರವಿ ಬಿಷ್ಣೋಯ, ಮೊಹ್ಸಿನ್ ಖಾನ್ ತಲಾ 1 ವಿಕೆಟ್ ಪಡೆದುಕೊಂಡರು. 

ಇದನ್ನುಓದಿ :  Priyamani : ಪೌರಾಣಿಕ ಕಾಲದವರಂತೆ ಸೀರೆ ಉಟ್ಟ ಪ್ರಿಯಾಮಣಿ, ದೈವಿಕ ಕಳೆ ಎಂದ ನೆಟ್ಟಿಗರು : ಫೋಟೋಸ್ ಇಲ್ಲಿವೆ

ಒಟ್ಟಾರೆಯಾಗಿ ಮೊದಲ ಇನ್ನಿಂಗ್ಸ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 194ರನ್ ಗಳ ಗೆಲುವಿನ ಗುರಿಯನ್ನು ನೀಡಿದ್ದು,  ಕೆಎಲ್ ರಾಹುಲ್ ನಾಯ್ಕತ್ವದ ಲಕ್ನೋ ಸೂಪರ್ ಜೈಂಟ್ಸ್ ಎರಡನೇ ಇನಿಂಗ್ಸ್ ನಲ್ಲಿ ಕಣಕ್ಕಿಳಿದಿದೆ. 

ಗೆಲುವು ಯಾರದೂ ಎನ್ನುವುದು ಕಾದು ನೋಡಬೇಕಿದೆ ಅಷ್ಟೇ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News