RCB Twitter Account Hacked: ಆರ್‌ಸಿಬಿ ಅಧಿಕೃತ ಟ್ವಿಟರ್‌ ಖಾತೆ ಹ್ಯಾಕ್‌

RCB Twitter Account Hacked: ಜನವರಿ 21 (ಶನಿವಾರ) ಬೆಳಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. 

Written by - Chetana Devarmani | Last Updated : Jan 21, 2023, 11:41 AM IST
  • ಆರ್‌ಸಿಬಿ ಅಧಿಕೃತ ಟ್ವಿಟರ್‌ ಖಾತೆ ಹ್ಯಾಕ್‌
  • ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯಾ?
  • ಪ್ರೊಫೈಲ್ ಮರುನಾಮಕರಣ, NFT ಗಳಿಗೆ ಸಂಬಂಧಿಸಿದ ಟ್ವೀಟ್‌!!
RCB Twitter Account Hacked: ಆರ್‌ಸಿಬಿ ಅಧಿಕೃತ ಟ್ವಿಟರ್‌ ಖಾತೆ ಹ್ಯಾಕ್‌  title=
RCB Twitter Account Hacked

RCB Twitter Account Hacked: ಜನವರಿ 21 (ಶನಿವಾರ) ಬೆಳಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಹ್ಯಾಕರ್ ಪ್ರೊಫೈಲ್ ಅನ್ನು 'ಬೋರ್ಡ್ ಆಪ್ ಯಾಚ್ ಕ್ಲಬ್' ಎಂದು ಮರುನಾಮಕರಣ ಮಾಡಿದ್ದಾರೆ. ಅಲ್ಲದೇ NFT ಗಳಿಗೆ ಸಂಬಂಧಿಸಿದ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಇತರ ಪ್ರೊಫೈಲ್‌ಗಳಿಂದ ಅವುಗಳನ್ನು ಮರುಟ್ವೀಟ್ ಮಾಡಿದ್ದಾರೆ. ಈ ಎಲ್ಲ ಅಂಶಗಳು RCB ಟ್ವಿಟರ್‌ ಅಕೌಂಟ್‌ ಹ್ಯಾಕ್‌ ಆಗಿದೆ ಎಂಬುದಕ್ಕೆ ಉದಾಹರಣೆಯಾಗಿವೆ. 

ಇದನ್ನೂ ಓದಿ : 2023 ರ ಐಪಿಎಲ್ ಗೆ ಮರಳಲಿದ್ದಾರೆ ರಿಷಬ್ ಪಂತ್ : ಕೋಚ್ ರಿಕಿ ಪಾಂಟಿಂಗ್

 

 

ಅಭಿಮಾನಿಗಳು ಮತ್ತು ಇತರ ಟ್ವಿಟರ್ ಬಳಕೆದಾರರು RCB ಖಾತೆಯನ್ನು ಹ್ಯಾಕ್ ಮಾಡಿರುವುದನ್ನು ತಕ್ಷಣವೇ ಗಮನಿಸಿದರು. ಸದ್ಯಕ್ಕೆ, RCB ತನ್ನ ಪ್ರೊಫೈಲ್‌ನಿಂದ ಅನಗತ್ಯ ವಿಷಯವನ್ನು ಅಳಿಸಲು ಇನ್ನೂ ಸಾಧ್ಯವಾಗಿಲ್ಲ. ಕುತೂಹಲಕಾರಿಯಾಗಿ, RCB ತನ್ನ ಖಾತೆಗೆ ಧಕ್ಕೆಯಾದಾಗ ಪ್ರಚಾರದ ವಿಡಿಯೋವನ್ನು ಪೋಸ್ಟ್ ಮಾಡಿದೆ.

RCB Twitter Account Hacked

 

RCB Twitter Account Hacked

ಆರ್‌ಸಿಬಿಯ ಟ್ವಿಟರ್‌ ಅಕೌಂಟ್‌ ಹ್ಯಾಕ್‌ ಆಗಿದ್ದನ್ನು ಗಮನಿಸಿದ ಇತರ ಟ್ವಿಟರ್‌ ಬಳಕೆದಾರರು ಈ ಬಗ್ಗೆ ತಾವು ಸಹ ಟ್ವೀಟ್‌ ಮಾಡಿದ್ದಾರೆ. ಅಲ್ಲದೇ ಅನೇಕರು ಆರ್‌ಸಿಬಿ ಟ್ಟಿಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಲಾದ ಅನಗತ್ಯ ವಿಚಾರಗಳನ್ನು ಸ್ಕ್ರೀನ್‌ಶಾಟ್‌ ತೆಗೆದು ಶೇರ್‌ ಮಾಡಿದ್ದಾರೆ. 

ಇದನ್ನೂ ಓದಿ : IND vs NZ : ಇಂದು ನಾಯಕ ರೋಹಿತ್ ಮುಂದಿವೆ ಈ ಸವಾಲು, 2 ತಪ್ಪು ಸರಣಿ ಗೆಲ್ಲುವ ಕನಸನ್ನೇ ಮುರಿಯಬಹುದು.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News