ಇಂಗ್ಲೆಂಡ್ ಪ್ರವಾಸಕ್ಕೂ ಮೊದಲು ಗಲ್ಲಿ ಕ್ರಿಕೆಟ್ ಆಡಿದ ರೋಹಿತ್ ಶರ್ಮಾ...!

Written by - Zee Kannada News Desk | Last Updated : Jun 16, 2022, 07:05 PM IST
  • ಈ ಟೆಸ್ಟ್ ಪಂದ್ಯದ ನಂತರ ಭಾರತವು ಇಂಗ್ಲೆಂಡ್ ವಿರುದ್ಧ ತಲಾ ಮೂರು ಏಕದಿನ ಪಂದ್ಯ ಹಾಗೂ ಮೂರು ಟಿ 20 ಪಂದ್ಯಗಳನ್ನು ಆಡಲಿದೆ.
ಇಂಗ್ಲೆಂಡ್ ಪ್ರವಾಸಕ್ಕೂ ಮೊದಲು ಗಲ್ಲಿ ಕ್ರಿಕೆಟ್ ಆಡಿದ ರೋಹಿತ್ ಶರ್ಮಾ...! title=
file photo

 

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಪ್ರವಾಸಕ್ಕೂ ಮೊದಲು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಗಲ್ಲಿ ಕ್ರಿಕೆಟ್ ನಲ್ಲಿ ಆಡುವ ಮೂಲಕ ಗಮನ ಸೆಳೆಯಲಿದ್ದಾರೆ.ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಮುಂದಿನ ತಿಂಗಳಿನಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು ಗೆಲ್ಲುವಂತೆ ಮಾಡುವುದು ರೋಹಿತ್ ಶರ್ಮಾ ಅವರ ಮೊದಲ ಗುರಿಯಾಗಿದೆ.ಈ ಹಿನ್ನೆಲೆಯಲ್ಲಿ ಈಗ ಗಲ್ಲಿ ಕ್ರಿಕೆಟ್ ಆಡುವ ಮೂಲಕ ಅವರು ರಿಲಾಕ್ಸ್ ಮಾಡಿಕೊಳ್ಳುವಲ್ಲಿ ಮುಂದಾಗಿದ್ದಾರೆ.

ಇದನ್ನೂ ಓದಿ: ನಟಿ ಚೇತನಾ ರಾಜ್ ಸಾವು ಪ್ರಕರಣ: ಶೆಟ್ಟೀಸ್ ಆಸ್ಪತ್ರೆಗೆ ಬೀಗ ಜಡಿದ ಆರೋಗ್ಯ ಇಲಾಖೆ

ಕಳೆದ ವರ್ಷ ಭಾರತೀಯ ಕ್ಯಾಂಪ್ ನಲ್ಲಿ ಕೆಲವು ಕರೋನವೈರಸ್ ಪ್ರಕರಣಗಳು ಕಂಡುಬಂದ ನಂತರ ಐದನೇ ಟೆಸ್ಟ್ ಅನ್ನು ರದ್ದುಗೊಳಿಸಲಾಯಿತು.ಹಾಗಾಗಿ ಐದನೇ ಮತ್ತು ಕೊನೆಯ ಮರು ನಿಗದಿಪಡಿಸಿದ ಟೆಸ್ಟ್ ಪಂದ್ಯವು ಜುಲೈ 1 ರಿಂದ ಇಂಗ್ಲೆಂಡ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯಲಿದೆ.ಈಗಾಗಲೇ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 2-1 ರ ಅಂತರದಲ್ಲಿ ಮುನ್ನಡೆಯನ್ನು ಸಾಧಿಸಿದೆ,ಒಂದು ವೇಳೆ ಸೋಲನ್ನು ಅನುಭವಿಸಿದರೆ ಸರಣಿ ಸಮವಾಗುತ್ತದೆ.ಹಾಗಾಗಿ ಈಗ ಈ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಡ್ರಾ ಇಲ್ಲವೇ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ಟೆಸ್ಟ್ ಪಂದ್ಯದ ನಂತರ ಭಾರತವು ಇಂಗ್ಲೆಂಡ್ ವಿರುದ್ಧ ತಲಾ ಮೂರು ಏಕದಿನ ಪಂದ್ಯ ಹಾಗೂ ಮೂರು ಟಿ 20 ಪಂದ್ಯಗಳನ್ನು ಆಡಲಿದೆ.

ಇದನ್ನೂ ಓದಿ: ʼಸೋರುತಿಹುದು ಮನಿಯ ಮಾಳಿಗೆʼ ಎನ್ನುತ್ತಾ ಹವಾ ಸೃಷ್ಟಿಸೋಕೆ ಬಂದ್ರು ALL OK

ಇನ್ನೊಂದೆಡೆಗೆ ಈಗ ಭಾರತೀಯ ತಂಡದ ನಾಯಕನಾಗಿ ತಂಡವನ್ನು ಗೆಲುವಿನ ಹಾದಿಗೆ ಮರಳುವಂತೆ ಮಾಡುವುದು ರೋಹಿತ್ ಶರ್ಮಾ ಅವರ ಗುರಿಯಾಗಿದೆ.ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್  ತಂಡವು ನಿರಸ ಪ್ರದರ್ಶನದಿಂದಾಗಿ ಪ್ಲೇ ಆಫ್ ಪಡೆಯಲು ವಿಫಲವಾಗಿತ್ತು, ಈಗ ಅವರು ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಂಡಿರುವುದರಿಂದ ಈಗ ಹೊಸತನದೊಂದಿಗೆ ತಂಡವನ್ನು ಮುನ್ನಡೆಸಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

,
 

Trending News