IND vs NZ 3rd ODI : ಅಬ್ಬರಿಸಿ ಬೊಬ್ಬಿರಿದ ರೋಹಿತ್- ಗಿಲ್‌... ನ್ಯೂಜಿಲೆಂಡ್‌ಗೆ 386 ರನ್‌ಗಳ ಗುರಿ..!

ಇಂದೋರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಸರಣಿಯಲ್ಲಿ ಭಾರತವು ಭಾರೀ ಮೊತ್ತವನ್ನು ಕಲೆಹಾಕುವ ಮೂಲಕ ನ್ಯೂಜಿಲೆಂಡ್‌ಗೆ ಶಾಕ್‌ ನೀಡಿದೆ. 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 385 ರನ್ ಗಳಿಸಿ ಕಿವೀಸ್ 386 ರನ್ ಗಳ ಗುರಿ ನೀಡಿದೆ. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ 85 ಎಸೆತಗಳಲ್ಲಿ 9 ಬೌಂಡರಿ, 6 ಸಿಕ್ಸರ್ ಭಾರಿಸುವ ಮೂಲಕ 101 ರನ್‌ ಗಳಿಸಿದರು. ಶುಭಮನ್ ಗಿಲ್ 78 ಎಸೆತಗಳಲ್ಲಿ 13 ಬೌಂಡರಿ, 5 ಸಿಕ್ಸರ್ ಸಿಡಿಸಿ 112 ರನ್‌ಗಳನ್ನು ಕಲೆಹಾಕಿದರು.

Written by - Krishna N K | Last Updated : Jan 24, 2023, 06:45 PM IST
  • ಮೂರನೇ ಏಕದಿನ ಸರಣಿಯಲ್ಲಿ ಭಾರತವು ಭಾರೀ ಮೊತ್ತವನ್ನು ಕಲೆಹಾಕುವ ಮೂಲಕ ನ್ಯೂಜಿಲೆಂಡ್‌ಗೆ ಶಾಕ್‌ ನೀಡಿದೆ.
  • 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 385 ರನ್ ಗಳಿಸಿ ಕಿವೀಸ್ 386 ರನ್ ಗಳ ಗುರಿ ನೀಡಿದೆ.
  • ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ, ಶುಭಮನ್ ಗಿಲ್ ಶತಕ ಬಾರಿಸಿದರು.
IND vs NZ 3rd ODI : ಅಬ್ಬರಿಸಿ ಬೊಬ್ಬಿರಿದ ರೋಹಿತ್- ಗಿಲ್‌... ನ್ಯೂಜಿಲೆಂಡ್‌ಗೆ 386 ರನ್‌ಗಳ ಗುರಿ..!  title=

IND vs NZ 3rd ODI : ಇಂದೋರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಸರಣಿಯಲ್ಲಿ ಭಾರತವು ಭಾರೀ ಮೊತ್ತವನ್ನು ಕಲೆಹಾಕುವ ಮೂಲಕ ನ್ಯೂಜಿಲೆಂಡ್‌ಗೆ ಶಾಕ್‌ ನೀಡಿದೆ. 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 385 ರನ್ ಗಳಿಸಿ ಕಿವೀಸ್ 386 ರನ್ ಗಳ ಗುರಿ ನೀಡಿದೆ. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ 85 ಎಸೆತಗಳಲ್ಲಿ 9 ಬೌಂಡರಿ, 6 ಸಿಕ್ಸರ್ ಭಾರಿಸುವ ಮೂಲಕ 101 ರನ್‌ ಗಳಿಸಿದರು. ಶುಭಮನ್ ಗಿಲ್ 78 ಎಸೆತಗಳಲ್ಲಿ 13 ಬೌಂಡರಿ, 5 ಸಿಕ್ಸರ್ ಸಿಡಿಸಿ 112 ರನ್‌ಗಳನ್ನು ಕಲೆಹಾಕಿದರು.

ಅಲ್ಲದೆ, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 38 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಭಾರಿಸುವ ಮೂಲಕ (54) ಅರ್ಧಶತಕ ಸಿಡಿಸಿದರು. ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 36 ರನ್‌ಗಳಿಗೆ ಆಟ ನಿಲ್ಲಿಸಿದರು. ಕಿವೀಸ್ ಬೌಲರ್‌ಗಳಾದ ಜಾಕೋಬ್ ಡಫಿ ಮತ್ತು ಬ್ಲೇರ್ ಟಿಕ್ನರ್ ತಲಾ ಮೂರು ವಿಕೆಟ್ ಪಡೆದರು. ನ್ಯೂಜಿಲೆಂಡ್ ನಾಯಕ ಲ್ಯಾಥಮ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಬಾಂಟಿಗ್‌ಗೆ ನೀಡಿದ ಒಳಾಂಗಣ ಪಿಚ್‌ನಲ್ಲಿ ಭಾರತದ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅಬ್ಬರಿಸಿದರು.

ಇದನ್ನೂ ಓದಿ: Rohit Sharma Century : 17 ತಿಂಗಳ ನಂತರ ಮೊದಲ ಶತಕ ಭಾರಿಸಿದ ಹಿಟ್‌ಮ್ಯಾನ್‌ ರೋಹಿತ್‌..!

ಇನಿಂಗ್ಸ್ ಆರಂಭದಿಂದಲೇ ಕಿವೀಸ್ ಬೌಲರ್‌ಗಳ ಮೇಲೆ ದಾಳಿ ನಡೆಸಿ ರನ್ ಕಲೆ ಹಾಕಿದರು. ಹಿಟ್‌ಮ್ಯಾನ್‌ ಮತ್ತು ಗಿಲ್‌ ಬೌಂಡರಿ ಮತ್ತು ಸಿಕ್ಸರ್‌ಗಳ ಹೊಡೆತಕ್ಕೆ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳ ಶಿಳ್ಳೆ ಹೊಡೆತ ಮುಗಿಲು ಮುಟ್ಟಿತ್ತು. ಬ್ಯಾಟ ಹಿಡಿದು ಅಬ್ಬರಿಸಿದ ಇಬ್ಬರು ಎರಡು ಶತಕ ಗಳಿಸಿದರು. ರೋಹಿತ್ ಮತ್ತು ಗಿಲ್ ಅವರನ್ನು ಔಟ್ ಮಾಡಲು ಕಿವೀಸ್ ಬೌಲರ್‌ಗಳು ಹರಸಾಹಸ ಪಡಬೇಕಾಯಿತು. ಶತಕಗಳ ಬಳಿಕ ಕೊನೆಗೂ ಇಬ್ಬರೂ ಪೆವಿಲಿಯನ್ ಸೇರಿದರು.

ವಿರಾಟ್ ಕೊಹ್ಲಿ (36; 27 ಎಸೆತಗಳಲ್ಲಿ 3 ಬೌಂಡರಿ, ಸಿಕ್ಸರ್) ಸ್ವಲ್ಪ ಹೊತ್ತು ಮಿಂಚಿದರೂ ದೊಡ್ಡ ಸ್ಕೋರ್ ಮಾಡಲು ಸಾಧ್ಯವಾಗಲಿಲ್ಲ. ಇಶಾನ್ ಕಿಶನ್ (17; 24 ಎಸೆತಗಳಲ್ಲಿ ಬೌಂಡರಿ, ಸಿಕ್ಸರ್), ಸೂರ್ಯಕುಮಾರ್ ಯಾದವ್ (14; 9 ಎಸೆತಗಳಲ್ಲಿ 2 ಸಿಕ್ಸರ್) ಮತ್ತು ವಾಷಿಂಗ್ಟನ್ ಸುಂದರ್ (9; 14 ಎಸೆತಗಳಲ್ಲಿ ಬೌಂಡರಿ) ನಿರಾಸೆ ಮೂಡಿಸಿದರು. ಇನಿಂಗ್ಸ್ ಅಂತ್ಯಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ (25; 17 ಎಸೆತಗಳಲ್ಲಿ 3 ಬೌಂಡರಿ, ಸಿಕ್ಸರ್) ಬ್ಯಾಟಿಂಗ್ ನೆರವಿನಿಂದ ಭಾರತ ಬೃಹತ್ ಮೊತ್ತ ಗಳಿಸಿತು. ಟೀಂ ಇಂಡಿಯಾ ಸುಲಭವಾಗಿ 400 ರನ್ ಗಳ ಮೈಲುಗಲ್ಲು ದಾಟುತ್ತದೆ ಎಂದು ಎಲ್ಲರೂ ಭಾವಿಸಿದ್ದರೂ ಅದು ಸಾಧ್ಯವಾಗಲಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News