IPL 2024 ರ 6 ನೇ ಪಂದ್ಯ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು.
ಇಂಡಿಯನ್ ಪ್ರೀಮಿಯರ್ ಲೀಗ್ 6 ನೇ ಪಂದ್ಯದಲ್ಲಿ ಸೋಮವಾರ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫ್ಯಾಟ್ ಡು ಪ್ಲೆಸಿಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು.
ಮೊದಲ ಇನ್ನಿಂಗ್ಸ್ ನಲ್ಲಿ ಕಣಕ್ಕಿಳಿದ ಪಂಜಾಬ್ ಕಿಂಗ್ಸ್ ತಂಡ ಆರಂಭಿಕ ಬ್ಯಾಟ್ಸ್ ಮ್ಯಾನ್ ಗಳಾಗಿ ಶಿಖರ್ ಧವನ್, ಜಾನಿ ಬೈಸ್ಟ್ರೋವ್ ಆಟವನ್ನು ಪ್ರಾರಂಭಿಸಿದರು. ಶಿಖರ್ ಧವನ್ 45(37), ಜಾನಿ ಬೈಸ್ಟ್ರೋವ್ 6(8), ಪ್ರಭಾಸಿಮ್ರಾನ್ ಸಿಂಗ್ 25(17), ಲಿಯಾಮ್ ಲಿವಿಂಗ್ಸ್ಟೋನ್17(13) , ಸ್ಯಾಮ್ ಕರ್ರಾನ್ 23(17), ಜಿತೇಶ್ ಶರ್ಮಾ 27 (20), ಶಶಾಂಕ್ ಸಿಂಗ್ 21(8), ಹರ್ಪ್ರೀತ್ ಬ್ರಾರ್ 2(2) ರನ್ ಗಳಿಸಿದರು.
ಇದನ್ನು ಓದಿ : ಲೂಸ್ ಮಾದಾ, ರಮ್ಯಾ ಜೋಡಿಯ ಸಿದ್ಲಿಂಗು ತೆರೆ ಕಂಡ 12 ವರ್ಷಗಳ ಬಳಿಕ, ಬರುತ್ತಿದೆ ಸಿದ್ಲಿಂಗು 2
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಬೌಲಿಂಗ್ ಪ್ರಾರಂಭಿಸಿ ಗ್ಲೆನ್ ಮ್ಯಾಕ್ಸ್ವೆಲ್ 2 , ಅಲ್ಜಾರಿ ಜೋಸೆಫ್ 1, ಮೊಹಮ್ಮದ್ ಸಿರಾಜ್ 2 , ಯಶ್ ದಯಾಳ್ 1 ವಿಕಟ್ ಗಳನ್ನು ಪಡೆದರು.
What a finish 🔥
What a chase 😎An unbeaten 48*-run partnership between @DineshKarthik and @mahipallomror36 wins it for the home team 💪@RCBTweets register a 4-wicket win!#TATAIPL | #RCBvPBKS pic.twitter.com/0BFhn9BRnC
— IndianPremierLeague (@IPL) March 25, 2024
ಪಂಜಾಬ್ ಕಿಂಗ್ಸ್ 176 ರನ್ ಗಳಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 177 ಗೆಲುವಿನ ಗುರಿಯನ್ನು ನೀಡಿತ್ತು.
ಎರಡನೇ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಗೆ ಇಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭಿಕ ಬ್ಯಾಟ್ಸ್ ಮ್ಯಾನ್ ಗಳಾಗಿ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ತಮ್ಮ ಗೆಲುವಿನ ಆಟವನ್ನು ಪ್ರಾರಂಭಿಸದರು.
ವಿರಾಟ್ ಕೊಹ್ಲಿ 77(49) ,ಫಾಫ್ ಡು ಪ್ಲೆಸಿಸ್ 3(7), ಕ್ಯಾಮೆರಾನ್ ಗ್ರೀನ್ 3(5), ರಜತ್ ಪಾಟಿದಾರ್ 18(18), ಗ್ಲೆನ್ ಮ್ಯಾಕ್ಸ್‌ವೆಲ್ 3(5), ಅನುಜ್ ರಾವತ್ 11(14), ದಿನೇಶ್ ಕಾರ್ತಿಕ್ 28(10), ಮಹಿಪಾಲ್ ಲೋಮ್ರೋರ್ 17(8) ರನ್ ಗಳಿಸಿದರು.
ಪಂಜಾಬ್ ಕಿಂಗ್ಸ್ ತಂಡದಿಂದ ಕಗಿಸೊ ರಬಾಡ 2, ಹರ್‌ಪ್ರೀತ್ ಬ್ರಾರ್ 2 ಹರ್ಷಲ್ ಪಟೇಲ್ 1, ಸ್ಯಾಮ್ ಕರ್ರಾನ್ 1 ವಿಕೆಟ್ ಪಡೆದರು.
ಇದನ್ನು ಓದಿ : IPL 2024 : ತವರಿನಲ್ಲಿ RCB ಮೊದಲ ಪಂದ್ಯ : ಪಂಜಾಬ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ
ವಿರಾಟ್ ಕೊಹ್ಲಿ ಫೋರ್ ಗಳ ಮೇಲೆ ಫೋರ್ ಬಾರಿಸುತ್ತಾ ತಮ್ಮ ಆಟವನ್ನು ಪ್ರಾರಂಭಿಸಿ, ಇಡೀ ಆಟದುದ್ದಕ್ಕೂ ತಮ್ಮ ತಾಳ್ಮೆಯುತ ಆಟವನ್ನು ತೋರ್ಪಡಿಸಿ, 49 ಎಸೆತಗಳಲ್ಲಿ 77 ರನ್ ಗಳನ್ನು ಹೊಡೆದರು. ಕೊನೆಯಲ್ಲಿ ದಿನೇಶ್ ಕಾರ್ತಿಕ್ 10 ಎಸೆತಗಳಲ್ಲಿ 28 ರನ್ ಗಳಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭರ್ಜರಿ ಗೆಲುವನ್ನು ತಂದುಕೊಟ್ಟರು.
ತವರಿನಲ್ಲಿ ಮೊದಲ ಗೆಲುವನ್ನು ಪಡೆಯುವ ಮೂಲಕ ಬೆಂಗಳೂರು ತಂಡ ವಿಕ್ಟರಿ ಹೊಡೆದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.