Dinesh Karthik: ದಿನೇಶ್ ಕಾರ್ತಿಕ್ ತಮ್ಮ ವೃತ್ತಿಪರ ಜೀವನ ಮಾತ್ರವಲ್ಲದೇ ವೈಯಕ್ತಿಕ ಜೀವನದ ವಿಚಾರವಾಗಿಯೂ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ.. 2007 ರಲ್ಲಿ ದಿನೇಶ್ ಕಾರ್ತಿಕ್ ಅಂತರಾಷ್ಟ್ರೀಯ ಪದಾರ್ಪಣೆ ಮಾಡಿದ ಮೂರು ವರ್ಷಗಳ ನಂತರ, ಅವರು ತಮ್ಮ ಬಾಲ್ಯದ ಗೆಳತಿ ನಿಕಿತಾ ವಂಜಾರಾ ಅವರನ್ನು ವಿವಾಹವಾದರು. ಸುಮಾರು 5 ವರ್ಷಗಳ ಕಾಲ ಚೆನ್ನಾಗಿದ್ದ ದಾಂಪತ್ಯ 2012 ರಲ್ಲಿ ವಿಚ್ಛೇದನದ ಮೂಲಕ ಕೊನೆಗೊಂಡಿತು..
ದಿನೇಶ್ ಮತ್ತು ನಿಕಿತಾ ಅವರ ದಾಂಪತ್ಯದಲ್ಲಿ ತುಂಬಾ ಸಂತೋಷವಾಗಿದ್ದರು. ಆದರೆ ಈ ಮಧ್ಯೆ ನಿಕಿತಾ, ದಿನೇಶ್ ಸಹ ಆಟಗಾರ ಮುರಳಿ ವಿಜಯ್ ಅವರನ್ನು ಭೇಟಿಯಾದರು.. ಅಲ್ಲಿಂದ ಇಬ್ಬರು ಆತ್ಮೀಯರಾಗಿ ಇಬ್ಬರಿಗೂ ಸಂಬಂಧ ಶುರುವಾಯಿತು. ಈ ವಿಷಯ ತಿಳಿದ ದಿನೇಶ್ ಕಾರ್ತಿಕ್ ತಕ್ಷಣ 2012ರಲ್ಲಿ ನಿಕಿತಾಗೆ ವಿಚ್ಛೇದನ ನೀಡಿದ್ದರು.
ಇದನ್ನೂ ಓದಿ-ರೋಹಿತ್ ಶರ್ಮಾರನ್ನು ತಬ್ಬಿ ಕಣ್ಣೀರಿಟ್ಟ ನೀತಾ ಅಂಬಾನಿ..!
ನಿಕಿತಾ ಕೂಡ ಮುರಳಿ ವಿಜಯ್ ಜೊತೆ ಎರಡನೇ ಮದುವೆಯಾಗಿದ್ದು, ಇಷ್ಟೆಲ್ಲಾ ಆದ ಮೇಲೆ ದಿನೇಶ್ ಕಾರ್ತಿಕ್ ಕ್ಯಾಮರಾ ಮುಂದೆ ಬರಲು ಹೆದರುತ್ತಿದ್ದರು. ತನ್ನ ಹೆಂಡತಿ ಹಾಗೂ ಸಹ ಆಟಗಾರನ ದ್ರೋಹದಿಂದ ಅವರು ಸಂಪೂರ್ಣ ನೊಂದಿದ್ದರು..
ಇದಾದ ನಂತರ 2013ರಲ್ಲಿ ಭಾರತದ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರನ್ನು ಭೇಟಿಯಾದರು... ದಿನೇಶ್ ಕಾರ್ತಿಕ್ ಮತ್ತು ದೀಪಿಕಾ ಅವರ ಆತ್ಮೀಯತೆ ಬೆಳೆಯಲಾರಂಭಿಸಿ, 2015 ರಲ್ಲಿ ಇಬ್ಬರೂ ವಿವಾಹವಾದರು.. ಸದ್ಯ ಇಬ್ಬರಿಗೂ ಇಬ್ಬರು ಅವಳಿ ಮಕ್ಕಳಿದ್ದಾರೆ... ನಿಕಿತಾ ಜೊತೆಗಿನ ವಿಚ್ಚೇದನದ ನಂತರ, ದೀಪಿಕಾ ದಿನೇಶ್ ಕಾರ್ತಿಕ್ ಅವರ ಜೀವನವನ್ನು ಸುಧಾರಿಸಿದರು.. ಇಂದು ಇಬ್ಬರೂ ತಮ್ಮ ಕುಟುಂಬ ಜೀವನದಲ್ಲಿ ತುಂಬಾ ಸಂತೋಷವಾಗಿದ್ದಾರೆ.
ಇದನ್ನೂ ಓದಿ-ಮೊದಲ ಪಂದ್ಯದಲ್ಲೇ ನಿರಾಸೆ ಮಡಿಸಿದ ಐಪಿಎಲ್ ಸ್ಟಾರ್ಸ್..!ತಪ್ಪು ನಿರ್ಧಾರ ತೆಗೆದುಕೊಂಡ್ರಾ ಬಿಸಿಸಿಐ..?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ