ಬೆಂಗಳೂರಿಗೆ ಎಂಟ್ರಿ ಕೊಟ್ಟ ಆರ್‌ಸಿ‌ಬಿ ನಾಯಕ

IPL 2023: ಏಪ್ರಿಲ್ 02ರಂದು ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಮೊದಲ ಪಂದ್ಯ  ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿದೆ. ಈ ಬಾರಿಯಾದರೂ ಆರ್‌ಸಿ‌ಬಿ ತಂಡ ಐ‌ಪಿ‌ಎಲ್ ಕಪ್ ಗೆಲ್ಲುತ್ತಾ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Written by - Nandish A.Huded | Edited by - Yashaswini V | Last Updated : Mar 22, 2023, 01:04 PM IST
  • ಆರ್‌ಸಿ‌ಬಿ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಮಹಮ್ಮದ್ ಸಿರಾಜ್ ಕೂಡ ಇಂದು ಅಥವಾ ನಾಳೆ ತಮ್ಮ ತಂಡದೊಂದಿಗೆ ಸೇರ್ಪಡೆಗೊಳ್ಳಲಿದ್ದಾರೆ.
  • ಇದೇ ತಿಂಗಳ 26 ರಂದು ನಡೆಯಲಿರುವ ಆರ್‌ಸಿ‌ಬಿ ಅನ್ ಬಾಕ್ಸಿಂಗ್ ಇವೆಂಟ್ನಲ್ಲಿ ಎಲ್ಲಾ ಆಟಗಾರರು ಭಾಗಹಿಸಲಿದ್ದಾರೆ.
  • ಇದಕ್ಕೂ ಮುನ್ನವೇ ಯುಗಾದಿ ಹಬ್ಬದ ಸಮಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು -ಆರ್‌ಸಿ‌ಬಿ ತಂಡದ ನಾಯಕ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದಾರೆ.
ಬೆಂಗಳೂರಿಗೆ ಎಂಟ್ರಿ ಕೊಟ್ಟ ಆರ್‌ಸಿ‌ಬಿ ನಾಯಕ  title=
RCB captain entered Silicon City on Ugadi

IPL 2023- RCB Captain: ಕ್ರಿಕೆಟ್ ಹಬ್ಬ ಐ‌ಪಿ‌ಎಲ್ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಇದೇ ಮಾರ್ಚ್ 31ರಿಂದ ಆರಂಭವಾಗಲಿರುವ 16ನೇ ಆವೃತ್ತಿಯ ಐ‌ಪಿ‌ಎಲ್ ಗಾಗಿ ಕ್ರಿಕೆಟ್ ಪ್ರೇಮಿಗಳು ಬಹಳ ಉತ್ಸುಕರಾಗಿ ಕಾಯುತ್ತಿದ್ದಾರೆ. ಇದೀಗ ಯುಗಾದಿ ಹೊಸ್ತಿಲಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು -ಆರ್‌ಸಿ‌ಬಿ ತಂಡದ ನಾಯಕ ಫ್ಯಾಪ್ ಡುಪ್ಲೆಸಿಸ್ ಕೂಡ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದಾರೆ. 

ವಾಸ್ತವವಾಗಿ, ಈಗಾಗಲೇ ಹಲವು ವಿದೇಶಿ ಆಟಗಾರರು ಭಾರತಕ್ಕೆ ಬಂದಿಳಿದಿದ್ದು ತಮ್ಮ ತಮ್ಮ ತಂಡಗಳೊಂದಿಗೆ ಅಭ್ಯಾಸದಲ್ಲಿ ತೊಡಗಿದ್ದಾರೆ.  ಹಿಂದೂಗಳ ನೂತನ ಸಂವತ್ಸರ ಯುಗಾದಿ ಹಬ್ಬವಾದ ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯ ನಡೆಯಲಿದೆ. ಬಳಿಕ ಐ‌ಪಿ‌ಎಲ್ನಲ್ಲಿ ಪಾಲ್ಗೊಳ್ಳುವ ಎಲ್ಲಾ ಆಸಿಸ್ ಆಟಗಾರರೂ ಕೂಡ ತಮ್ಮ ತಮ್ಮ ತಂಡವನ್ನು ಕೂಡಿಕೊಳ್ಳಲಿದ್ದಾರೆ.  

ಇದನ್ನೂ ಓದಿ- World Cup 2023: ಐಪಿಎಲ್ ಮಿನಿ ಸಮರದ ಬಳಿಕ ವಿಶ್ವಕಪ್ ಮಹಾಸಮರ!

ಆರ್‌ಸಿ‌ಬಿ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಮಹಮ್ಮದ್ ಸಿರಾಜ್ ಕೂಡ ಇಂದು ಅಥವಾ ನಾಳೆ ತಮ್ಮ ತಂಡದೊಂದಿಗೆ ಸೇರ್ಪಡೆಗೊಳ್ಳಲಿದ್ದಾರೆ. ಇದೇ ತಿಂಗಳ 26 ರಂದು ನಡೆಯಲಿರುವ ಆರ್‌ಸಿ‌ಬಿ ಅನ್ ಬಾಕ್ಸಿಂಗ್ ಇವೆಂಟ್ನಲ್ಲಿ ಎಲ್ಲಾ ಆಟಗಾರರು ಭಾಗಹಿಸಲಿದ್ದಾರೆ. ಇದಕ್ಕೂ ಮುನ್ನವೇ ಯುಗಾದಿ ಹಬ್ಬದ ಸಮಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು -ಆರ್‌ಸಿ‌ಬಿ ತಂಡದ ನಾಯಕ ಫ್ಯಾಪ್ ಡುಪ್ಲೆಸಿಸ್ ಬೆಂಗಳೂರಿಗೆ ಆಗಮಿಸಿರುವುದು ಆರ್‌ಸಿ‌ಬಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಇವರೊಂದಿಗೆ ಆರ್‌ಸಿ‌ಬಿಯ ವೇಗಿ ಹರ್ಷಲ್ ಪಟೇಲ್ ಕೂಡ ಬೆಂಗಳೂರಿಗೆ ಬಂದಿಳಿದಿದ್ದು ಆರ್‌ಸಿ‌ಬಿ ತಂಡ ತನ್ನ ಸಾಮಾಜಿಕ ಜಾಲತಾಣದಲ್ಲಿ ಅವರ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿದೆ. 

ಇದನ್ನೂ ಓದಿ- Richest Woman Cricketer: ಸ್ಮೃತಿ ಮಂಧನಾ ಅಲ್ಲ… ಈ ದಿಗ್ಗಜ ಆಟಗಾರ್ತಿಯೇ ಮಹಿಳಾ ಕ್ರಿಕೆಟರ್’ಗಳ ಪೈಕಿ ಅತ್ಯಂತ ಶ್ರೀಮಂತೆ!

ಗಮನಾರ್ಹವಾಗಿ, ಏಪ್ರಿಲ್ 02ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊದಲ ಪಂದ್ಯ  ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿದೆ. ಈ ಬಾರಿಯಾದರೂ ಆರ್‌ಸಿ‌ಬಿ ತಂಡ ಐ‌ಪಿ‌ಎಲ್ ಕಪ್ ಗೆಲ್ಲುತ್ತಾ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News