IND vs AUS: ಟೆಸ್ಟ್ ಕ್ರಿಕೆಟ್ನಲ್ಲಿ ಇತಿಹಾಸ ಸೃಷ್ಟಿಸಿದ ರವಿಚಂದ್ರನ್ ಅಶ್ವಿನ್: ಕಪಿಲ್ ದೇವ್ ‘ಮಹಾ ರೆಕಾರ್ಡ್’ ಉಡೀಸ್

IND vs AUS 3rd Test Match: ಟೀಂ ಇಂಡಿಯಾದ ಶ್ರೇಷ್ಠ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 2 ವಿಕೆಟ್ ಪಡೆದ ತಕ್ಷಣ ಭಾರತದ ಮಾಜಿ ನಾಯಕ ಕಪಿಲ್ ದೇವ್ ಅವರ 687 ಅಂತರಾಷ್ಟ್ರೀಯ ವಿಕೆಟ್‌ಗಳ ದಾಖಲೆಯನ್ನು ಮುರಿದರು. ಈ ಮೂಲಕ ಎಲ್ಲಾ ಸ್ವರೂಪಗಳಲ್ಲಿ ಭಾರತದ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

Written by - Bhavishya Shetty | Last Updated : Mar 2, 2023, 03:08 PM IST
    • ಇಂದೋರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯ
    • ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐತಿಹಾಸಿಕ ಸಾಧನೆ ಮಾಡಿದ್ದಾರೆ
    • ರವಿಚಂದ್ರನ್ ಅಶ್ವಿನ್ ಅವರು ಭಾರತದ ಶ್ರೇಷ್ಠ ಕ್ರಿಕೆಟಿಗ ಕಪಿಲ್ ದೇವ್ ಅವರ 'ಮಹಾ ರೆಕಾರ್ಡ್' ಅನ್ನು ಮುರಿದಿದ್ದಾರೆ
IND vs AUS: ಟೆಸ್ಟ್ ಕ್ರಿಕೆಟ್ನಲ್ಲಿ ಇತಿಹಾಸ ಸೃಷ್ಟಿಸಿದ ರವಿಚಂದ್ರನ್ ಅಶ್ವಿನ್: ಕಪಿಲ್ ದೇವ್ ‘ಮಹಾ ರೆಕಾರ್ಡ್’ ಉಡೀಸ್ title=
Ravichandran Ashwin

IND vs AUS 3rd Test Match: ಇಂದೋರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಟೀಂ ಇಂಡಿಯಾದ ಅಪಾಯಕಾರಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಭಾರತದ ಶ್ರೇಷ್ಠ ಕ್ರಿಕೆಟಿಗ ಕಪಿಲ್ ದೇವ್ ಅವರ 'ಮಹಾ ರೆಕಾರ್ಡ್' ಅನ್ನು ಮುರಿದಿದ್ದಾರೆ.

ಇದನ್ನೂ ಓದಿ: Team India: “ಮುಂದೊಂದು ದಿನ ಬೇಟೆಗಾರನೇ ಬಲೆಗೆ ಬೀಳುತ್ತಾನೆ”: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹೀಗಂದಿದ್ದು ಯಾರಿಗೆ?

ಟೀಂ ಇಂಡಿಯಾದ ಶ್ರೇಷ್ಠ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 2 ವಿಕೆಟ್ ಪಡೆದ ತಕ್ಷಣ ಭಾರತದ ಮಾಜಿ ನಾಯಕ ಕಪಿಲ್ ದೇವ್ ಅವರ 687 ಅಂತರಾಷ್ಟ್ರೀಯ ವಿಕೆಟ್‌ಗಳ ದಾಖಲೆಯನ್ನು ಮುರಿದರು. ಈ ಮೂಲಕ ಎಲ್ಲಾ ಸ್ವರೂಪಗಳಲ್ಲಿ ಭಾರತದ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಇಂದೋರ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ರವಿಚಂದ್ರನ್ ಅಶ್ವಿನ್ 3 ವಿಕೆಟ್ ಪಡೆದಿದ್ದಾರೆ.

ಅನಿಲ್ ಕುಂಬ್ಳೆ ಭಾರತದ ಪರ ಗರಿಷ್ಠ 956 ಅಂತಾರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ. 711 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಕಬಳಿಸಿದ ಹರ್ಭಜನ್ ಸಿಂಗ್ ಅವರ ಹೆಸರು ಎರಡನೇ ಸ್ಥಾನದಲ್ಲಿದೆ. ರವಿಚಂದ್ರನ್ ಅಶ್ವಿನ್ ಅವರು ಇಂದೋರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ಗಳನ್ನು ಕಬಳಿಸಿ ಭಾರತದ ಮೂರನೇ ಅತ್ಯಂತ ಯಶಸ್ವಿ ಬೌಲರ್ ಆಗಿದ್ದಾರೆ.

ಭಾರತಕ್ಕಾಗಿ ಅತಿ ಹೆಚ್ಚು ಅಂತರರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದ ದಾಖಲೆ ಕಪಿಲ್ ದೇವ್ ಅವರ ಹೆಸರಿನಲ್ಲಿತ್ತು. ಆದರೆ ಈಗ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 689 ವಿಕೆಟ್‌ಗಳನ್ನು ಪಡೆದಿದ್ದಾರೆ. ಭಾರತ ಪರ ಕಪಿಲ್ ದೇವ್ 687 ಅಂತಾರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್:

1. ಅನಿಲ್ ಕುಂಬ್ಳೆ - 956 ವಿಕೆಟ್

2. ಹರ್ಭಜನ್ ಸಿಂಗ್ - 711 ವಿಕೆಟ್

3. ರವಿಚಂದ್ರನ್ ಅಶ್ವಿನ್ - 689 ವಿಕೆಟ್

4. ಕಪಿಲ್ ದೇವ್ - 687 ವಿಕೆಟ್

 

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ

1. ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ) - 800 ಟೆಸ್ಟ್ ವಿಕೆಟ್‌ಗಳು

2. ಶೇನ್ ವಾರ್ನ್ (ಆಸ್ಟ್ರೇಲಿಯಾ) - 708 ಟೆಸ್ಟ್ ವಿಕೆಟ್

3. ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್) - 685 ಟೆಸ್ಟ್ ವಿಕೆಟ್

4. ಅನಿಲ್ ಕುಂಬ್ಳೆ (ಭಾರತ) - 619 ಟೆಸ್ಟ್ ವಿಕೆಟ್‌ಗಳು

5. ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್) - 576 ಟೆಸ್ಟ್ ವಿಕೆಟ್

6. ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ) - 563 ಟೆಸ್ಟ್ ವಿಕೆಟ್‌ಗಳು

7. ಕರ್ಟ್ನಿ ವಾಲ್ಷ್ (ವೆಸ್ಟ್ ಇಂಡೀಸ್) - 519 ಟೆಸ್ಟ್ ವಿಕೆಟ್

8. ನಾಥನ್ ಲಿಯಾನ್ (ಆಸ್ಟ್ರೇಲಿಯಾ) - 471 ಟೆಸ್ಟ್ ವಿಕೆಟ್

9. ರವಿಚಂದ್ರನ್ ಅಶ್ವಿನ್ (ಭಾರತ) - 466 ಟೆಸ್ಟ್ ವಿಕೆಟ್

ಇದನ್ನೂ ಓದಿ: WPL 2023 LIVE: ಈ ಚಾನೆಲ್’ಗಳಲ್ಲಿ ಲೈವ್ ಆಗಿ ವೀಕ್ಷಿಸಿ ಮಹಿಳಾ ಪ್ರೀಮಿಯರ್ ಲೀಗ್ 2023: ಉಚಿತವಾಗಿಯೂ ನೋಡಬಹುದು!

 

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್

1. ಅನಿಲ್ ಕುಂಬ್ಳೆ - 619 ಟೆಸ್ಟ್ ವಿಕೆಟ್

2. ರವಿಚಂದ್ರನ್ ಅಶ್ವಿನ್ - 466 ಟೆಸ್ಟ್ ವಿಕೆಟ್

3. ಕಪಿಲ್ ದೇವ್ - 434 ಟೆಸ್ಟ್ ವಿಕೆಟ್

4. ಹರ್ಭಜನ್ ಸಿಂಗ್ - 417 ಟೆಸ್ಟ್ ವಿಕೆಟ್

5. ಇಶಾಂತ್ ಶರ್ಮಾ/ಜಹೀರ್ ಖಾನ್ - 311 ಟೆಸ್ಟ್ ವಿಕೆಟ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News