ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ರಣಜಿ ಟ್ರೋಫಿಯನ್ನು ಮೊದಲೇ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳದ ಬಿಸಿಸಿಐ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ರಣಜಿ ಕ್ರಿಕೆಟ್ ಗೆ ಭಾರತೀಯ ಕ್ರಿಕೆಟ್‌ನ ಬೆನ್ನೆಲುಬಾಗಿದೆ ಏಕೆಂದರೆ ಅದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕ್ರಿಕೆಟಿಗರನ್ನು ಉತ್ಪಾದಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Shocking Video : ಅನ್ನವಿಡಲು ಬಂದವನ ಮೇಲೆಯೇ ದಾಳಿ ಮಾಡಿದ ಮಹಾ ಮೊಸಳೆ
ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಋತುವಿನಲ್ಲಿ ರಣಜಿ ಟ್ರೋಫಿ ನಡೆಯಲಿಲ್ಲ ಮತ್ತು ಈ ಋತುವಿನ ದಿನಾಂಕಗಳನ್ನು ಬಿಸಿಸಿಐ ಇನ್ನೂ ಘೋಷಿಸಿಲ್ಲ.ಸಾಮಾನ್ಯವಾಗಿ ನವೆಂಬರ್ ಅಂತ್ಯದಲ್ಲಿ ಪ್ರಾರಂಭವಾಗುವ ಸೀಸನ್ ಇನ್ನೂ ಹೊಸ ದಿನಾಂಕವನ್ನುಘೋಷಿಸಿಲ್ಲ. ಆದರೆ ಇನ್ನೊಂದೆಡೆಗೆ ಐಪಿಎಲ್ 2022 ಅನ್ನು ಭಾರತದಲ್ಲಿ ಆಯೋಜಿಸಲು ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಪ್ರಮುಖ ಸದಸ್ಯರು ಗುರುವಾರ ಭೇಟಿಯಾಗಿ ರಣಜಿ ಟ್ರೋಫಿಯ ಭವಿಷ್ಯವನ್ನು ನಿರ್ಧರಿಸಿದರು.ಸಭೆಯ ಕೊನೆಯಲ್ಲಿ, ಪಂದ್ಯಾವಳಿಯನ್ನು ಎರಡು ಹಂತಗಳಲ್ಲಿ ನಡೆಸಲು ನಿರ್ಧರಿಸಲಾಯಿತು.ಫೆಬ್ರುವರಿ ಎರಡನೇ ವಾರದಲ್ಲಿ 38 ತಂಡಗಳ ಟೂರ್ನಿ ಆರಂಭವಾಗಲಿದ್ದು, ಮೊದಲ ಹಂತ ಸುಮಾರು ಒಂದು ತಿಂಗಳ ಕಾಲ ಮುಂದುವರಿಯಲಿದೆ ಎಂದು ನಿರೀಕ್ಷಿಸಲಾಗಿದೆ.
The Ranji Trophy is the backbone of Indian cricket. The moment you start ignoring it our cricket will be SPINELESS!
— Ravi Shastri (@RaviShastriOfc) January 28, 2022
ಇದನ್ನೂ ಓದಿ: One Cut Two Cut Trailer Out Now : ಡ್ಯಾನಿಶ್ ಸೇಟ್ ಅಭಿನಯದ ಕನ್ನಡ ಕಾಮಿಡಿ-ಸಾಹಸ
ಗುರುವಾರದಂದು ನಡೆದ ಮಂಡಳಿಯ ಸಭೆಯ ನಂತರ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್, ಸಂಸ್ಥೆಯು ಪಂದ್ಯಾವಳಿಯನ್ನು ಎರಡು ಹಂತಗಳಲ್ಲಿ ನಡೆಸಲು ಉದ್ದೇಶಿಸಿದೆ ಎಂದು ಹೇಳಿದ್ದರು.ಏಕೆಂದರೆ ಬಿಸಿಸಿಐ ಮಾರ್ಚ್ 27 ರಿಂದ ಐಪಿಎಲ್ ಅನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಮತ್ತು ರಣಜಿ ಟ್ರೋಫಿಯನ್ನು ವಿಸ್ತರಿಸುವುದು ಪ್ರಾಯೋಗಿಕವಾಗಿ ಅಸಾಧ್ಯವಾಗಿದೆ.ಹಲವು ರಾಜ್ಯ ಘಟಕಗಳು ಮತ್ತು ಬಿಸಿಸಿಐ ಅಧಿಕಾರಿಗಳು ಮುಂದಿನ ದಾರಿಯನ್ನು ಚರ್ಚಿಸಲು ಸಭೆ ನಡೆಸಿದ ನಂತರ ಧುಮಾಲ್ ಇದನ್ನು ಹೇಳಿದ್ದಾರೆ.
ಇದನ್ನೂ ಓದಿ: ನೀವು ಕೂಡ ತಡರಾತ್ರಿ ಆಹಾರ ಸೇವಿಸುತ್ತೀರಾ? ಮಾರಣಾಂತಿಕ ಕಾಯಿಲೆಗೆ ಕಾರಣವಾದೀತು ಎಚ್ಚರ!
ಬಿಸಿಸಿಐ ಉದ್ದೇಶದ ಬಗ್ಗೆ ಅಭಿಮಾನಿಗಳು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.ಅದಕ್ಕಾಗಿಯೇ ಅವರು ಮೊದಲು ಪಂದ್ಯಾವಳಿಯನ್ನು ಆಯೋಜಿಸಲು ನಿರ್ಧರಿಸಲಿಲ್ಲ.ಒಂದು ದಿನದ ನಂತರ, ಶಾಸ್ತ್ರಿ ತಮ್ಮ ಟ್ವಿಟ್ಟರ್‌ನಲ್ಲಿ ಭಾರತೀಯ ಕ್ರಿಕೆಟ್‌ಗೆ ರಣಜಿ ಟ್ರೋಫಿ ಎಷ್ಟು ಮಹತ್ವದ್ದಾಗಿದೆ ಎಂದು ಹೇಳುವ ಮೂಲಕ ಈ ವರ್ಷ ಅದನ್ನು ಆಯೋಜಿಸಲು ಬಿಸಿಸಿಐ ಮೇಲೆ ಹೆಚ್ಚಿನ ಒತ್ತಡವನ್ನು ಹಾಕಿದರು.
'ರಣಜಿ ಟ್ರೋಫಿ ಭಾರತೀಯ ಕ್ರಿಕೆಟ್‌ನ ಬೆನ್ನೆಲುಬು. ನೀವು ಅದನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ ಕ್ಷಣ ನಮ್ಮ ಕ್ರಿಕೆಟ್ ಬೆನ್ನುಮೂಳೆ ಇಲ್ಲದ ಹಾಗಿರುತ್ತದೆ ಎಂದು ಶಾಸ್ತ್ರಿ ಟ್ವೀಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.