Gold Rate Today: ಮದುವೆ.. ಮುಂಜಿ ಹಾಗೂ ಮನೆಯಲ್ಲಿ ಯಾವುದಾದರೂ ಕಾರ್ಯಕ್ರಮ ಎಂದರೆ ಮೊದಲು ನೆನಪಾಗುವುದು ಚಿನ್ನ ಹಾಗೂ ಆಭರಣ. ಹೂಡಿಕೆ ಮಾಡುವವರಿಗಷ್ಟೆ ಅಲ್ಲದೆ ಅಲಂಕಾರ ಪ್ರಿಯರಿಗೂ ಚಿನ್ನ ಅಚ್ಚುಮೆಚ್ಚು.
Gold Rate Today: ಮದುವೆ.. ಮುಂಜಿ ಹಾಗೂ ಮನೆಯಲ್ಲಿ ಯಾವುದಾದರೂ ಕಾರ್ಯಕ್ರಮ ಎಂದರೆ ಮೊದಲು ನೆನಪಾಗುವುದು ಚಿನ್ನ ಹಾಗೂ ಆಭರಣ. ಹೂಡಿಕೆ ಮಾಡುವವರಿಗಷ್ಟೆ ಅಲ್ಲದೆ ಅಲಂಕಾರ ಪ್ರಿಯರಿಗೂ ಚಿನ್ನ ಅಚ್ಚುಮೆಚ್ಚು.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿಜಯ ಪತಾಕೆ ಹಾರಿಸಿದ್ದು ಗೊತ್ತೇ ಇದೆ.
ಟ್ರಂಪ್ ಮತ್ತೊಮ್ಮೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ. ಈಗಾಗಲೆ ಎಲ್ಲೆ ಸಂಭ್ರಮ ಶುರುವಾಗಿದೆ, ಇದರ ಬೆನ್ನಲ್ಲೆ ದೇಶೀಯ ಷೇರು ಮಾರುಕಟ್ಟೆಗಳೂ ಏರಿಕೆ ಕಂಡಿವೆ. ವಿಶೇಷವಾಗಿ ಐಟಿ ಷೇರುಗಳು ಶೇಕಡಾ 4 ರವರೆಗೆ ಏರಿಕೆ ಕಂಡಿವೆ.
ಕೆಲವು ದಿನಗಳಿಂದ ಕುಸಿತ ಕಂಡಿದ್ದ ಡಾಲರ್ ದಿಢೀರ್ ಏರಿಕೆ ಕಂಡಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ, ಇದು ಆಭರಣ ಪ್ರಿಯರಿಗೆ ಶಾಕ್ ಕೊಟ್ಟಿದೆ.
ಚಿನದನ ಬೆಲೆಯಲ್ಲಿ ಇಳಿಕೆಯಾಗುತ್ತಿದ್ದ ಕಾರಣ, ಮತ್ತಷ್ಟು ಕುಸಿತವಾಗಲಿ ಎಂದು ಕಾಯುತ್ತಿದ್ದ ಆಭರಣ ಪ್ರಿಯರಿಗೆ ಇದೀಗ ಚಿನ್ನದೆ ಬೆಲೆ ಶಾಕ್ ಕೊಟ್ಟಿದೆ.
ಒಂದೆ ಭಾರಿಗೆ ಚಿನ್ನದ ಬೆಲೆ 825 ರೂ. ಏರಿಕೆ ಕಂಡಿದ್ದು, ಬೆಲೆ ಏರಿಕೆ ಬಿಸಿಯಿಂದಾಗಿ ಆಭರಣ ಪ್ರಿಯರ ಕನಸಿಗೆ ಮಸಿ ಬಳಿದಂತಾಗಿದೆ.
ನ. 09 ರಂದು 22 ಕ್ಯಾರೆಟ್‌ನ ಚಿನ್ನದ ಬೆಲೆ 7286 ರೂ. ಗೆ ಏರಿಕೆಯಾಗಿದ್ದು, 24 ಕ್ಯಾರಟ್‌ನ ಚಿನ್ನದ ಬೆಲೆ ರೂಪಾಯಿ. 7948 ಗೆ ಏರಿಕೆಯಾಗಿದೆ.
ಚಿನ್ನದ ಬೆಲೆಯ ಜೊತೆ ಬೆಳ್ಳಿಯ ಬೆಲೆ ಕೂಡ ಏರಿಕೆ ಕಂಡಿದ್ದು, ಬೆಲೆ ಏರಿಕೆ ಆಭರಣ ಪ್ರಿಯರಿಗೆ ಶಾಕ್ ಕೊಟ್ಟಿದೆ.