Rahul Dravid: ಟೀಂ ಇಂಡಿಯಾದ ನೂತನ ಕೋಚ್ ಅನ್ನು ಹಾಡಿ ಹೊಗಳಿದ ದಾದಾ

Rahul Dravid: ಭಾರತ ತಂಡದ ನೂತನ ಕೋಚ್ ರಾಹುಲ್ ದ್ರಾವಿಡ್ ತಂಡದ ಅಭ್ಯಾಸದ ನಂತರ ಸ್ಟಂಪ್‌ಗಳು, ಚೆಂಡುಗಳು ಮತ್ತು ಕೋನ್‌ಗಳನ್ನು ಸ್ವತಃ ಎತ್ತಿಕೊಂಡು ಡ್ರೆಸ್ಸಿಂಗ್ ಕೋಣೆಗೆ ಕರೆದೊಯ್ಯುತ್ತಾರೆ. ಇದು ಅವರ ನಮ್ರತೆಯನ್ನು ತೋರಿಸುತ್ತದೆ.

Written by - Yashaswini V | Last Updated : Dec 13, 2021, 11:40 AM IST
  • ಟೀಂ ಇಂಡಿಯಾದ ನೂತನ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಹಾಡಿ ಹೊಗಳಿದ ಸೌರವ್ ಗಂಗೂಲಿ
  • ದ್ರಾವಿಡ್ ಒಬ್ಬ ಜೋವಿಯಲ್ ಮತ್ತು ಹಾರ್ಡ್ ವರ್ಕಿಂಗ್ ಕ್ರೀಡಾಪಟು
  • ಬಿಸಿಸಿಐನಿಂದ ದ್ರಾವಿಡ್‌ಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುವುದು
Rahul Dravid: ಟೀಂ ಇಂಡಿಯಾದ ನೂತನ ಕೋಚ್ ಅನ್ನು ಹಾಡಿ ಹೊಗಳಿದ ದಾದಾ title=
ಟೀಂ ಇಂಡಿಯಾದ ನೂತನ ಕೋಚ್ ಅನ್ನು ಹಾಡಿ ಹೊಗಳಿದ ದಾದಾ

Rahul Dravid: ಭಾರತ ತಂಡದ ನೂತನ ಕೋಚ್ ರಾಹುಲ್ ದ್ರಾವಿಡ್ (Rahul Dravid) ಎಷ್ಟು ವಿನಯವಂತರು. ಇದಕ್ಕೆ ಮತ್ತೊಂದು ನಿದರ್ಶನ ಮುನ್ನೆಲೆಗೆ ಬಂದಿದೆ. ಭಾರತದ ಮಾಜಿ ನಾಯಕ ಮತ್ತು ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಅವರು ರಾಹುಲ್ ದ್ರಾವಿಡ್ ಅವರ ಬಗ್ಗೆ ವಿಶೇಷ ಉಪಾಖ್ಯಾನವನ್ನು ನೀಡಿದ್ದು, ಅದು ನಿಮ್ಮ ಹೃದಯವನ್ನು ಗೆಲ್ಲುತ್ತದೆ. ದ್ರಾವಿಡ್ ಜೊತೆಗಾರ ಸೌರವ್ ಗಂಗೂಲಿ ಈ ಉಪಾಖ್ಯಾನವನ್ನು ಹೇಳುತ್ತಾ ದ್ರಾವಿಡ್ ಅವರ ಈ ಸಾಹಸದಿಂದ ಕ್ಯಾಮರಾಮನ್ ತುಂಬಾ ಸಂತೋಷಪಡುತ್ತಾರೆ ಎಂದು ಹೇಳಿದರು. 

ವಾಸ್ತವವಾಗಿ, ರಾಹುಲ್ ದ್ರಾವಿಡ್ (Rahul Dravid) ತನ್ನ ಕೋಚಿಂಗ್‌ಗಾಗಿ ತನ್ನ ಸಹಾಯಕರನ್ನು ಅವಲಂಬಿಸಿಲ್ಲ. ಭಾರತೀಯ ತಂಡದ ಅಭ್ಯಾಸದ ನಂತರ, ಅವರೇ ಸ್ಟಂಪ್‌ಗಳು, ಚೆಂಡುಗಳು ಮತ್ತು ಕೋನ್‌ಗಳನ್ನು (ಅಭ್ಯಾಸಕ್ಕೆ ಬಳಸುವ ವಿಶೇಷ ಚಿಹ್ನೆಗಳು) ಎತ್ತಿಕೊಂಡು ತಂಡದ ಡ್ರೆಸ್ಸಿಂಗ್ ಕೋಣೆಗೆ ಕರೆದೊಯ್ಯುತ್ತಾರೆ. ನ್ಯೂಜಿಲೆಂಡ್ ವಿರುದ್ಧದ ಕಾನ್ಪುರ ಟೆಸ್ಟ್‌ನಲ್ಲಿ ದ್ರಾವಿಡ್ ಈ ಕೆಲಸ ಮಾಡಿದರು. ಈ ಬಗ್ಗೆ ಸೌರವ್ ಗಂಗೂಲಿ, 'ಕ್ಯಾಮೆರಾಮ್ಯಾನ್' ಇದರಿಂದ ತುಂಬಾ ಸಂತೋಷಪಟ್ಟಿರಬೇಕು ಎಂದಿದ್ದಾರೆ.

ಇದನ್ನೂ ಓದಿ-  Rohit Sharma: ODI ನಾಯಕನಾದ ನಂತರ ರೋಹಿತ್ ಮೊದಲ ಪ್ರತಿಕ್ರಿಯೆ, ಟೀಕಾಕಾರರಿಗೆ ಪ್ರತ್ಯುತ್ತರ

ಖಾಸಗಿ ವಾಹಿನಿಯೊಂದರ ಜೊತೆಗೆ ನಡೆಸಿದ ವಿಶೇಷ ಸಂವಾದದಲ್ಲಿ ಸೌರವ್ ಗಂಗೂಲಿ (Sourav Ganguly), ಈ ವೇಳೆ ದ್ರಾವಿಡ್ ಅವರ ನಡವಳಿಕೆಯನ್ನು ಶ್ಲಾಘಿಸಿದರು. 'ಅಭ್ಯಾಸದ ನಂತರ ಅವರೇ  (Rahul Dravid) ಸ್ಟಂಪ್, ಬಾಲ್ ಮತ್ತು ಕೋನ್ ಅನ್ನು ಹೊತ್ತೊಯ್ಯುತ್ತಿದ್ದರು ಎಂದು ನಾನು ಕೇಳಿದ್ದೇನೆ. ಕ್ಯಾಮೆರಾಮನ್‌ಗೆ ಇದಕ್ಕಿಂತ ಉತ್ತಮವಾದುದೇನಿದೆ. ಅಂತಹ ದೃಶ್ಯಗಳನ್ನು ನೋಡಿ ಅವರು ಸಂತೋಷಪಡುತ್ತಾರೆ. ದ್ರಾವಿಡ್ ಒಬ್ಬ ಜೋವಿಯಲ್ ಮತ್ತು ಹಾರ್ಡ್ ವರ್ಕಿಂಗ್ ಕ್ರೀಡಾಪಟು ಎಂದು ಹೇಳಿದ್ದಾರೆ. 

ಇದನ್ನೂ ಓದಿ- Virat Kohli ನಾಯಕತ್ವದಲ್ಲಿ ತಂಡದಿಂದ ಹೊರಗಿದ್ದ ಈ ಆಟಗಾರನಿಗೆ Rohit Sharma ನೀಡಲಿದ್ದಾರೆ ಅವಕಾಶ

'ಬಿಸಿಸಿಐನಿಂದ ದ್ರಾವಿಡ್‌ಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುವುದು. ಅವರಿಗೆ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ  (Virat Kohli) ಮತ್ತು ಸೀಮಿತ ಓವರ್‌ಗಳ ನಾಯಕ ರೋಹಿತ್ ಶರ್ಮಾ ಅವರ ಸಂಪೂರ್ಣ ಬೆಂಬಲವಿದೆ ಎಂದು ಈ ವೇಳೆ ಬಿಸಿಸಿಐ ಅಧ್ಯಕ್ಷರು ಸ್ಪಷ್ಟಪಡಿಸಿದರು.

ಈ ವರ್ಷ T20 ವಿಶ್ವಕಪ್ 2021  (T20 World Cup 2021)  ರ ನಂತರ, ಟೀಮ್ ಇಂಡಿಯಾದ ಮುಖ್ಯ ಕೋಚ್ ಆದ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯು ನವೆಂಬರ್ ಮಧ್ಯದಿಂದ ಪ್ರಾರಂಭವಾಗಿದೆ. ಇದು 2023 ರಲ್ಲಿ ನಡೆಯಲಿರುವ ODI ವಿಶ್ವಕಪ್ ವರೆಗೆ ಮುಂದುವರಿಯುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News