ಚೆನ್ನೈ ಸೂಪರ್ ಕಿಂಗ್ಸ್ ಪಾಲಾದ ರಚಿನ್ ರವೀಂದ್ರ : ದಕ್ಕಿದ್ದು ಮಾತ್ರ ನಿರೀಕ್ಷೆಗಿಂತ ಕಡಿಮೆ ಹಣ !

ವಿಶ್ವಕಪ್‌ನಲ್ಲಿ ಅಬ್ಬರಿಸಿದ್ದ ನ್ಯೂಜಿಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ ಅವರ ಮೂಲ ಬೆಲೆ 50 ಲಕ್ಷ ರೂ. ಆಗಿತ್ತು. ಆದರೆ ಇವರ ಮೇಲೆ ದೊಡ್ಡ ಮೊತ್ತವನ್ನು ಬಿಡ್ ಮಾಡಲಾಗುತ್ತದೆ ಎನ್ನುವುದೇ ಎಲ್ಲರ ನಿರೀಕ್ಷೆಯಾಗಿತ್ತು. 

Written by - Ranjitha R K | Last Updated : Dec 19, 2023, 03:55 PM IST
  • ನಿರೀಕ್ಷೆಗಿಂತ ಕಡಿಮೆ ಮೊತ್ತಕ್ಕೆ ಮಾರಾಟವಾದ ರಚಿನ್
  • 1.8 ಕೋಟಿ ರೂ.ಗೆ ಖರೀದಿಸಿದ ಚೆನ್ನೈ
  • ಮೂಲ ಬೆಲೆ 50 ಲಕ್ಷ ಆಗಿತ್ತು
ಚೆನ್ನೈ ಸೂಪರ್ ಕಿಂಗ್ಸ್ ಪಾಲಾದ ರಚಿನ್ ರವೀಂದ್ರ : ದಕ್ಕಿದ್ದು ಮಾತ್ರ ನಿರೀಕ್ಷೆಗಿಂತ ಕಡಿಮೆ ಹಣ ! title=

Rachin Ravindra Auction : ಐಪಿಎಲ್  ಹರಾಜಿನಲ್ಲಿ ನ್ಯೂಜಿಲೆಂಡ್‌ನ ಯುವ ಆಲ್‌ರೌಂಡರ್ ರಚಿನ್ ರವೀಂದ್ರ ನಿರೀಕ್ಷೆಗಿಂತ ಕಡಿಮೆ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಮಂಗಳವಾರ ದುಬೈನಲ್ಲಿ ನಡೆದ ಹರಾಜಿನಲ್ಲಿ ಐದು ಬಾರಿಯ ಚಾಂಪಿಯನ್ ತಂಡ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ)  ರಚಿನ್ ರವೀಂದ್ರ ಅವರನ್ನು 1.8 ಕೋಟಿ ರೂ.ಗೆ ಖರೀದಿಸಿತು. 

ಮೂಲ ಬೆಲೆ 50 ಲಕ್ಷ ಆಗಿತ್ತು :
ವಿಶ್ವಕಪ್‌ನಲ್ಲಿ ಅಬ್ಬರಿಸಿದ್ದ ನ್ಯೂಜಿಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ ಅವರ ಮೂಲ ಬೆಲೆ 50 ಲಕ್ಷ ರೂ. ಆಗಿತ್ತು. ಆದರೆ ಇವರ ಮೇಲೆ ದೊಡ್ಡ ಮೊತ್ತವನ್ನು ಬಿಡ್ ಮಾಡಲಾಗುತ್ತದೆ ಎನ್ನುವುದೇ ಎಲ್ಲರ ನಿರೀಕ್ಷೆಯಾಗಿತ್ತು. ರಚಿನ್ ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವೆ ಸ್ವಲ್ಪ ಸಮಯದವರೆಗೆ ಪೈಪೋಟಿ ಕಾಣಿಸಿತ್ತು. ಒಂದು ಹಂತದಲ್ಲಿ ಸನ್‌ರೈಸರ್ಸ್ ಹೈದರಾಬಾದ್  ಬಿಡ್ ಮಾಡುವುದನ್ನು ನಿಲ್ಲಿಸಿತು. ಇದಾದ ನಂತರ ಸಿಎಸ್ ಕೆ ರಚಿನ್ ರವೀಂದ್ರರನ್ನು ತಮ್ಮ  ತಂಡಕ್ಕೆ ಸೇರಿಸಿಕೊಂಡಿತು. 

ಇದನ್ನೂ ಓದಿ : IPL ಇತಿಹಾಸದಲ್ಲೇ ಅತ್ಯಂತ ದುಬಾರಿ ಬೆಲೆಗೆ ಈ ಆಟಗಾರ ಬಿಕರಿ: SRHಗೆ ಎಂಟ್ರಿಕೊಟ್ಟ ವಿಶ್ವಕಪ್ ಹೀರೋ

ವಿಶ್ವಕಪ್‌ನಲ್ಲಿ ಸಂಚಲನ ಮೂಡಿಸಿದ್ದ ಆಟಗಾರ : 
24 ವರ್ಷದ ರಚಿನ್ ರವೀಂದ್ರ ವಿಶ್ವಕಪ್-2023 ರಲ್ಲಿ ಮೂರು ಶತಕಗಳನ್ನು  ಬಾರಿಸಿದ್ದರು. ಆಡಿರುವ 10 ಪಂದ್ಯಗಳಲ್ಲಿ 64.22 ಸರಾಸರಿಯಲ್ಲಿ 578 ರನ್ ಸೇರಿಸಿದ್ದಾರೆ. ಈ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಆಟಗಾರ ಇವರಾಗಿದ್ದಾರೆ.ಇಷ್ಟೇ ಅಲ್ಲ ಬೌಲಿಂಗ್ ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದುವರೆಗೆ 18 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 145 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮಾದರಿಯಲ್ಲಿ ಅವರು ನ್ಯೂಜಿಲೆಂಡ್ ಪರ 11 ವಿಕೆಟ್‌ಗಳನ್ನು ಪಡೆದಿದ್ದಾರೆ.

ಟಿ20ಯಲ್ಲಿ ಹೇಳಿಕೊಳ್ಳುವಂಥ ಸಾಧನೆ ಇಲ್ಲ :  
ಟಿ20 ಮಾದರಿಯಲ್ಲಿ ರವೀಂದ್ರ ಅವರ ವೃತ್ತಿಜೀವನ ಅಷ್ಟೊಂದು ಚೆನ್ನಾಗಿಲ್ಲ. ಟಿ20ಯಲ್ಲಿ ಒಟ್ಟಾರೆ 53 ಪಂದ್ಯಗಳನ್ನು ಆಡಿರುವ ಅವರು 1 ಅರ್ಧಶತಕದ ನೆರವಿನಿಂದ 618 ರನ್ ಗಳಿಸಿದ್ದಾರೆ. ಇದಲ್ಲದೇ 41 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್‌ನಲ್ಲಿ ಅವರು 3 ಪಂದ್ಯಗಳಲ್ಲಿ 73 ರನ್‌ಗಳನ್ನು ಸೇರಿಸಿದರೆ, 
ಏಕದಿನದಲ್ಲಿ ಅವರು 23 ಪಂದ್ಯಗಳಲ್ಲಿ ಒಟ್ಟು 767 ರನ್‌ಗಳನ್ನು ಗಳಿಸಿದ್ದಾರೆ. 

ಇದನ್ನೂ ಓದಿ : IPL ಹರಾಜಿಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ತಮ್ಮ ಹೆಸರನ್ನು ಹಿಂದಕ್ಕೆ ಪಡೆದುಕೊಂಡ ಮೂವರು ಆಟಗಾರರು !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News