ನವದೆಹಲಿ: ಎಂ.ಎ.ಚಿದಂಬರಂ ಸ್ಟೇಡಿಯಂ ನಲ್ಲಿ ನಡೆದ 17 ನೇ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್ ಗಳ ಗೆಲುವು ಸಾಧಿಸಿದೆ.
ಇದನ್ನೂ ಓದಿ: IPL 2021: ಆರ್‌ಸಿಬಿಯ ಗೆಲುವಿನಿಂದ ಸಂತಸಗೊಂಡ Ashish Nehra ಕೊಹ್ಲಿಗೆ ನೀಡಿದ ಸಲಹೆ ಇದು
Captain @klrahul11 bags the Man of the Match award for his match-winning knock of 60* as #PBKS win by 9 wickets to register their second win of #VIVOIPL 2021.
Scorecard - https://t.co/KCBEyHFVDN pic.twitter.com/ycZRsxJ0zP
— IndianPremierLeague (@IPL) April 23, 2021
ಟಾಸ್ ಗೆದ್ದು ಮೊದಲು ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡ ಪಂಜಾಬ್ (Punjab Kings) ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು 131 ರನ್ ಗಳಿಗೆ ಕಟ್ಟಿ ಹಾಕಿತು. ಆರಂಭದಲ್ಲಿ ಡಿಕಾಕ್ ಮತ್ತು ಇಶಾನ್ ಕಿಸ್ಹಾನ್ ಅವರ ವಿಕೆಟ್ ಬೇಗನೆ ಉರಿಳಿದ ಹಿನ್ನಲೆಯಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆಹೊಗಿದ್ದರಿಂದಾಗಿ ಬೃಹತ್ ಮೊತ್ತವನ್ನು ಗಳಿಸಲು ಮುಂಬೈ ತಂಡವು ವಿಫಲವಾಯಿತು. ನಾಯಕ ರೋಹಿತ್ ಶರ್ಮಾ 63 ಹಾಗೂ ಸೂರ್ಯಕುಮಾರ್ ಯಾದವ್ 63 ರನ್ ಗಳನ್ನು ಗಳಿಸಿ ತಂಡಕ್ಕೆ ನೆರವಾದರು.
ಇದನ್ನೂ ಓದಿ: IPL 2021: ಕ್ರಿಸ್ ಮೊರಿಸ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಕೇವಿನ್ ಪಿಟರ್ಸನ್
ಈ ಸುಲಭದ ಗೆಲುವಿನ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 17.4 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 132 ರನ್ಗಳನ್ನು ಗಳಿಸಲು ಯಶಸ್ವಿಯಾಯಿತು, ನಾಯಕ ಕೆ.ಎಲ್ ರಾಹುಲ್ 60 ಹಾಗೂ ಕ್ರಿಸ್ ಗೇಲ್ 43 ರನ್ ಗಳನ್ನು ಗಳಿಸಿ ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.