Babar Azam WhatsApp Chat Leak: ವಾಟ್ಸಾಪ್ ಚಾಟ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಬೆಂಬಲಕ್ಕೆ ನಿಂತಿರುವ ಪಾಕ್ ತಂಡದ ಮಾಜಿ ನಾಯಕ ವಕಾರ್ ಯೂನಿಸ್ ಪ್ರಸ್ತುತ ಬಾಬರ್ ಆಜಮ್ ಅವರನ್ನು ಏಕಾಂಗಿಯಾಗಿ ಬಿಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ವಾಸ್ತವವಾಗಿ, ಪಾಕಿಸ್ತಾನದ ಕ್ರಿಕೆಟ್ ಮಂಡಳಿಯೊಂದಿಗಿನ ವಾಟ್ಸಾಪ್ ಚಾಟ್‌ಗಳು ಪಾಕಿಸ್ತಾನಿ ಟಿವಿ ಚಾನೆಲ್‌ನಲ್ಲಿ ಸೋರಿಕೆಯಾಗಿದೆ. ಇದರಲ್ಲಿ ಪಿಸಿಬಿ ಮುಖ್ಯಸ್ಥ ಝಾಕಾ ಅಶ್ರಫ್ ಅವರ ಕರೆಗಳಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂಬ ವದಂತಿಗಳ ನಡುವೆ ಪಿಸಿಬಿಯ ಸಿಒಒ ಸಲ್ಮಾನ್ ನಾಸೀರ್ ಅವರೊಂದಿಗೆ ಬಾಬರ್ ಅಜಮ್ ಅವರ ಖಾಸಗಿ ಸಂಭಾಷಣೆ ಸೋರಿಕೆಯಾಗಿದೆ. ಈ ವಿವಾದವು ಮಂಡಳಿಯೊಂದಿಗಿನ ನಾಯಕನ ಸಂಬಂಧದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಭಾರೀ ಚರ್ಚೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಕಾರ್ ಯೂನಿಸ್ ಅವರು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರನ್ನು ಬೆಂಬಲಿಸಿದ್ದು, ಅವರ ಮೇಲೆ ಒತ್ತಡ ಹೇರುತ್ತಿರುವವರನ್ನು ಟೀಕಿಸಿದ್ದಾರೆ.
ಇದನ್ನೂ ಓದಿ- ಆಡಿದ 6ರಲ್ಲಿ 5 ಪಂದ್ಯ ಸೋತು ಕೊನೆ ಸ್ಥಾನದಲ್ಲಿದ್ದರೂ ಇಂಗ್ಲೆಂಡ್’ಗೆ ಇನ್ನೂ ಇದೆ ಸೆಮೀಸ್ ತಲುಪುವ ಚ್ಯಾನ್ಸ್! ಹೇಗೆ ಗೊತ್ತಾ?
ಪಾಕಿಸ್ತಾನದ ಸ್ಥಳೀಯ ಟಿವಿ ಚಾನೆಲ್ ಪಾಕಿಸ್ತಾನ ತಂಡದ ಹಾಲಿ ನಾಯಕ ಬಾಬರ್ ಆಜಮ್ ಮತ್ತು ಪಿಸಿಬಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲ್ಮಾನ್ ನಸೀರ್ ನಡುವಿನ ಸಂಭಾಷಣೆಯ ವಾಟ್ಸಾಪ್ ಚಾಟ್ ನ ಸ್ಕ್ರೀನ್‌ಶಾಟ್‌ಗಳನ್ನು ಲೈವ್ ಟಿವಿಯಲ್ಲಿ ಪ್ರಸಾರ ಮಾಡಿದೆ.
ಇದನ್ನೂ ಓದಿ- World Cup : ಟಾಪ್ 4 ರಲ್ಲಿ ಈ ತಂಡಗಳು ! ಪಾಯಿಂಟ್ ಟೇಬಲ್ ಸ್ಪಷ್ಟ ಚಿತ್ರಣ ಇಲ್ಲಿದೆ
ಬಾಬರ್ ಆಜಮ್ ಅವರ ಖಾಸಗಿ ವಾಟ್ಸಾಪ್ ಚಾಟ್‌ಗಳ ಬಗ್ಗೆ ಸುದ್ದಿ ಪ್ರಸಾರವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣ 'ಎಕ್ಸ್' ಮೂಲಕ ಪ್ರತಿಕ್ರಿಯಿಸಿರುವ ಪಾಕ್ ತಂಡದ ಮಾಜಿ ನಾಯಕ ವಕಾರ್ ಯೂನಿಸ್, "ನೀವು ಏನು ಮಾಡಲು ಪ್ರಯತ್ನಿಸುತ್ತಿದ್ದೀರಿ. ಇದು ಕರುಣಾಜನಕ !!! ನಿಮಗೆ ಸಂತೋಷವಾಗಿದೆಯೇ? ದಯವಿಟ್ಟು ಬಾಬರ್ ಆಜಮ್ ಅವರನ್ನು ಏಕಾಂಗಿಯಾಗಿ ಬಿಟ್ಟುಬಿಡಿ. ಅವರು ಪಾಕಿಸ್ತಾನ ಕ್ರಿಕೆಟ್‌ನ ಆಸ್ತಿ" ಎಂದು ಬರೆದಿದ್ದಾರೆ.
Ya kya Karna ki koshish kar raha ho aap loog??? This is pathetic !!!
Khush ho gaya aap loog. Please leave @babarazam258 alone 🙏🏽. He’s an asset of Pakistan Cricket @TheRealPCB @ARYNEWSOFFICIAL @Salman_ARY https://t.co/pcM90yUGqy— Waqar Younis (@waqyounis99) October 30, 2023
ಪಾಕಿಸ್ತಾನ ತಂಡ ಈಗ ಕೋಲ್ಕತ್ತಾದಲ್ಲಿದ್ದು ಅಲ್ಲಿ ಬಾಂಗ್ಲಾದೇಶದ ವಿರುದ್ಧ ತನ್ನ ಮುಂದಿನ ಪಂದ್ಯವನ್ನು ಆಡಲಿದೆ. ಆರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದಿರುವ ಪಾಕಿಸ್ತಾನ ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.