Cricketer Retirement : ಕ್ರಿಕೆಟ್ ಲೋಕದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. 24 ನೇ ವಯಸ್ಸಿನಲ್ಲಿಯೇ ಈ ಕ್ರಿಕೆಟಿಗ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಬಹುತೇಕ ಕ್ರಿಕೆಟಿಗರು ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವ ವಯಸ್ಸಿನಲ್ಲಿ ಈ ಆಟಗಾರನ ನಿವೃತ್ತಿ ಘೋಷಿಸಿರುವುದು ಆಶ್ಚರ್ಯಗೊಳಿಸಿದೆ.
ತನ್ನ 24 ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿದ ಬೌಲರ್ :
ಅಫ್ಘಾನಿಸ್ತಾನದ ಮಾರಕ ವೇಗದ ಬೌಲರ್ ನವೀನ್-ಉಲ್-ಹಕ್ 24 ನೇ ವಯಸ್ಸಿನಲ್ಲಿ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತದಲ್ಲಿ ಅಕ್ಟೋಬರ್ 5 ರಿಂದ ಪ್ರಾರಂಭವಾಗುವ ಮುಂಬರುವ ICC ವಿಶ್ವಕಪ್ 2023 ರ ನಂತರ ನವೀನ್-ಉಲ್-ಹಕ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ. ವಿಶ್ವಕಪ್‌ಗೂ ಮುನ್ನ ಅಫ್ಘಾನಿಸ್ತಾನದ ಫಾಸ್ಟ್ ಬೌಲರ್ ನವೀನ್ ಉಲ್ ಹಕ್ ತೆಗೆದುಕೊಂಡ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. 'ಈ ವಿಶ್ವಕಪ್ ನಂತರ ನಾನು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ ಎನ್ನುವ ನಿರ್ಧಾರವನ್ನು ನವೀನ್-ಉಲ್-ಹಕ್, ಕ್ರಿಕ್‌ಬಜ್‌ಗೆ ಪ್ರಕಟಿಸಿದ್ದಾರೆ. ಕೆಲಸದ ಹೊರೆ ಮತ್ತು ಇತ್ತೀಚಿನ ಗಾಯಗಳಿಂದಾಗಿ, ವೈದ್ಯರು ಮತ್ತು ಫಿಜಿಯೋಥೇರಪಿಸ್ಟ್ ಸಲಹೆ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ : IND vs AUS: ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಹೊಸ ಇತಿಹಾಸ ನಿರ್ಮಿಸಿದ ಹಿಟ್ಮ್ಯಾನ್
ಕೊಹ್ಲಿ ಜೊತೆ ವಿವಾದ :
'ನನ್ನ ವೃತ್ತಿಜೀವನವನ್ನು ಮುಂದುವರಿಸಲು ನಾನು ದೀರ್ಘ ಸ್ವರೂಪದ ಕ್ರಿಕೆಟನ್ನು ತೊರೆದು ಟಿ20 ಕ್ರಿಕೆಟ್‌ನತ್ತ ಗಮನ ಹರಿಸಬೇಕಾಗಿದೆ ಎಂದು ನವೀನ್-ಉಲ್-ಹಕ್ ಹೇಳಿದ್ದಾರೆ. ಅದೃಷ್ಟವಶಾತ್ ನಾನು ವಿಶ್ವಕಪ್‌ನಲ್ಲಿ ಆಡಲು ಫಿಟ್ ಆಗಿದ್ದೇನೆ, ಆದರೆ ಗಾಯಗಳಿಂದಾಗಿ ದೀರ್ಘ ಸ್ವರೂಪದ ಕ್ರಿಕೆಟ್‌ಗೆ ಕಡಿವಾಣ ಹಾಕಲು ಮತ್ತು ಕಡಿಮೆ ಫಾರ್ಮ್ಯಾಟ್‌ಗಳತ್ತ ಗಮನಹರಿಸಲು ನನಗೆ ಸಲಹೆ ನೀಡಲಾಗಿದೆ ಎಂದಿದ್ದಾರೆ. ಐಪಿಎಲ್ 2023 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರವಾಗಿ ಆಡಿದ ನವೀನ್-ಉಲ್-ಹಕ್ 8 ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಪಡೆಯುವ ಮೂಲಕ ಛಾಪು ಮೂಡಿಸಿದ್ದರು. ಐಪಿಎಲ್ 2023 ರಲ್ಲಿ, ನವೀನ್-ಉಲ್-ಹಕ್ ಕ್ರಿಕೆಟ್ ಮೈದಾನದಲ್ಲಿಯೇ ವಿರಾಟ್ ಕೊಹ್ಲಿಯೊಂದಿಗೆ ವಿವಾದವನ್ನು ಸೃಷ್ಟಿಸಿದ್ದರು.
2016ರಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ :
ನವೀನ್-ಉಲ್-ಹಕ್ ಸೆಪ್ಟೆಂಬರ್ 2016 ರಲ್ಲಿ ಅಫ್ಘಾನಿಸ್ತಾನದ ಪರ ODIಗೆ ಪಾದಾರ್ಪಣೆ ಮಾಡಿದರು. ನವೀನ್-ಉಲ್-ಹಕ್ ಅಫ್ಘಾನಿಸ್ತಾನ ಪರ ಇದುವರೆಗೆ 7 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ನವೀನ್-ಉಲ್-ಹಕ್ 7 ಏಕದಿನ ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದಾರೆ. ನವೀನ್ ಉಲ್ ಹಕ್ ಅಫ್ಘಾನಿಸ್ತಾನ ಪರ 27 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 34 ವಿಕೆಟ್ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ 8 ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದಾರೆ. ಅಫ್ಘಾನಿಸ್ತಾನ ತಂಡ ಅಕ್ಟೋಬರ್ 7 ರಂದು ಧರ್ಮಶಾಲಾದಲ್ಲಿ ಬಾಂಗ್ಲಾದೇಶ ವಿರುದ್ಧ ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಇದನ್ನೂ ಓದಿ : IND vs AUS: ಕೊನೆಯ ಪಂದ್ಯ ಸೋತರೂ ಸರಣಿ ಗೆದ್ದ ಭಾರತ..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.