Major Cricket League’ನಲ್ಲೂ ಮುಂಬೈ ಇಂಡಿಯನ್ಸ್ ಹವಾ: ನ್ಯೂಯಾರ್ಕ್ ಫ್ರಾಂಚೈಸಿಯನ್ನೇ ಖರೀದಿಸಿದ ಅಂಬಾನಿ ಪಡೆ

Major Cricket League​: ರಿಲಯನ್ಸ್ ಇಂಡಸ್ಟ್ರೀಸ್​ ಲಿಮಿಟೆಡ್​ ಒಡೆತನದ ಮುಂಬೈ ಇಂಡಿಯನ್ಸ್ 'ಎಂಐ ನ್ಯೂಯಾರ್ಕ್​' ತಂಡವನ್ನು ಖರೀದಿಸಿದೆ, ಈ ಹೊಸ ತಂಡವು ಹೊಸ ತಂಡವು ಚೊಚ್ಚಲ ಆವೃತ್ತಿಯ ಮೇಜರ್​ ಲೀಗ್ ಕ್ರಿಕೆಟ್’​ನಲ್ಲಿ​ ಆಡಲಿದೆ. 'ಮೇಜರ್​ ಲೀಗ್​ ಕ್ರಿಕೆಟ್​' ಎಂಬುದು ಅಮೆರಿಕಾದಲ್ಲಿ ನಡೆಸಲಾಗುವ ಮೊದಲ ವೃತ್ತಿಪರ ಟಿ20 ಕ್ರಿಕೆಟ್​ ಚಾಂಪಿಯನ್​ಷಿಪ್.

Written by - Zee Kannada News Desk | Edited by - Bhavishya Shetty | Last Updated : Mar 20, 2023, 06:22 PM IST
    • ಮುಂಬೈ ಇಂಡಿಯನ್ಸ್, ತನ್ನ ಐದನೇ ಕ್ರಿಕೆಟ್​ ಫ್ರಾಂಚೈಸಿಯಾಗಿ 'ಎಂಐ ನ್ಯೂಯಾರ್ಕ್​' ತಂಡವನ್ನು ಘೋಷಿಸುತ್ತಿದೆ.
    • ನ್ಯೂಯಾರ್ಕ್​ ಮೂಲದ ಈ ತಂಡದಿಂದ ಮುಂಬೈ ಇಂಡಿಯನ್ಸ್ ಕುಟುಂಬ ಇನ್ನಷ್ಟು ವಿಸ್ತಾರಗೊಂಡಿದೆ.
    • ಹೊಸ ತಂಡವು ಚೊಚ್ಚಲ ಆವೃತ್ತಿಯ ಮೇಜರ್​ ಲೀಗ್ ಕ್ರಿಕೆಟ್​ನಲ್ಲಿ​ (ಎಂಎಲ್​ಸಿ) ಆಡಲಿದೆ.
Major Cricket League’ನಲ್ಲೂ ಮುಂಬೈ ಇಂಡಿಯನ್ಸ್ ಹವಾ: ನ್ಯೂಯಾರ್ಕ್ ಫ್ರಾಂಚೈಸಿಯನ್ನೇ ಖರೀದಿಸಿದ ಅಂಬಾನಿ ಪಡೆ title=
Mumbai Indians

Major Cricket League: ನ್ಯೂಯಾರ್ಕ್​/ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್​ ಲಿಮಿಟೆಡ್​ ಒಡೆತನದ ಮುಂಬೈ ಇಂಡಿಯನ್ಸ್, ತನ್ನ ಐದನೇ ಕ್ರಿಕೆಟ್​ ಫ್ರಾಂಚೈಸಿಯಾಗಿ 'ಎಂಐ ನ್ಯೂಯಾರ್ಕ್​' ತಂಡದ ಪ್ರಸ್ತಾವಿತ ಹೊಸ ಸೇರ್ಪಡೆಯನ್ನು ಇಂದು ಘೋಷಿಸುತ್ತಿದೆ. ನ್ಯೂಯಾರ್ಕ್​ ಮೂಲದ ಈ ತಂಡದಿಂದ ಮುಂಬೈ ಇಂಡಿಯನ್ಸ್ ಕುಟುಂಬ ಇನ್ನಷ್ಟು ವಿಸ್ತಾರಗೊಂಡಿದೆ. ಹೊಸ ತಂಡವು ಚೊಚ್ಚಲ ಆವೃತ್ತಿಯ ಮೇಜರ್​ ಲೀಗ್ ಕ್ರಿಕೆಟ್​ನಲ್ಲಿ​ (ಎಂಎಲ್​ಸಿ) ಆಡಲಿದೆ.

ಇದನ್ನೂ ಓದಿ: ಈ ಸಲ ಕಪ್ ನಮ್ದೆ..!! IPL ಟ್ರೋಫಿ ಪಡೆದೇ ತೀರುತ್ತೇವೆ ಅಂತಾ ಪಣತೊಟ್ಟಿದ್ದಾರೆ RCBಯ ಈ 5 ಆಟಗಾರರು

'ಬೆಳೆಯುತ್ತಿರುವ ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ನ್ಯೂಯಾರ್ಕ್​ ಫ್ರಾಂಚೈಸಿಯನ್ನು ಸ್ವಾಗತಿಸಲು ನಾನು ಅಪಾರ ಉತ್ಸುಕಳಾಗಿದ್ದೇನೆ. ಅಮೆರಿಕದ ಕ್ರಿಕೆಟ್​ ಲೀಗ್​ಗೆ ಇದೇ ಮೊದಲ ಬಾರಿಗೆ ಪ್ರವೇಶ ಪಡೆಯುತ್ತಿದ್ದೇವೆ. ನಿರ್ಭೀತಿ ಮತ್ತು ಮನರಂಜನೆಯ ಕ್ರಿಕೆಟ್​ ಆಟದ ಜಾಗತಿಕ ಬ್ರ್ಯಾಂಡ್​ ಆಗಿ ಮುಂಬೈ ಇಂಡಿಯನ್ಸ್ ಅನ್ನು ರೂಪಿಸುವ ಭರವಸೆ ನನ್ನದು. ಮುಂಬೈ ಇಂಡಿಯನ್ಸ್ ಗೆ ಇದು ಇನ್ನೊಂದು ಹೊಸ ಆರಂಭವಾಗಿದೆ. ನಾನು ಮುಂದಿನ ಉತ್ಸಾಹಿ ಪ್ರಯಾಣವನ್ನು ಎದುರು ನೋಡುತ್ತಿದ್ದೇನೆ' ಎಂದು ನೀತಾ ಅಂಬಾನಿ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ಕುಟುಂಬವು ಕ್ರಿಕೆಟ್​ ಆಟವನ್ನು ಜಗತ್ತಿನೆಲ್ಲೆಡೆ ವಿಸ್ತರಿಸಲು ಮತ್ತು ಉತ್ತೇಜಿಸಲು ಬದ್ಧವಾಗಿದೆ. ಜೊತೆಗೆ ಪ್ರತಿದಿನ ಬಲಿಷ್ಠವಾಗಿ ಬೆಳೆಯುತ್ತಲೇ ಇದೆ. ಈ ಕುಟುಂಬದಲ್ಲಿ ಮುಂಬೈ ಇಂಡಿಯನ್ಸ್ (ಐಪಿಎಲ್​), ಎಂಐ ಕೇಪ್​ಟೌನ್​ (ಎಸ್​ಎ20), ಎಂಐ ಎಮಿರೇಟ್ಸ್​ (ಐಎಲ್​ಟಿ20) ಮತ್ತು ಮುಂಬೈ ಇಂಡಿಯನ್ಸ್ (ಡಬ್ಲ್ಯುಪಿಎಲ್​) ಬಳಿಕ 'ಎಂಐ ನ್ಯೂಯಾರ್ಕ್'​ 5ನೇ ಫ್ರಾಂಚೈಸಿ ಆಗಿದ್ದು, ಮೂರು ಭಿನ್ನ ಖಂಡಗಳಲ್ಲಿ, ನಾಲ್ಕು ಭಿನ್ನ ದೇಶಗಳಲ್ಲಿ ಮತ್ತು ಐದು ಭಿನ್ನ ಕ್ರಿಕೆಟ್​ ಲೀಗ್​ಗಳಲ್ಲಿ ತಂಡಗಳನ್ನು ಹೊಂದಿದಂತಾಗಿದೆ.

ವಿಶ್ವದ ಎಲ್ಲೆಡೆ ಸುಮಾರು 50 ದಶಲಕ್ಷ ಡಿಜಿಟಲ್​ ಅಭಿಮಾನಿಗಳನ್ನು ಹೊಂದಿರುವ ಮುಂಬೈ ಇಂಡಿಯನ್ಸ್, ಅತ್ಯಂತ ಹೆಚ್ಚು ಫಾಲೋವರ್ಸ್’ಗಳನ್ನು ಹೊಂದಿರುವ ಜಾಗತಿಕ ಕ್ರಿಕೆಟ್​ ಬ್ರ್ಯಾಂಡ್​ ಎನಿಸಿದೆ. ವಿಶ್ವದೆಲ್ಲೆಡೆಯ ಪ್ರಮುಖ ಫ್ರಾಂಚೈಸಿ ಲೀಗ್​ಗಳಲ್ಲಿ ವರ್ಷದಲ್ಲಿ ಸರಿಸುಮಾರು 6 ತಿಂಗಳ ಕಾಲ ಕ್ರಿಕೆಟ್​ ಆಡುವ ಎಂಐ ಕುಟುಂಬದ ಈ ತಂಡಗಳನ್ನು ಅಭಿಮಾನಿಗಳು ಬೆಂಬಲಿಸುತ್ತ ಮತ್ತು ಹುರಿದುಂಬಿಸುತ್ತ ಬಂದಿದ್ದಾರೆ. 2009ರಿಂದ ಮುಂಬೈ ಇಂಡಿಯನ್ಸ್ ಶೇ. 99ರಷ್ಟು ಬ್ರ್ಯಾಂಡ್​ ಮೌಲ್ಯದ ಪ್ರಗತಿ ಕಂಡಿದೆ.

ಇದನ್ನೂ ಓದಿ: Test Captaincy: ಹೀನಾಯ ಸೋಲಿನ ಬಳಿ ಟೆಸ್ಟ್ ನಾಯಕತ್ವಕ್ಕೆ ಗುಡ್ ಬೈ ಹೇಳಿದ ಸ್ಟಾರ್ ಆಟಗಾರ!

'ಮೇಜರ್​ ಲೀಗ್​ ಕ್ರಿಕೆಟ್​' ಅಮೆರಿಕಾದಲ್ಲಿ ನಡೆಸಲಾಗುವ ಮೊದಲ ವೃತ್ತಿಪರ ಟಿ20 ಕ್ರಿಕೆಟ್​ ಚಾಂಪಿಯನ್​ ಶಿಪ್​ ಆಗಿದೆ. 2023ರ ಬೇಸಿಗೆ ಋತುವಿನಲ್ಲಿ ಚೊಚ್ಚಲ ಆವೃತ್ತಿಯ ಮೇಜರ್​ ಲೀಗ್​ ಕ್ರಿಕೆಟ್​ ಟೂರ್ನಿಯು ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಭೇಟಿ ನೀಡಿ: www.majorleaguecricket.com

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News