RCB ಆಟಗಾರ್ತಿ ಶ್ರೇಯಾಂಕಾಗೆ ಮೈದಾನದಲ್ಲೇ ಲವ್ ಪ್ರಪೋಸ್: ಅಭಿಮಾನಿಯ ಪ್ರೇಮ ನಿವೇದನೆಯ ಫೋಟೋ ವೈರಲ್

Marriage proposal for Shreyanka Patil: ಪೋಸ್ಟರ್ ಹಿಡಿದು ಸ್ಟೇಡಿಯಂಗೆ ಬಂದಿದ್ದ ಆ ಅಭಿಮಾನಿಯನ್ನು ಕಂಡು, ಆರ್‌ಸಿಬಿ ಆಟಗಾರ್ತಿಯರು ನಕ್ಕಿದ್ದಾರೆ. ಇಂತಹ ದೃಶ್ಯಗಳು ಮೈದಾನದಲ್ಲಿ ಹಲವು ಬಾರಿ ಕಂಡು ಬಂದಿವೆ. ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಇಂತಹ ಅನೇಕ ಪ್ರಸ್ತಾಪಗಳನ್ನು ನೋಡಿದ್ದಾರೆ

Written by - Bhavishya Shetty | Last Updated : Feb 28, 2024, 01:23 PM IST
    • RCB ಆಟಗಾರ್ತಿ ಶ್ರೇಯಾಂಕಾ ಪಾಟೀಲ್’ಗೆ ಮದುವೆ ಪ್ರಸ್ತಾಪ
    • ಪೋಸ್ಟರ್ ಮೂಲಕ ಪ್ರೇಮ ನಿವೇದನೆ ಮಾಡಿರುವ ಅಭಿಮಾನಿ
    • ಅಭಿಮಾನಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
RCB ಆಟಗಾರ್ತಿ ಶ್ರೇಯಾಂಕಾಗೆ ಮೈದಾನದಲ್ಲೇ ಲವ್ ಪ್ರಪೋಸ್: ಅಭಿಮಾನಿಯ ಪ್ರೇಮ ನಿವೇದನೆಯ ಫೋಟೋ ವೈರಲ್ title=
Marriage proposal for Shreyanka Patil

Shreyanka Patil WPL 2024: ಮಹಿಳೆಯರ ಪ್ರೀಮಿಯರ್ ಲೀಗ್ 2024ರ 5 ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ನಡುವೆ ನಡೆದಿದೆ. ಈ ಪಂದ್ಯವನ್ನು ಬೆಂಗಳೂರು 8 ವಿಕೆಟ್‌’ಗಳಿಂದ ಗೆದ್ದುಕೊಂಡಿದೆ. ಇನ್ನು ಈ ಪಂದ್ಯದ ವೇಳೆ RCB ಅಭಿಮಾನಿಯೊಬ್ಬ, ತಂಡದ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಅವರಿಗೆ ಮದುವೆ ಪ್ರಸ್ತಾಪ ಮಾಡಿದ್ದಾನೆ. ಪೋಸ್ಟರ್ ಮೂಲಕ ಪ್ರೇಮ ನಿವೇದನೆ ಮಾಡಿರುವ ಅಭಿಮಾನಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಧನ್ಯಾ ರಾಮ್‌ಕುಮಾರ್ ನಟನೆಯ ಹೈಡ್ ಅಂಡ್ ಸೀಕ್ ಸಿನಿಮಾ ಟ್ರೇಲರ್‌ ಬಿಡುಗಡೆ

ಪೋಸ್ಟರ್ ಹಿಡಿದು ಸ್ಟೇಡಿಯಂಗೆ ಬಂದಿದ್ದ ಆ ಅಭಿಮಾನಿಯನ್ನು ಕಂಡು, ಆರ್‌ಸಿಬಿ ಆಟಗಾರ್ತಿಯರು ನಕ್ಕಿದ್ದಾರೆ. ಇಂತಹ ದೃಶ್ಯಗಳು ಮೈದಾನದಲ್ಲಿ ಹಲವು ಬಾರಿ ಕಂಡು ಬಂದಿವೆ. ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಇಂತಹ ಅನೇಕ ಪ್ರಸ್ತಾಪಗಳನ್ನು ನೋಡಿದ್ದಾರೆ.

ಇನ್ನು ಶ್ರೇಯಾಂಕಾ ವೃತ್ತಿ ಜೀವನದ ಬಗ್ಗೆ ಮಾತನಾಡುವುದಾದರೆ, ಭಾರತ ಪರ ಇದುವರೆಗೆ 2 ಏಕದಿನ ಪಂದ್ಯಗಳನ್ನು ಆಡಿರುವ ಅವರು, 4 ವಿಕೆಟ್‌ ಕಬಳಿಸಿದ್ದಾರೆ. 6 ಟಿ20 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ. ಈ ಅವಧಿಯಲ್ಲಿ 19 ರನ್‌’ಗಳಿಗೆ 3 ವಿಕೆಟ್‌ ಕಬಳಿಸಿದ್ದು ಪಂದ್ಯವೊಂದರಲ್ಲಿ ಅತ್ಯುತ್ತಮ ಪ್ರದರ್ಶನವಾಗಿತ್ತು.

ಇದನ್ನೂ ಓದಿ:  IND vs ENG: 5ನೇ ಟೆಸ್ಟ್ ಗೆ ಈ ಸ್ಟಾರ್ ಬ್ಯಾಟ್ಸ್ ಮ್ಯಾನ್ ಅಲಭ್ಯ ! ಮೈದಾನಕ್ಕೆ ಇಳಿಯುತ್ತಾರೆಯೇ ಬುಮ್ರಾ ? 

ಡಬ್ಲ್ಯುಪಿಎಲ್ 2024ರ ಐದನೇ ಪಂದ್ಯದಲ್ಲಿ ಗುಜರಾತ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿದ್ದು ಗಮನಾರ್ಹ. ಈ ವೇಳೆ ಹೇಮಲತಾ ಅಜೇಯ 31 ರನ್ ಗಳಿಸಿದರು. ಆರ್‌’ಸಿಬಿ ಪರ ಬೌಲಿಂಗ್ ಮಾಡಿದ ರೇಣುಕಾ ಸಿಂಗ್ 2 ವಿಕೆಟ್ ಪಡೆದರೆ, ಲಿನಿಯಕ್ಸ್ 3 ವಿಕೆಟ್ ಪಡೆದರು. ಗುಜರಾತ್ ನೀಡಿದ ಗುರಿ ಬೆನ್ನಟ್ಟಿದ ಆರ್’ಸಿಬಿ 12.3 ಓವರ್’ಗಳಲ್ಲಿ ಗುರಿ ಮುಟ್ಟಿತು. ಸ್ಮೃತಿ ಮಂಧಾನ 27 ಎಸೆತಗಳಲ್ಲಿ 43 ರನ್ ಗಳಿಸಿದರೆ, ಮೇಘನಾ ಅಜೇಯ 36 ರನ್ ಗಳಿಸಿದರು. ಎಲ್ಲಿಸ್ ಪೆರ್ರಿ ಔಟಾಗದೆ 23 ರನ್ ಕಲೆ ಹಾಕಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News