ಕೊಚ್ಚಿ : ಐಪಿಎಲ್ 2023ಕ್ಕೆ ಕೊನೆಗೂ ಆರ್‌ಸಿಬಿ ಯುವ ಕ್ರಿಕೆಟಿಗ ಮನೋಜ್ ಭಂಡಾಜೆ ಮಣೆ ಹಾಕಿದೆ. ಪ್ರತಿಭಾನಿತ್ವ ಹಾಗೂ ದೇಸಿ ಕ್ರಿಕೆಟ್‌ನಲ್ಲಿ ಸಾಕಷ್ಟು ಮಿಂಚಿರುವ ಮನೋಜ್ ಭಂಡಾಜೆ ಮೂಲ ಬೆಲೆ 20 ಲಕ್ಷ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡಿದ್ದಾರೆ.
ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿ ತಂಡ ನಿರೀಕ್ಷಿತ ಮಟ್ಟದಲ್ಲಿ ಆಟಗಾರರ ಖರೀದಿಗೆ ಆಸಕ್ತಿ ತೋರಿಸಿಲ್ಲ. ಈ ವರ್ತನೆ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ. ಸದ್ಯ ಅಪ್ಪಟ ಕನ್ನಡಿಗನ ಮನೋಜ್ ಭಂಡಾಜೆ ಖರೀದಿ ಮಾಡಿದ್ದರಿಂದ ಆರ್‌ಸಿಬಿ ಅಭಿಮಾನಿಗಳು ಕೊಂಚ ಸಮಾಧಾನ ತಂದಿದೆ. ರಾಯಚೂರಿನ ಮನೋಜ್ ಭಂಡಾಜೆ ಆಲ್ರೌಂಡರ್ ಆಟಗಾರರಾಗಿದ್ದಾರೆ. ಸದ್ಯ ಮನೋಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ್ದರಿಂದ ಇಷ್ಟು ದಿನ ಒಬ್ಬನೇ ಒಬ್ಬ ಕನ್ನಡಿಗನಿಲ್ಲ ಎಂಬ ಕೊರಗು ನೀಗಿದೆ ಎನ್ನಬಹುದು.
ಇದನ್ನೂ ಓದಿ: IPL Auction 2023 : ವಿಶ್ವದ ಅತ್ಯಂತ ಅಪಾಯಕಾರಿ ಆಟಗಾರನನ್ನ ಖರೀದಿಸಿದ ಧೋನಿ ಟೀಂ!
ಐಪಿಎಲ್ ಮಿಸಿ ಹರಾಜಿನಲ್ಲಿ ಕರ್ನಾಟಕದ ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ ಸೇರಿದಂತೆ ಟೀಂ ಇಂಡಿಯಾಗೆ ಆಡಿದ ಪ್ರಮುಖ ಸದ್ಯ ಆರ್‌ಸಿಬಿ ತಂಡದಲ್ಲಿರುವ ಏಕೈಕ ಕನ್ನಡಿಗ ಆಟಗಾರ ಎಂಬ ಹೆಗ್ಗಳಿಕೆಗೆ ಮನೋಜ್ ಭಂಡಾಜೆ ಪಾತ್ರರಾಗಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಹಾಗೂ ಬಲಗೈ ಮಧ್ಯಮ ವೇಗದ ಬೌಲರ್ ಆಗಿರುವ ಮನೋಜ್ ಭಂಡಾಜೆ, 2019ರಲ್ಲಿ ಸೈಯದ್ ಮುಷ್ತಾಕ್ ಆಲಿ ಟೂರ್ನಿ ಮೂಲಕ ದೇಶಿಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.
Joining RCB’s #ClassOf2023:
Name: Manoj Bhandage
Price: 20LWelcome to the RCB family! ❤️#PlayBold #WeAreChallengers #IPL2023 #IPL2023Auction pic.twitter.com/EUciqVripw
— Royal Challengers Bangalore (@RCBTweets) December 23, 2022
ಮನೋಜ್ ಭಂಡಾಜೆ ಬೆನ್ನಲ್ಲೇ ಮತ್ತೊರ್ವ ಯುವ ಕ್ರಿಕೆಟಿಗ, ಉತ್ತರಾಖಂಡದ ರಾಜನ್ ಕುಮಾರ್‌ಗೆ ಆರ್‌ಸಿಬಿ ಮಣೆ ಹಾಕಿದ್ದು, 20 ಲಕ್ಷ ರೂಪಾಯಿ ಮೂಲ ಬೆಲೆಯ ರಾಜನ್ ಕುಮಾರ್‌ಗೆ 70 ಲಕ್ಷ ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿದೆ. ಸದ್ಯ ಐಪಿಎಲ್ 2023 ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಆಟಗಾರರನ್ನು ಗಮನಿಸಿದರೆ ವಿಲ್ ಜಾಕ್ಸ್, 3.2 ಕೋಟಿ ,ರೀಸ್ ಟಾಪ್ಲೆ 1.90 ಕೋಟಿ ರೂಪಾಯಿ,ಹಿಮಾಂಶು ಶರ್ಮಾ 20, ಮನೋಜ್ ಭಂಡಾಜೆ, 20 ಲಕ್ಷ ರೂಪಾಯಿ ತಂಡವನ್ನು ಸೇರಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.