ನವದೆಹಲಿ: ಇಂಗ್ಲೆಂಡ್ ವಿರುದ್ದದ ಐದನೇ ಟೆಸ್ಟ್ ಪಂದ್ಯದಲ್ಲಿ ಪ್ರಾರಂಭದಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ಈಗ ಕನ್ನಡಿಗ ಕೆಎಲ್ ರಾಹುಲ್ ರ ಭರ್ಜರಿ ಅಜೇಯ ಶತಕ (124)ದ ನೆರವಿನಿಂದ ಗೆಲುವಿನ ಆಸೆ ಇನ್ನು ಜೀವಂತವಾಗಿರಿಸಿದೆ.
KL Rahul (108*) makes a fine century to take India to lunch on day five on 167/5, Ali and Stokes claiming the wickets of Rahane and Vihari. India trail England by 296 runs.#ENGvIND LIVE ➡️ https://t.co/LQoNOzv9xA pic.twitter.com/8V8h2IrOlg
— ICC (@ICC) September 11, 2018
ಇಂಗ್ಲೆಂಡ್ ನೀಡಿದ 464 ರನ್ ಗಳ ಸವಾಲನ್ನು ಬೆನ್ನತ್ತಿರುವ ಭಾರತಕ್ಕೆ ಗೆಲುವು ಸಾಧಿಸಲು ಇನ್ನು 251 ರನ್ ಗಳ ಅವಶ್ಯಕತೆ ಇದೆ.ಸದ್ಯ ಭಾರತ ಐದು ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿದೆ. ಇದು ಅಂತಿಮ ದಿನವಾಗಿದ್ದರಿಂದ 54.2 ಓವರ್ ಗಳಲ್ಲಿ ಈ ಗುರಿಯನ್ನು ಭಾರತ ತಲುಪಬೇಕಾಗಿದೆ.
ಈಗಗಾಲೇ ಇಂಗ್ಲೆಂಡ್ ತಂಡವು 3-1 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡು ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ.ಆದರೆ ಈಗ ಭಾರತ ಮಾನವನ್ನು ಉಳಿಸಿಕೊಳ್ಳಲು ಈ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.ಸದ್ಯ ಕ್ರಿಸ್ ನಲ್ಲಿ ಕೆ.ಎಲ್ ರಾಹುಲ್ ಮತ್ತು ರಿಶಬ್ ಪಂತ್ ಬ್ಯಾಟಿಂಗ್ ಮಾಡುತ್ತಿದ್ದಾರೆ.