ನವದೆಹಲಿ: ಭಾರತೀಯ ಬೌಲಿಂಗ್ ವಿಷಯಕ್ಕೆ ಬಂದಾಗ, ಎದುರಾಳಿ ಬ್ಯಾಟ್ಸ್‌ಮನ್‌ಗಳು ಸಾಮಾನ್ಯವಾಗಿ ವೇಗಿಗಳ ಬದಲು ಸ್ಪಿನ್ನರ್‌ಗಳಿಗೆ ಹೆದರುತ್ತಿದ್ದರು.ಕಳೆದ 20-30 ವರ್ಷಗಳಲ್ಲಿ ಸ್ಪಿನ್ ಬೌಲಿಂಗ್ ಯಾವಾಗಲೂ ಭಾರತದ ಶಕ್ತಿಯಾಗಿದೆ. ಆದಾಗ್ಯೂ, ಕಳೆದ 2-3 ವರ್ಷಗಳಲ್ಲಿ, ವೇಗದ ಬೌಲಿಂಗ್ ವಿಭಾಗವು ಸಾಕಷ್ಟು ಬದಲಾವಣೆಗೊಂಡಿದೆ.
ಸದ್ಯ ಭಾರತ ತಂಡವು ವಿಶ್ವದ ಅತ್ಯಂತ ಉತ್ತಮ ಬೌಲಿಂಗ್ ಘಟಕಗಳಲ್ಲಿ ಒಂದಾಗಿದೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮಾ, ಮತ್ತು ಉಮೇಶ್ ಯಾದವ್ ಮುಂತಾದವರು ಸಾಗರೋತ್ತರ ಪರಿಸ್ಥಿತಿಗಳಲ್ಲಿಯೂ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ವೇಗದ ಬೌಲರ್ ಗಳು ನಿರಂತರವಾಗಿ ವಿಕೆಟ್ ಗಳಿಸುವುದರಿಂದಾಗಿ ಕೆಲವು ಪಂದ್ಯಗಳಲ್ಲಿ ಸ್ಪಿನರ್ ಗಳಿಗೂ ಅವಕಾಶ ಸಿಗುವುದು ಕಷ್ಟಕರವಾಗಿದೆ.
ಆದರೆ ಭಾರತದಲ್ಲಿ ವೇಗದ ಬೌಲಿಂಗ್ ನಲ್ಲಿ ಕ್ರಾಂತಿ ಮಾಡಿದವರು ಕನ್ನಡಿಗ ಜಾವಗಲ್ ಶ್ರೀನಾಥ್ (Javagal Srinath) ಎನ್ನುತ್ತಾರೆ ವಿವಿಎಸ್ ಲಕ್ಷ್ಮಣ್, ಮೈಸೂರಿನಿಂದ ಬಂದ ವೇಗದ ಬೌಲರ್ ಭಾರತದ ವೇಗದ ಬೌಲಿಂಗ್ನಲ್ಲಿ ಕ್ರಾಂತಿಯನ್ನು ಪ್ರಾರಂಭಿಸಿದರು. ಹೆಚ್ಚಿನ ಅನುಕೂಲವಿಲ್ಲದ ಪರಿಸ್ಥಿತಿಗಳಲ್ಲಿ ಸಹ, ಅವರು ಉತ್ಸಾಹದಿಂದ ಪ್ರತಿಕ್ರಿಯಿಸಿದರು. ಪ್ರತಿಕೂಲ ಪರಿಸ್ಥಿತಿಗಳಲ್ಲಿ ಪ್ರದರ್ಶನ ನೀಡಲು ಅವರಿಗಿದ್ದ ಹಸಿವು ಶ್ರೀನಾಥ್ ಶಕ್ತಿ ”ಎಂದು ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.
A tearaway fast bowler from a relative cricketing outpost of Mysore,he triggered a revolution in Indian pace bowling. Even in most unhelpful conditions,he always responded to the team’s needs with unflinching zeal. Sri’s strength was his hunger to perform under adverse conditions pic.twitter.com/zEwy36lrDT
— VVS Laxman (@VVSLaxman281) June 4, 2020
1991 ರ ಅಕ್ಟೋಬರ್‌ನಲ್ಲಿ ಪಾಕಿಸ್ತಾನ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಶ್ರೀನಾಥ್ ಅವರು ಭಾರತದ ಪರವಾಗಿ 67 ಟೆಸ್ಟ್ ಮತ್ತು 229 ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು ಕ್ರಮವಾಗಿ 236 ಮತ್ತು 315 ವಿಕೆಟ್ಗಳನ್ನು ಗಳಿಸಿದ್ದಾರೆ.
ಲಕ್ಷ್ಮಣ್ ಅವರು ಆಡಿದ ಮತ್ತು ಅವರ ಮತ್ತು ಅವರ ವೃತ್ತಿಜೀವನದ ಮೇಲೆ ಪ್ರಭಾವ ಬೀರಿದ ಕೆಲವು ಕ್ರಿಕೆಟಿಗರಿಗೆ ಗೌರವ ಸಲ್ಲಿಸುತ್ತಿದ್ದಾರೆ. ಶ್ರೀನಾಥ್ ಅವರಲ್ಲದೆ, ಇದುವರೆಗೆ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಅವರಿಗೆ ಗೌರವ ಸಲ್ಲಿಸಿದ್ದಾರೆ.