ಓವರೊಂದರಲ್ಲಿ ಆರು ಸಿಕ್ಸರ್ ಬಾರಿಸಿದ ರವೀಂದ್ರ ಜಡೇಜಾ

    

Last Updated : Dec 16, 2017, 05:24 PM IST
ಓವರೊಂದರಲ್ಲಿ ಆರು ಸಿಕ್ಸರ್ ಬಾರಿಸಿದ ರವೀಂದ್ರ ಜಡೇಜಾ title=

ನವದೆಹಲಿ: ಕೆಲವು ದಿನಗಳಿಂದ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಉಳಿದಿದ್ದ ರವಿಂದ್ರ ಜಡೇಜಾ ಈಗ ಅಂತರ್ ಜಿಲ್ಲಾ ಕ್ರಿಕೆಟ್ ಟೂರ್ನಿಯಲ್ಲಿ ಓವರ್ ಒಂದರಲ್ಲಿ ಸತತ ಆರು ಸಿಕ್ಸರ್ ಗಳನ್ನು ಬಾರಿಸುವುದರ ಮೂಲಕ ದಾಖಲೆಯ ಪಟ್ಟಿಗೆ ಸೇರಿದರು. 

ಸೌರಾಷ್ಟ್ರದ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಜಾಮ್ ನಗರ ಮತ್ತು  ಅಮ್ರೇಲಿ ವಿರುದ್ದದ  T20 ಟೂರ್ನಿಯಲ್ಲಿ ಆರು ಸಿಕ್ಸರ್ ಸಿಡಿಸುವುದರ ಮೂಲಕ  69 ಎಸೆತಗಳಲ್ಲಿ 154 ರನ್ ಗಳನ್ನು ಸಿಡಿಸಿದರು.ಆ ಮೂಲಕ ತಮ್ಮ ತಂಡ ಜಾಮ್ ನಗರಕ್ಕೆ 121 ರನ್ ಗಳ ಅಂತರ ಬಾರಿ ಗೆಲುವಿಗೆ ಕಾರಣರಾದರು.ಅಲ್ಲದೆ ಸತತ ಓವರ್ ಒಂದರರಲ್ಲಿ ಆರು ಸಿಕ್ಸರ್ ಗಳಿಸಿದ ಮೂರನೆಯ ಭಾರತೀಯ ಎನ್ನುವ ಖ್ಯಾತಿಗೆ ಪಾತ್ರರಾದರು.

ಈ ಹಿಂದೆ ರವಿ ಶಾಸ್ತ್ರೀ 1985 ರಲ್ಲಿ ರಣಜಿ ಪಂದ್ಯವೊಂದರಲ್ಲಿ ಈ ಸಾಧನೆಗೈದಿದ್ದರು  ಮತ್ತು ಯುವರಾಜ್ ಸಿಂಗ್  ವಿಶ್ವಕಪ್ T20 ಟೂರ್ನಿಯಲ್ಲಿ ಇಂಗ್ಲೆಂಡ ವಿರುದ್ದ 6 ಸಿಕ್ಸರ್  ಬಾರಿಸಿದ್ದನ್ನು ನಾವು ಸ್ಮರೀಸಬಹುದು.

Trending News