IPL 2023: 14 ಎಸೆತದಲ್ಲಿ 64 ರನ್! ವಿಶ್ವಕಪ್’ಗೂ ಮುನ್ನ ‘ಜೋಶ್’ನಿಂದ ಆಟವಾಡ್ತಿದ್ದಾನೆ ಈ ಸ್ಟಾರ್ ಪ್ಲೇಯರ್

Jos Buttler Innings: ರಾಜಸ್ಥಾನ್ ರಾಯಲ್ಸ್ ಸ್ಟಾರ್ ಬ್ಯಾಟ್ಸ್‌ ಮನ್ ಜೋಸ್ ಬಟ್ಲರ್ ಭಾನುವಾರ ಐಪಿಎಲ್-2023 ರಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ವಿರುದ್ಧ ಬಿರುಸಿನ ಬ್ಯಾಟಿಂಗ್ ಮಾಡಿದ್ದಾರೆ. ಅವರು ಕೇವಲ 5 ರನ್‌ ಗಳಿಂದ ಋತುವಿನ ಮೊದಲ ಶತಕವನ್ನು ಕಳೆದುಕೊಂಡರೂ ಸಹ ಅವರ ಬ್ಯಾಟಿಂಗ್ ಜನಮನ ಗೆದ್ದಿದೆ.

Written by - Bhavishya Shetty | Last Updated : May 8, 2023, 07:50 AM IST
    • ರಾಜಸ್ಥಾನ್ ರಾಯಲ್ಸ್ ಸ್ಟಾರ್ ಬ್ಯಾಟ್ಸ್‌ ಮನ್ ಜೋಸ್ ಬಟ್ಲರ್
    • ಐಪಿಎಲ್-2023 ರಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ವಿರುದ್ಧ ಬಿರುಸಿನ ಬ್ಯಾಟಿಂಗ್ ಮಾಡಿದ್ದಾರೆ.
    • ರಾಜಸ್ಥಾನ ಜಸ್ಟ್ 2 ವಿಕೆಟ್‌ ನಷ್ಟಕ್ಕೆ 214 ರನ್‌ ಗಳ ದೊಡ್ಡ ಸ್ಕೋರ್ ಮಾಡಿದೆ
IPL 2023: 14 ಎಸೆತದಲ್ಲಿ 64 ರನ್! ವಿಶ್ವಕಪ್’ಗೂ ಮುನ್ನ ‘ಜೋಶ್’ನಿಂದ ಆಟವಾಡ್ತಿದ್ದಾನೆ ಈ ಸ್ಟಾರ್ ಪ್ಲೇಯರ್ title=
Jos Buttler

IPL 2023: ಭಾರತದ ಆತಿಥ್ಯದಲ್ಲಿ ಈ ವರ್ಷ ODI ವಿಶ್ವಕಪ್-2023 ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ಆಟಗಾರರು ತಮ್ಮದೇ ಆದ ರೀತಿಯಲ್ಲಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕೆಲವರು ಇಂಡಿಯನ್ ಪ್ರೀಮಿಯರ್ ಲೀಗ್‌ ನ (ಐಪಿಎಲ್-2023) 16ನೇ ಸೀಸನ್ ನಲ್ಲಿ ಬಲವನ್ನು ತೋರಿಸುತ್ತಿದ್ದಾರೆ. ಇನ್ನು ಕಳೆದ ದಿನ ನಡೆದ ಈ ಲೀಗ್‌ ನ ಒಂದು ಪಂದ್ಯದಲ್ಲಿ ಆಟಗಾರನೊಬ್ಬ ತನ್ನ ಬ್ಯಾಟಿಂಗ್ ಶೈಲಿಯಲ್ಲಿ  ಅಬ್ಬರಿಸಿದ್ದು, ವಿಶ್ವಕಪ್‌ ನಲ್ಲಿ ಈತನ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟುಹಾಕುತ್ತಿದೆ.

ಇದನ್ನೂ ಓದಿ: Auspicious Time Of Day: ಆರೋಗ್ಯ ಮತ್ತು ಧಾರ್ಮಿಕ ದೃಷ್ಟಿಯಿಂದ ದಿನದ ಯಾವ ಸಮಯ ಅತ್ಯುತ್ತಮ?

ರಾಜಸ್ಥಾನ್ ರಾಯಲ್ಸ್ ಸ್ಟಾರ್ ಬ್ಯಾಟ್ಸ್‌ ಮನ್ ಜೋಸ್ ಬಟ್ಲರ್ ಭಾನುವಾರ ಐಪಿಎಲ್-2023 ರಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ವಿರುದ್ಧ ಬಿರುಸಿನ ಬ್ಯಾಟಿಂಗ್ ಮಾಡಿದ್ದಾರೆ. ಅವರು ಕೇವಲ 5 ರನ್‌ ಗಳಿಂದ ಋತುವಿನ ಮೊದಲ ಶತಕವನ್ನು ಕಳೆದುಕೊಂಡರೂ ಸಹ ಅವರ ಬ್ಯಾಟಿಂಗ್ ಜನಮನ ಗೆದ್ದಿದೆ. ಜೈಪುರದ ಸವಾಯಿ ಮಾನ್‌ ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ ಜಸ್ಟ್ 2 ವಿಕೆಟ್‌ ನಷ್ಟಕ್ಕೆ 214 ರನ್‌ ಗಳ ದೊಡ್ಡ ಸ್ಕೋರ್ ಮಾಡಿದೆ ಇದರಲ್ಲಿ ಬಟ್ಲರ್ ಅವರ ಕೊಡುಗೆ ಅದ್ಭುತವಾಗಿದೆ.

14 ಎಸೆತಗಳಲ್ಲಿ 64 ರನ್!

ಇಂಗ್ಲೆಂಡ್‌ ನ ಈ ಡ್ಯಾಶಿಂಗ್ ಬ್ಯಾಟ್ಸ್‌ ಮನ್ ವೇಗದ ರೀತಿಯಲ್ಲಿ ರನ್ ಗಳಿಸಿದ್ದಾರೆ. ಅವರು 59 ಎಸೆತಗಳಲ್ಲಿ 95 ರನ್ ಬಾರಿಸಿದ್ದರು. ಈ ಸಂದರ್ಭದಲ್ಲಿ, ಬಟ್ಲರ್ 10 ಬೌಂಡರಿ ಮತ್ತು 4 ಸಿಕ್ಸರ್‌ ಗಳನ್ನು ಸಿಡಿಸಿದ್ದಾರೆ. ಅಂದರೆ, 14 ಎಸೆತಗಳಲ್ಲಿ ಕೇವಲ ಬೌಂಡರಿಗಳೊಂದಿಗೆ 64 ರನ್ ಗಳಿಸಿದ್ದಾರೆ. ಇನಿಂಗ್ಸ್ ನ 19ನೇ ಓವರ್ ನ ಮೂರನೇ ಎಸೆತದಲ್ಲಿ ಹೈದರಾಬಾದ್ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಔಟ್ ಮಾಡಿದರು. ಮೈದಾನದ ಅಂಪೈರ್ ಮೊದಲು ಔಟ್ ನೀಡಿರಲಿಲ್ಲ, ಆದರೆ ಡಿ ಆರ್‌ ಎಸ್ ತೆಗೆದುಕೊಳ್ಳುವ ನಿರ್ಧಾರ ಮಾಡಿದಾಗ ತೀರ್ಮಾನ ಭುವಿಯ ಪರವಾಗಿತ್ತು. ಬಟ್ಲರ್ ನಿರಾಸೆಯಿಂದ ಪೆವಿಲಿಯನ್‌ಗೆ ಮರಳಿದರು.

ಇದನ್ನೂ ಓದಿ: ಜೀ ಕನ್ನಡ ನ್ಯೂಸ್‌ ಚುನಾವಣಾ ಪೂರ್ವ ಫಲಿತಾಂಶ ಪ್ರಕಟ : ಮತದಾರನ ಜೈಕಾರ ಯಾರಿಗೆ..?

ವಿಶ್ವಕಪ್‌ ನಲ್ಲಿ ನಾಯಕತ್ವ!

32 ವರ್ಷದ ಜೋಸ್ ಬಟ್ಲರ್ ಮುಂಬರುವ ಏಕದಿನ ವಿಶ್ವಕಪ್‌ ನಲ್ಲಿ ಇಂಗ್ಲೆಂಡ್‌ ಗೆ ವಿಕೆಟ್‌ ಕೀಪಿಂಗ್ ಮಾತ್ರವಲ್ಲದೆ ನಾಯಕತ್ವವನ್ನೂ ನಿಭಾಯಿಸಲಿದ್ದಾರೆ. ಹೀಗಿರುವಾಗ ಅಭಿಮಾನಿಗಳು ಕೂಡ ಅವರ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಬಟ್ಲರ್ ಇದುವರೆಗೆ 165 ಪಂದ್ಯಗಳಲ್ಲಿ 4647 ರನ್ ಗಳಿಸಿದ್ದಾರೆ. ಈ ವೇಳೆ 11 ಶತಕ ಮತ್ತು 24 ಅರ್ಧ ಶತಕಗಳನ್ನು  ಬಾರಿಸಿದ್ದಾರೆ ಬಟ್ಲರ್.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News