IPL 2024 : ಅತ್ಯಂತ ವೇಗದ ಬೌಲರ್ ಎಂಬ ದಾಖಲೆ ನಿರ್ಮಿಸಿದ ಮಾಯಾಂಕ್ ಯಾದವ್

IPL 2024 : ಐಪಿಎಲ್ 2024ರ 15 ನೇ ಪಂದ್ಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಪಂದ್ಯವು ಲಕ್ನೋ ಸೂಪರ್ ಜೇಂಟ್ಸ್ ಹಾಗೂ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ವಿರುದ್ಧ ನಡೆಯಿತು. ಈ ಪಂದ್ಯದಲ್ಲಿ  ಲಕ್ನೋ ಸೂಪರ್ ಜೇಂಟ್ಸ್  ತಂಡ 28 ರನ್ ಗಳಿಂದ ಪಂದ್ಯ ಗೆದ್ದುಕೊಂಡಿತು.   

Written by - Zee Kannada News Desk | Last Updated : Apr 3, 2024, 03:22 PM IST
  • ಇವರ ಬೌಲಿಂಗ್ ನಿಂದ RCB ಅಗ್ರ ಕ್ರಮಾಂಕವನ್ನು ನಾಶ ಮಾಡುವ ಮೂಲಕ ಮಾಯಾಂಕ್ ಯಾದವ್ ಮೊದಲ ಸ್ಥಾನವನ್ನು ಪಡೆದುಕೊಂಡರು.
  • ಸತತವಾಗಿ 150 kmph-ಪ್ಲಸ್ ವೇಗದ ಬೌಲಿಂಗ್ ಮಾಡಿದ್ದಾರೆ.
  • ತನ್ನ ಮೊದಲ ಎರಡು ಪಂದ್ಯಗಳಲ್ಲಿ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿಯನ್ನು ಗೆದ್ದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಮಯಾಂಕ್ ಇತಿಹಾಸವನ್ನು ಬರೆದಿದ್ದಾರೆ.
IPL 2024 : ಅತ್ಯಂತ ವೇಗದ ಬೌಲರ್ ಎಂಬ ದಾಖಲೆ ನಿರ್ಮಿಸಿದ ಮಾಯಾಂಕ್ ಯಾದವ್ title=

ಮಂಗಳವಾರ  ನಡೆದ ಎಲ್ ಎಸ್ ಜಿ ಹಾಗೂ ಆರ್ ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಎಲ್ ಎಸ್ ಜಿಯ ಬೌಲರ್ ಮಯಾಂಕ್ ಯಾದವ್ ವೇಗದ ಬೌಲಿಂಗ್ ಅನ್ನು ಪ್ರದರ್ಶಿಸುವ ಮೂಲಕ ಅತ್ಯಂತ ವೇಗದ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ನಿನ್ನೆಯ ಮ್ಯಾಚ್ ನಲ್ಲಿ ಮೂರು ವಿಕೆಟ್ ಪಡೆದುಕೊಂಡು ಅತ್ಯುತ್ತಮ ಪ್ರದರ್ಶನ ತೋರಿದರು. 

ಇದನ್ನು ಓದಿ : ʻಅನಿಮಲ್ʼ ಸಿನಿಮಾ ಸಾಂಗ್‌ಗೆ ಚೈತ್ರಾ-ಕಿಶನ್ ಸಖತ್‌ ಬೋಲ್ಡ್ ಡ್ಯಾನ್ಸ್ ಮೂವ್ಸ್: ವೈರಲ್‌ ವಿಡಿಯೋ!

ಇವರ ಬೌಲಿಂಗ್ ನಿಂದ  RCB ಅಗ್ರ ಕ್ರಮಾಂಕವನ್ನು ನಾಶ ಮಾಡುವ ಮೂಲಕ ಮಾಯಾಂಕ್ ಯಾದವ್ ಮೊದಲ ಸ್ಥಾನವನ್ನು ಪಡೆದುಕೊಂಡರು. 

ಕೇವಲ ಎರಡು ಪಂದ್ಯಗಳಲ್ಲಿ, ಮಾಯಾಂಕ್ ಅವರ ವೇಗದ ವ್ಯಾಪಕವಾದ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ ಮತ್ತು  ಸತತವಾಗಿ 150 kmph-ಪ್ಲಸ್ ವೇಗದ ಬೌಲಿಂಗ್ ಮಾಡಿದ್ದಾರೆ. 

RCB ವಿರುದ್ಧದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ ಕೇವಲ 14 ರನ್‌ಗಳನ್ನು ನೀಡಿ ೩ ವಿಕೆಟ್ ಗಳನ್ನು ಪಡೆದುಕೊಂಡು 'ಪ್ಲೇಯರ್ ಆಫ್ ದಿ ಮ್ಯಾಚ್' ಗೌರವವನ್ನು ಗಳಿಸಿದರು.

ಇದನ್ನು ಓದಿ : ಈ 5 ತರಕಾರಿಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತವೆ!

ಐಪಿಎಲ್ ಇತಿಹಾಸದಲ್ಲಿ ತನ್ನ ಮೊದಲ ಎರಡು ಪಂದ್ಯಗಳಲ್ಲಿ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿಯನ್ನು ಗೆದ್ದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಮಯಾಂಕ್ ಇತಿಹಾಸವನ್ನು ಬರೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News