ಧೋನಿ ಕನಸು ನನಸಾಗಿಸಲಿದ್ದಾರೆ ಈ 3 ಆಟಗಾರರು : 5ನೇ ಭಾರಿಗೆ IPL ಪ್ರಶಸ್ತಿಗೆ ಮುತ್ತಿಕ್ಕಲಿದೆ CSK

ಈ ತಂಡದಲ್ಲಿ ಮೂವರು ಅಪಾಯಕಾರಿ ಆಟಗಾರರಿದ್ದು, ಅವರಿಗೆ ಐಪಿಎಲ್  ಐದನೇ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದಾರೆ. ಆ ಮೂವರು ಆಟಗಾರರು ಯಾರು?  ಅವರ ಸಂಪೂರ್ಣ ಮಾಹಿತಿ ನಿಮಗಾಗಿ ಇಲ್ಲಿದೆ..

Written by - Channabasava A Kashinakunti | Last Updated : Mar 26, 2022, 02:05 PM IST
  • ಸಿಎಸ್‌ಕೆ ನಾಲ್ಕು ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ
  • ಈ ಆಟಗಾರರು ಅತ್ಯುತ್ತಮ ಫಾರ್ಮ್‌ನಲ್ಲಿ ಆಡುತ್ತಾರೆ
  • ಐಪಿಎಲ್ 2022 ಮಾರ್ಚ್ 26 ರಿಂದ ಆರಂಭವಾಗಲಿದೆ
ಧೋನಿ ಕನಸು ನನಸಾಗಿಸಲಿದ್ದಾರೆ ಈ 3 ಆಟಗಾರರು : 5ನೇ ಭಾರಿಗೆ IPL ಪ್ರಶಸ್ತಿಗೆ ಮುತ್ತಿಕ್ಕಲಿದೆ CSK title=

ನವದೆಹಲಿ : ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಸಿಎಸ್‌ಕೆ ತಂಡವೂ ಒಂದು. ಮಹೇಂದ್ರ ಸಿಂಗ್ ಧೋನಿ ಅವರ ವರ್ಚಸ್ವಿ ನಾಯಕತ್ವದಲ್ಲಿ ತಂಡವು ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ಈ ಬಾರಿ ತಂಡದ ಕಮಾಂಡ್ ರವೀಂದ್ರ ಜಡೇಜಾ ಕೈಯಲ್ಲಿದೆ. CSK ತಂಡವು ಅನೇಕ ಮ್ಯಾಚ್ ವಿನ್ನರ್ ಆಟಗಾರರನ್ನು ಒಳಗೊಂಡಿದೆ. ಈ ತಂಡದಲ್ಲಿ ಮೂವರು ಅಪಾಯಕಾರಿ ಆಟಗಾರರಿದ್ದು, ಅವರಿಗೆ ಐಪಿಎಲ್  ಐದನೇ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದಾರೆ. ಆ ಮೂವರು ಆಟಗಾರರು ಯಾರು?  ಅವರ ಸಂಪೂರ್ಣ ಮಾಹಿತಿ ನಿಮಗಾಗಿ ಇಲ್ಲಿದೆ..

1. ರುತುರಾಜ್ ಗಾಯಕ್ವಾಡ್

ರುತುರಾಜ್ ಗಾಯಕ್ವಾಡ್(Ruturaj Gaikwad) ತಮ್ಮ ಅತ್ಯಂತ ಅಪಾಯಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಓಪನಿಂಗ್ ಮಾಡುವಾಗ, ರಿತುರಾಜ್ ಸಿಎಸ್‌ಕೆಗಾಗಿ ಅನೇಕ ಪಂದ್ಯಗಳನ್ನು ಏಕಾಂಗಿಯಾಗಿ ಗೆದ್ದಿದ್ದಾರೆ. ಪ್ರತಿ ಬಾಲಿಗು ಇವನ ಬತ್ತಳಿಕೆಯಲ್ಲಿ ಬ್ಯಾಟಿಂಗ್ ಹೊಡೆತ ಇದೆ, ಅದು ಎದುರಾಳಿ ತಂಡವನ್ನು ನಡುಗಿಸಲಿ ಒಳ್ಳೆಯ ಅಸ್ತ್ರವಾಗಿದೆ. ಇವನ ಬ್ಯಾಟಿಂಗ್ ಗೆ ಎದುರಾಳಿ ಪಾಳೆಯದ ಬೌಲರ್‌ಗಳು ನಡುಗುತ್ತಾರೆ. ರುತುರಾಜ್ ಗಾಯಕ್ವಾಡ್ ಐಪಿಎಲ್ 2021 ರಲ್ಲಿ ತಮ್ಮ ಆಟದ ಮೂಲಕ ಎಲ್ಲರ ಹೃದಯವನ್ನು ಗೆದಿದ್ದಾರೆ. ಇವರು 14 ಪಂದ್ಯಗಳಲ್ಲಿ 636 ರನ್ ಗಳಿಸಿದ್ದಾರೆ, ಇವರು ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನ ಕೀರ್ತಿಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ : IPL 2022: ಮೊದಲ ಬಾರಿಗೆ ಐಪಿಎಲ್ ಪ್ರವೇಶಿಸಲಿದೆ ಲಕ್ನೋ ಸೂಪರ್ ಜೈಂಟ್ಸ್

2. ರವೀಂದ್ರ ಜಡೇಜಾ

ಮಹೇಂದ್ರ ಸಿಂಗ್ ಧೋನಿ(MS Dhoni) ನಾಯಕತ್ವ ತೊರೆದ ನಂತರ ರವೀಂದ್ರ ಜಡೇಜಾ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ಈ ಬಾರಿ ಅವರಿಗೆ ಮಹತ್ವದ ಜವಾಬ್ದಾರಿ ವಹಿಸಲಾಗಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಸಂಪೂರ್ಣವಾಗಿ ನಿಭಾಹಿಸುವ ರವೀಂದ್ರ ಜಡೇಜಾ ಸಿಎಸ್‌ಕೆ ತಂಡಕ್ಕೆ ಆ ತ್ರಿಶೂಲದಂತಿದ್ದಾರೆ. ಅವರ ಸ್ಪಿನ್‌ ಮ್ಯಾಜಿಕ್ ಎದುರಾಳಿ ತಂಡಗಳಿಗೆ ಚೆನ್ನಾಗಿ ಗೊತ್ತಿದೆ ಮತ್ತು ಅವರು ತುಂಬಾ ಮಿತವ್ಯಯದಿಂದ ಬೌಲಿಂಗ್ ಮಾಡುತ್ತಾರೆ. ಅವರ ಎಸೆತಕ್ಕೆ ರನ್ ಗಳಿಸುವುದು ಅಷ್ಟು ಸುಲಭವಲ್ಲ. ಡೆತ್ ಓವರ್ ಗಳಲ್ಲಿಯೂ ಅವರು ಬಿರುಸಿನ ಬ್ಯಾಟಿಂಗ್ ಮಾಡುತ್ತಾರೆ. ಕಳೆದ ಐಪಿಎಲ್ ಸೀಸನ್‌ನಲ್ಲಿ ನಾವು ಈ ದೃಶ್ಯವನ್ನು ನೋಡಿದ್ದೇವೆ. ಹರ್ಷಲ್ ಪಟೇಲ್ ಅವರ ಒಂದು ಓವರ್‌ನಲ್ಲಿ ಅವರು 37 ರನ್ ನೀಡಿದಾಗ. ಮೈದಾನದಲ್ಲಿ ಅವರ ಚುರುಕುತನ ಹೇಗಿದೆ ಎಂಬುವುದು ಕಣ್ಣಿಗೆ ಬಿದ್ದಿದೆ.

3. ದೀಪಕ್ ಚಹಾರ್

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2022 ಪ್ರಶಸ್ತಿಯನ್ನು ಗೆದ್ದು ಬಿಗಿತು. ಇದರಲ್ಲಿ ಪ್ರಮುಖ ಕೊಡುಗೆ ನೀಡಿದವರು ದೀಪಕ್ ಚಹಾರ್(Deepak Chahar). ಚಹರ್ ಅಪಾಯಕಾರಿ ಬೌಲಿಂಗ್ ಮಾಡುತ್ತಾರೆ. ನಾಯಕ ಮಹೇಂದ್ರ ಸಿಂಗ್ ಧೋನಿಗೆ ವಿಕೆಟ್ ಬೇಕೆನಿಸಿದಾಗಲೆಲ್ಲ. ಇವರು ದೀಪಕ್ ಚಹಾರ್ ಅವರ ಸಂಖ್ಯೆಯನ್ನು ತಿರುಗಿಸುತ್ತಿದ್ದರು. ದೀಪಕ್ ಚಹಾರ್ ಭಾರತದ ಪಿಚ್‌ಗಳಲ್ಲಿ ರಾಕ್ಷಸನಂತೆ ವಿಕೆಟ್ ತೆಗೆಯುತ್ತಾರೆ. ಚಹರ್ ಐಪಿಎಲ್‌ನ 69 ಪಂದ್ಯಗಳಲ್ಲಿ 59 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ : IPL 2022, CSK vs KKR: ವಾಂಖೆಡೆ ಸ್ಟೇಡಿಯಂನಲ್ಲಿ ಮೊದಲು ಬ್ಯಾಟ್ ಮಾಡುವುದು ಎಷ್ಟು ಪ್ರಯೋಜನಕಾರಿ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News