IPL 2022: ಅಮೋಘ ಪ್ರದರ್ಶನ ನೀಡುತ್ತಿರುವ ಫಾಸ್ಟ್ ಬೌಲರ್ .! ಜಹೀರ್ ಖಾನ್ ಗೆ ಹೋಲಿಸುತ್ತಿರುವ ಫ್ಯಾನ್ಸ್

IPL 2022 : ಇತ್ತೀಚಿನ  ದಿನಗಳಲ್ಲಿ ಈ ಫಾಸ್ಟ್ ಬೌಲರ್ ತನ್ನ ಕಿಲ್ಲರ್ ಬೌಲಿಂಗ್‌ ಮೂಲಕ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ದೊಡ್ಡದೊಡ್ಡ  ಬ್ಯಾಟ್ಸ್‌ಮನ್ ಗಳನ್ನೂ ಕೂಡಾ ತನ್ನ ಬೌಲಿಂಗ್ ಮ್ಯಾಜಿಕ್ ಮೂಲಕ ಕಟ್ಟಿ ಹಾಕುತ್ತಿದ್ದಾರೆ.  ಇದೀಗ ಅಭಿಮಾನಿಗಳು ಕೂಡಾ ಇವರನ್ನು ಜಹೀರ್ ಖಾನ್ ಅವರೊಂದಿಗೆ ಹೋಲಿಸುತ್ತಿದ್ದಾರೆ.  

Written by - Ranjitha R K | Last Updated : May 19, 2022, 09:00 AM IST
  • ಲಕ್ನೋ ಸೂಪರ್ ಜೈಂಟ್ಸ್ ನ ಫಾಸ್ಟ್ ಬೌಲರ್
  • ಅಭಿಮಾನಿಗಳಿಂದ ಅಪಾರ ಪ್ರೀತಿ ಗಳಿಸುತ್ತಿರುವ ಸೂಪರ್ ಬೌಲರ್
  • ಜಹೀರ್ ಖಾನ್ ಜೊತೆ ಹೋಲಿಸುತ್ತಿರುವ ಫ್ಯಾನ್ಸ್
IPL 2022: ಅಮೋಘ ಪ್ರದರ್ಶನ ನೀಡುತ್ತಿರುವ ಫಾಸ್ಟ್ ಬೌಲರ್ .!  ಜಹೀರ್ ಖಾನ್ ಗೆ ಹೋಲಿಸುತ್ತಿರುವ ಫ್ಯಾನ್ಸ್  title=
mohsin khan bowling (file photo)

ನವದೆಹಲಿ : ಲಕ್ನೋ ಸೂಪರ್ ಜೈಂಟ್ಸ್ ನ ಫಾಸ್ಟ್ ಬೌಲರ್ ಇತ್ತೀಚಿನ ದಿನಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಎಂಥ ಬ್ಯಾಟ್ಸ್‌ಮನ್ ಕೂಡಾ ಈ ಬೌಲರ್‌ ಮುಂದೆ ತತ್ತರಿಸಿ ಹೋಗುತ್ತಾರೆ. ಅಭಿಮಾನಿಗಳು ಕೂಡಾ ಇದೀಗ ಈ ಬೌಲರ್ ಮೋಡಿಗೆ ಬೆರಗಾಗಿದ್ದಾರೆ. ಭಾರತದ ಶ್ರೇಷ್ಠ ಫಾಸ್ಟ್ ಬೌಲರ್ ಜಹೀರ್ ಖಾನ್ ಅವರೊಂದಿಗೆ ಈ ಬೌಲರ್ ಅವರನ್ನು ಹೋಲಿಕೆ ಮಾಡಲಾಗುತ್ತಿದೆ. 

ಐಪಿಎಲ್‌ನ ಈ ಸೀಸನ್ ನಲ್ಲಿ ಅನೇಕ ಫಾಸ್ಟ್ ಬೌಲರ್‌ಗಳಿದ್ದಾರೆ. ಅವರು ಶೀಘ್ರದಲ್ಲೇ ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡರೂ ಆಶ್ಚರ್ಯವಿಲ್ಲ. ಈ ಪೈಕಿ ಮೊಹ್ಸಿನ್ ಖಾನ್ ಹೆಸರು ಸಾಕಷ್ಟು ಚರ್ಚೆಯಲ್ಲಿದೆ. ಈ ಬಾರಿಯ ಐಪಿಎಲ್‌ನಲ್ಲಿ ಮೊಹ್ಸಿನ್ ಖಾನ್ ಬೌಲಿಂಗ್ ಮಾಡುತ್ತಿರುವ ರೀತಿ ನೋಡಿದರೆ ಅವರು ಟೀಂ ಇಂಡಿಯಾ ಪರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ  ಮೈದಾನಕ್ಕಿಳಿಯುವ ದಿನಗಳು ದೂರವಿಲ್ಲ ಎನ್ನಲಾಗಿದೆ. 

ಇದನ್ನೂ ಓದಿ : LSG vs KKR: ಲಕ್ನೋ-ಕೊಲ್ಕತ್ತಾ‌ ಫೈಟ್‌: ಪ್ಲೇ ಆಫ್‌ ಪ್ರವೇಶಿಸುತ್ತಾ ʼಕನ್ನಡಿಗʼನ ತಂಡ!

ಲಕ್ನೋ ಸೂಪರ್ ಜೈಂಟ್ಸ್ ಗೆಲುವಿನಲ್ಲಿ ಬಹು ದೊಡ್ಡ ಪಾತ್ರ :
23 ವರ್ಷದ ವೇಗದ ಬೌಲರ್ ಮೊಹ್ಸಿನ್ ಖಾನ್ ಬುಧವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 2 ರನ್‌ಗಳ ರೋಚಕ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮೊಹ್ಸಿನ್ ಖಾನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 4 ಓವರ್‌ಗಳಲ್ಲಿ 20ಕ ರನ್  ನೀಡಿ  3 ವಿಕೆಟ್ ಕಬಳಿಸಿದ್ದಾರೆ. 

'ಜಹೀರ್ ಖಾನ್' ಗೆ ಹೋಲಿಸಿದ ಫ್ಯಾನ್ಸ್ : 
ಮೊಹ್ಸಿನ್ ಖಾನ್ ಅವರು ತಮ್ಮ ಅತ್ಯುತ್ತಮ ಬೌಲಿಂಗ್ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ನ ಅಪಾಯಕಾರಿ ಬ್ಯಾಟ್ಸ್‌ಮನ್ ಆಂಡ್ರೆ ರಸೆಲ್ ಅವರನ್ನು ಔಟ್ ಮಾಡಿ, ಪಂದ್ಯದ ಫಲಿತಾಂಶವನ್ನೇ ಬದಲಿಸಿದ್ದಾರೆ. ಆಂಡ್ರೆ ರಸೆಲ್  ಅವರನ್ನು ಕೇವಲ 5 ರನ್‌ಗಳಲ್ಲೇ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಮೊಹ್ಸಿನ್ ಖಾನ್. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮೊಹ್ಸಿನ್ ಖಾನ್ ಅವರನ್ನು  ಎರಡನೇ ಜಹೀರ್ ಖಾನ್ ಎಂದು  ಕರೆದು ಸಂಭ್ರಮಿಸುತ್ತಿದ್ದಾರೆ. 

ಇದನ್ನೂ ಓದಿ :  MI vs SRH, IPL 2022: ಮುಂಬೈಗೆ ನಿರಾಸೆ, ಹೈದರಾಬಾದ್‌ಗೆ ರೋಚಕ ಗೆಲುವು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News