IND vs AUS: ಟೆಸ್ಟ್ ಆರಂಭ ದಿನವೇ ಇಂಡೋ-ಆಸೀಸ್ ಕಿತ್ತಾಟ! ಸ್ಮಿತ್ ವಿರುದ್ಧ ಸಿಡಿದೆದ್ದ ಸಿರಾಜ್ ಮೈದಾನದಲ್ಲಿ ಮಾಡಿದ್ದೇನು?

IND vs AUS, 1st Test: ಮೊಹಮ್ಮದ್ ಸಿರಾಜ್ ಮತ್ತು ಸ್ಟೀವ್ ಸ್ಮಿತ್ ನಡುವಿನ ಈ ಕಿತ್ತಾಟ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯು ಪ್ರಾರಂಭವಾಗುತ್ತಿದ್ದಂತೆಯೇ ಅದಕ್ಕೆ ಮಸಾಲೆ ಸೇರಿಸಿದೆ. ಇನ್ನು ಇಂಡೋ ಆಸೀಸ್ ಪಂದ್ಯದಲ್ಲಿ ಇಂತಹ ವಿಚಾರಗಳು ಮುನ್ನೆಲೆಗೆ ಬರುವುದು ಹೊಸತೇನಲ್ಲ. ಈ ಉಭಯ ತಂಡಗಳು ಪಂದ್ಯಕ್ಕಿಂತ ಮೈದಾನದಲ್ಲಿ ಕಿತ್ತಾಡಿಕೊಂಡಿದ್ದೇ ಹೆಚ್ಚು.

Written by - Bhavishya Shetty | Last Updated : Feb 9, 2023, 03:37 PM IST
    • ನಾಗ್ಪುರದಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯ
    • ಭಾರತ ಮತ್ತು ಆಸ್ಟ್ರೇಲಿಯಾ ಆಟಗಾರರ ನಡುವೆ ಮನಸ್ತಾಪ ಕಂಡುಬಂದ ಪ್ರಕರಣ
    • ಮೊಹಮ್ಮದ್ ಸಿರಾಜ್-ಸ್ಟೀವ್ ಸ್ಮಿತ್ ನಡುವಿನ ಘರ್ಷಣೆಯ ಫೋಟೋಗಳು ವೈರಲ್
IND vs AUS: ಟೆಸ್ಟ್ ಆರಂಭ ದಿನವೇ ಇಂಡೋ-ಆಸೀಸ್ ಕಿತ್ತಾಟ! ಸ್ಮಿತ್ ವಿರುದ್ಧ ಸಿಡಿದೆದ್ದ ಸಿರಾಜ್ ಮೈದಾನದಲ್ಲಿ ಮಾಡಿದ್ದೇನು? title=
Mohammad Siraj

IND vs AUS, 1st Test: ನಾಗ್ಪುರದಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದ ವೇಳೆ ಭಾರತ ಮತ್ತು ಆಸ್ಟ್ರೇಲಿಯಾ ಆಟಗಾರರ ನಡುವೆ ಮನಸ್ತಾಪ ಕಂಡುಬಂದ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಮತ್ತು ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ನಡುವಿನ ಘರ್ಷಣೆಯ ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಮೊಹಮ್ಮದ್ ಸಿರಾಜ್ ಮತ್ತು ಸ್ಟೀವ್ ಸ್ಮಿತ್ ನಡುವಿನ ಈ ಕಿತ್ತಾಟ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯು ಪ್ರಾರಂಭವಾಗುತ್ತಿದ್ದಂತೆಯೇ ಅದಕ್ಕೆ ಮಸಾಲೆ ಸೇರಿಸಿದೆ. ಇನ್ನು ಇಂಡೋ ಆಸೀಸ್ ಪಂದ್ಯದಲ್ಲಿ ಇಂತಹ ವಿಚಾರಗಳು ಮುನ್ನೆಲೆಗೆ ಬರುವುದು ಹೊಸತೇನಲ್ಲ. ಈ ಉಭಯ ತಂಡಗಳು ಪಂದ್ಯಕ್ಕಿಂತ ಮೈದಾನದಲ್ಲಿ ಕಿತ್ತಾಡಿಕೊಂಡಿದ್ದೇ ಹೆಚ್ಚು.

ಇದನ್ನೂ ಓದಿ: IND vs AUS : ಆಸ್ಟ್ರೇಲಿಯಾ  ವಿರುದ್ದದ ಮೊದಲ ಪಂದ್ಯದಲ್ಲಿಯೇ ಹೊಸ ದಾಖಲೆ ಬರೆದ ಆರ್. ಅಶ್ವಿನ್ !

ಮೊಹಮ್ಮದ್ ಸಿರಾಜ್ ಕೋಪಗೊಂಡಿದ್ದು ಏಕೆ?

ಆಸ್ಟ್ರೇಲಿಯಾ ಇನ್ನಿಂಗ್ಸ್‌ನ 9 ನೇ ಓವರ್‌ನಲ್ಲಿ ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಮತ್ತು ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಮೊಹಮ್ಮದ್ ಸಿರಾಜ್ ಮತ್ತು ಸ್ಟೀವ್ ಸ್ಮಿತ್ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗುತ್ತಿದೆ. ಆಸ್ಟ್ರೇಲಿಯ ಇನ್ನಿಂಗ್ಸ್‌ನ 9ನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್ ಮಾಡುತ್ತಿದ್ದರು. ಈ ಸಂದರ್ಭ ಮೂರನೇ ಎಸೆತ ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್‌ ಅವರನ್ನು ಬೌಲ್ಡ್ ಮಾಡಲು ಎಸೆಯಲಾಯಿತು. ಚೆಂಡು ತುದಿಗೆ ಬಡಿದ ನಂತರ ನೇರವಾಗಿ ಥಾಯ್ ಪ್ಯಾಡ್‌ಗೆ ಹೆಚ್ಚುವರಿ ಬೌನ್ಸ್‌ನೊಂದಿಗೆ ಹೋಯಿತು.

ನಂತರ ಮೊಹಮ್ಮದ್ ಸಿರಾಜ್ ಸ್ಟೀವ್ ಸ್ಮಿತ್ ವಿರುದ್ಧ ಎಲ್‌ಬಿಡಬ್ಲ್ಯೂಗೆ ಮನವಿ ಮಾಡಿದರು. ಆದರೆ ಅಂಪೈರ್ ಸ್ಟೀವ್ ಸ್ಮಿತ್ ವಿರುದ್ಧದ ಎಲ್‌ಬಿಡಬ್ಲ್ಯೂ ಮನವಿಯನ್ನು ತಿರಸ್ಕರಿಸಿದರು. ಇದಾದ ಬಳಿಕ ಮೊಹಮ್ಮದ್ ಸಿರಾಜ್ ಅವರನ್ನು ನೋಡಿ ಸ್ಟೀವ್ ಸ್ಮಿತ್ ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ, ಮೊಹಮ್ಮದ್ ಸಿರಾಜ್ ಸ್ಟೀವ್ ಸ್ಮಿತ್ ಅವರ ಪ್ರತಿಕ್ರಿಯೆಯಿಂದ ಕೋಪಗೊಂಡಿದ್ದಾರೆ. ಈ ಘಟನೆಯ ನಂತರ ಮೊಹಮ್ಮದ್ ಸಿರಾಜ್ ಅವರು ಸ್ಟೀವ್ ಸ್ಮಿತ್ ಅವರೊಂದಿಗೆ ಸ್ವಲ್ಪ ಉದ್ವಿಘ್ನ ಸಂಭಾಷಣೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಸ್ಟೀವ್ ಸ್ಮಿತ್ ಕೂಡ ಮೊಹಮ್ಮದ್ ಸಿರಾಜ್‌ಗೆ ಕೆಲವು ಪ್ರತಿಕ್ರಿಯೆಗಳನ್ನು ನೀಡುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ: ಶಾರುಖ್‌ ಖಾನ್‌ ಸಿನಿಮಾ ʼಪಠಾಣ್‌ʼ ಹೊಗಳಿದ ಪಿಎಂ ಮೋದಿ..!

ಇದೀಗ ಈ ಘಟನೆಯ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ಅವರು ಸ್ಟೀವ್ ಸ್ಮಿತ್ ಅವರನ್ನು ಬೌಲ್ಡ್ ಮಾಡಿ 37 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News