ನವದೆಹಲಿ: ಇತ್ತೀಚಿನ ದಿನಗಳಲ್ಲಿ ಎಲ್ಲರ ಬಾಯಲ್ಲೂ ವಿಶ್ವಕಪ್ ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾ ಗೆಲುವಿನ ಬಗ್ಗೆಯೇ ಮಾತು.. ಏತನ್ಮಧ್ಯೆ ಭಾರತೀಯ ಹಾಕಿ ತಂಡ ಹಿಂದಿ ಹಾಡೊಂದನ್ನು ಹಾಡುತ್ತಾ ಡ್ಯಾನ್ಸ್ ಮಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವೀಡಿಯೋವನ್ನು ಮೊದಲು ಹಾಕಿ ಇಂಡಿಯಾದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಭಾರತೀಯ ಹಾಕಿ ಮಹಿಳಾ ತಂಡದ ಆಟಗಾರ್ತಿಯರು ಈ ವೀಡಿಯೋದಲ್ಲಿ 'ಸುನೋ ಗೌರ್ ಸೆ ದುನಿಯಾ ವಾಲೋ' ಹಾಡಿಗೆ ಬಹಳ ಉತ್ಸಾಹದಿಂದ ಸ್ಟೆಪ್ ಹಾಕಿದ್ದಾರೆ. ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಬಾರಿ ಜನ ಈ ವೀಡಿಯೋ ವೀಕ್ಷಿಸಿದ್ದಾರೆ.
Humne kaha hai jo, tum bhi kaho! 😉🇮🇳💪#IndiaKaGame #FIHSeriesFinals #RoadToTokyo @IndiaSports @Media_SAI @CMO_Odisha @sports_odisha @FIH_Hockey pic.twitter.com/fgeNn34iZ4
— Hockey India (@TheHockeyIndia) June 23, 2019
ಬಹುಶಃ ಈ ಸಂತೋಷಕ್ಕೆ ಕಾರಣವಾದರೂ ಏನಿರಬಹುದು ಅಂತಾ ಯೋಚಿಸ್ತಿದ್ರೆ ಅದಕ್ಕೂ ಇಲ್ಲಿದೆ ಉತ್ತರ! ಭಾರತದ ಮಹಿಳಾ ಹಾಕಿ ತಂಡ ಭಾನುವಾರ ಜಪಾನ್ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸುವ ಮೂಲಕ ಎಫ್‌ಐಹೆಚ್ ಮಹಿಳಾ ಸರಣಿ ಫೈನಲ್ಸ್ ಪಂದ್ಯಾವಳಿಯನ್ನುತನ್ನದಾಗಿಸಿಕೊಂಡು ಭಾರತಕ್ಕೆ ಮರಳುತ್ತಿದ್ದ ಸಂದರ್ಭದಲ್ಲಿ ಈ ಹಾಡಿಗೆ ಸ್ಟೆಪ್ ಹಾಕುವ ಮೂಲಕ ವಿಜಯೋತ್ಸವ ಆಚರಿಸಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಹಾಕಿ ತಂಡದ ಸಾಧನೆಗೆ ಅಭಿನಂದಿಸಿದ್ದಾರೆ.