Ind vs SA : ರೋಹಿತ್ ಚಾನ್ಸ್ ನೀಡದ ಈ ಸ್ಟಾರ್ ಬೌಲರ್ ಗೆ ಅವಕಾಶ ನೀಡಿದ ರಾಹುಲ್!

ರಾಹುಲ್ ನಾಯಕರಾಗುವುದರೊಂದಿಗೆ ಬಹುದಿನಗಳಿಂದ ಸರದಿಗಾಗಿ ಕಾಯುತ್ತಿದ್ದ ಟೀಂ ಇಂಡಿಯಾದಲ್ಲಿ ಬೌಲರ್‌ಗೂ ಅವಕಾಶ ಸಿಕ್ಕಿದೆ.

Written by - Channabasava A Kashinakunti | Last Updated : Jun 2, 2022, 05:32 PM IST
  • ಕೆಎಲ್ ರಾಹುಲ್ ಬಂದ ಕೂಡಲೆ ಈ ಆಟಗಾರನಿಗೆ ಸಿಕ್ತು ಅವಕಾಶ
  • ಐಪಿಎಲ್ 2022 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅರ್ಷದೀಪ್
  • ದಿಗ್ಗಜ ಆಟಗಾರರಿಗೆ ವಿಶ್ರಾಂತಿ ಸಿಕ್ಕಿದೆ
Ind vs SA : ರೋಹಿತ್ ಚಾನ್ಸ್ ನೀಡದ ಈ ಸ್ಟಾರ್ ಬೌಲರ್ ಗೆ ಅವಕಾಶ ನೀಡಿದ ರಾಹುಲ್!  title=

T20 World Cup Team : ಇತ್ತೀಚಿಗೆ ಐಪಿಎಲ್ 2022 ಮುಗಿದಿದೆ ಮತ್ತು ಕ್ರಿಕೆಟ್ ಅಭಿಮಾನಿಗಳು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಗಾಗಿ ಕಾಯುತ್ತಿದ್ದಾರೆ. ಈ ಸರಣಿಯಲ್ಲಿ ದೊಡ್ಡ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಕೆಎಲ್ ರಾಹುಲ್ ಕೈಗೆ ಟೀಂ ಇಂಡಿಯಾದ ಹಿಡಿತ ನೀಡಲಾಗಿದೆ. ರಾಹುಲ್ ನಾಯಕರಾಗುವುದರೊಂದಿಗೆ ಬಹುದಿನಗಳಿಂದ ಸರದಿಗಾಗಿ ಕಾಯುತ್ತಿದ್ದ ಟೀಂ ಇಂಡಿಯಾದಲ್ಲಿ ಬೌಲರ್‌ಗೂ ಅವಕಾಶ ಸಿಕ್ಕಿದೆ.

ಕೆಎಲ್ ರಾಹುಲ್ ಬಂದ ಕೂಡಲೆ ಈ ಆಟಗಾರನಿಗೆ ಸಿಕ್ತು ಅವಕಾಶ

ಮೂರು ವರ್ಷಗಳಿಂದ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಟೀಂ ಇಂಡಿಯಾದಲ್ಲಿ ಸ್ಥಾನ ಸೈಡ್ ಹೊದ್ದಾಡುತ್ತಿದ್ದ ಆಟಗಾರನೊಬ್ಬನಿಗೆ ಕೆಎಲ್ ರಾಹುಲ್ ಟೀಂ ಇಂಡಿಯಾದಲ್ಲಿ ಅವಕಾಶ ನೀಡಿದ್ದಾರೆ. ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್ ಅರ್ಷದೀಪ್ ಸಿಂಗ್. ಅರ್ಷದೀಪ್ ಕಳೆದ ಕೆಲವು ವರ್ಷಗಳಿಂದ ಐಪಿಎಲ್‌ನ ಅತ್ಯಂತ ಅಪಕಾರಿ ಡೆತ್ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಇದರಿಂದಾಗಿ ಇದೀಗ ಮುಂಬರುವ ಆಫ್ರಿಕಾ ಸರಣಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಪಡೆದಿದ್ದಾರೆ. ಅರ್ಷದೀಪ್ ಭಾರತ ತಂಡದ ಜೆರ್ಸಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು.

ಇದನ್ನೂ ಓದಿ : Ind vs SA : ದಕ್ಷಿಣ ಆಫ್ರಿಕಾಗೆ ಕಂಟಕವಾಗಲಿದ್ದಾರೆ ಟೀಂ ಇಂಡಿಯಾದ ಈ ವೇಗದ ಬೌಲರ್!

ಐಪಿಎಲ್ 2022 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅರ್ಷದೀಪ್

ಐಪಿಎಲ್ 2022 ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಅರ್ಷದೀಪ್ ಸಿಂಗ್ ಮೊದಲ ಬಾರಿಗೆ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಐಪಿಎಲ್ 2022 ರಲ್ಲಿ, ಅರ್ಷದೀಪ್ 14 ಪಂದ್ಯಗಳಲ್ಲಿ 10 ವಿಕೆಟ್ಗಳನ್ನು ಪಡೆದಿದ್ದಾರೆ. ಇವರ ವಿಕೆಟ್‌ಗಳು ಕಡಿಮೆಯಾಗಿರಬಹುದು ಆದರೆ ಕೊನೆಯ ಓವರ್‌ಗಳಲ್ಲಿ ಅವರಿಗಿಂತ ಉತ್ತಮ ಸರಾಸರಿಯನ್ನು ಬೇರೆ ಯಾವುದೇ ಬೌಲರ್ ಹೊಂದಿಲ್ಲದ ಕಾರಣ ಅವರಿಗೆ ಅವಕಾಶ ಸಿಕ್ಕಿದೆ. ರನ್‌ಗಳನ್ನು ವ್ಯರ್ಥ ಮಾಡದ ಅವರ ಕಲೆ ಅವರಿಗೆ ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿದೆ.

ದಿಗ್ಗಜ ಆಟಗಾರರಿಗೆ ವಿಶ್ರಾಂತಿ ಸಿಕ್ಕಿದೆ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಗಾರರು ನಿಯಮಿತ ನಾಯಕ ರೋಹಿತ್ ಶರ್ಮಾ, ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ಅನುಭವಿ ಬೌಲರ್ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಿದ್ದಾರೆ. ಟಿ20 ವಿಶ್ವಕಪ್ ನೋಡುವುದಾದರೆ ಯುವ ಆಟಗಾರರು ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದಲ್ಲಿ ಸ್ಥಾನ ಗಳಿಸಬಹುದು. ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಈ ಸರಣಿಯಲ್ಲಿ ಅವಕಾಶ ನೀಡಲು ವಿಶೇಷ ಒತ್ತು ನೀಡಲಾಗಿದೆ.

ಇದನ್ನೂ ಓದಿ : ಐಪಿಎಲ್‌ ಮುಗಿದ್ರೂ ನಿಲ್ಲುತ್ತಿಲ್ಲ ಆರ್‌ಸಿಬಿ ಕ್ರೇಜ್‌!

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News