Ind vs SA : ಟಿ20 ಪಂದ್ಯಕ್ಕೂ ಮೊದಲು ರಾಹುಲ್ ಬಗೆಹರಿಸಬೇಕು ಈ ಸಮಸ್ಯೆ!

ತಂಡವು ಮೂರು ಬಲಿಷ್ಠ ಆರಂಭಿಕರನ್ನು ಹೊಂದಿದ್ದು, ಇವರನ್ನ ರಾಹುಲ್ ಹೇಗೆ ಬಳಸಿಕೊಳ್ಳಲಿದ್ದಾರೆ? ಯಾರನ್ನ ಓಪನಿಂಗ್ ಕಳಿಸಿದರೆ ಉತ್ತಮ ಆರಂಭ ನೀಡುತ್ತಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ..

Written by - Channabasava A Kashinakunti | Last Updated : Jun 6, 2022, 08:49 PM IST
  • ಈ ಸಮಸ್ಯೆಯನ್ನು ರಾಹುಲ್ ಪರಿಹರಿಸಬೇಕು
  • ಈಗಾಗಲೇ ರೋಹಿತ್ ಶರ್ಮಾ ಜೊತೆಗಾರನಾಗಿದ್ದ ಈ ಆಟಗಾರ
  • ಮೆಗಾ ಹರಾಜಿನಲ್ಲಿ ಕುಲಾಯಿಸಿತ್ತು ಅದೃಷ್ಟ
Ind vs SA : ಟಿ20 ಪಂದ್ಯಕ್ಕೂ ಮೊದಲು ರಾಹುಲ್ ಬಗೆಹರಿಸಬೇಕು ಈ ಸಮಸ್ಯೆ! title=

India vs South Africa : ಜೂನ್ 9 ರಿಂದ ಕೆಎಲ್ ರಾಹುಲ್ ನಾಯಕತ್ವದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ ಟಿ 20 ಸರಣಿಯ ಮೊದಲ ಪಂದ್ಯವನ್ನು ಆಡಲಿದೆ. ಈ ಪಂದ್ಯಕ್ಕೂ ಮುನ್ನ ನಾಯಕ ಕೆಎಲ್ ರಾಹುಲ್ ಓಪನಿಂಗ್ ಸಮಸ್ಯೆ ಬಗೆಹರಿಸಿಕೊಳ್ಳಬೇಕಿದೆ. ತಂಡವು ಮೂರು ಬಲಿಷ್ಠ ಆರಂಭಿಕರನ್ನು ಹೊಂದಿದ್ದು, ಇವರನ್ನ ರಾಹುಲ್ ಹೇಗೆ ಬಳಸಿಕೊಳ್ಳಲಿದ್ದಾರೆ? ಯಾರನ್ನ ಓಪನಿಂಗ್ ಕಳಿಸಿದರೆ ಉತ್ತಮ ಆರಂಭ ನೀಡುತ್ತಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ..

ಈ ಸಮಸ್ಯೆಯನ್ನು ರಾಹುಲ್ ಪರಿಹರಿಸಬೇಕು

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರ ಆರಂಭಿಕ ಪಾರ್ಟ್​ನರ್ ಯಾರು? ಇದು ಎಲ್ಲರಿಗೂ ತುಂಬಾ ಕುತೂಹಲಕಾರಿ ಪ್ರಶ್ನೆ. ಏಕೆಂದರೆ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿದ್ದ ರೋಹಿತ್ ಶರ್ಮಾಗೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿದೆ. ತಂಡದಲ್ಲಿ ಆರಂಭಿಕರಾದ ಇಶಾನ್ ಕಿಶನ್, ರಿತುರಾಜ್ ಗಾಯಕ್ವಾಡ್ ಮತ್ತು ವೆಂಕಟೇಶ್ ಅಯ್ಯರ್ ಇದ್ದಾರೆ. ಈ ಮೂವರು ಬ್ಯಾಟ್ಸ್‌ಮನ್‌ಗಳ ಪೈಕಿ ಇಶಾನ್ ಕಿಶನ್ ಐಪಿಎಲ್ 2022ರಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಹೀಗಾಗಿ, ರಾಹುಲ್ ಜೋಈತೆಗೆ ಓಪನಿಂಗ್ ಬ್ಯಾಟಿಂಗ್ ಅವಕಾಶ ನೀಡಬಹುದು.

ಇದನ್ನೂ ಓದಿ : Ind vs SA : ಟೀಂ ಇಂಡಿಯಾಗೆ ಎಂಟ್ರಿ ನೀಡಿದ್ದಾರೆ ಈ 5 ವೇಗದ ಬೌಲರ್‌ಗಳು!

ಈಗಾಗಲೇ ರೋಹಿತ್ ಶರ್ಮಾ ಜೊತೆಗಾರನಾಗಿದ್ದ ಈ ಆಟಗಾರ

ರೋಹಿತ್ ಶರ್ಮಾ ಅವರೊಂದಿಗೆ ಭಾರತ ತಂಡದ ಆರಂಭಿಕ ಜವಾಬ್ದಾರಿಯನ್ನು ಇಶಾನ್ ಕಿಶನ್ ವಹಿಸಿಕೊಂಡಿದ್ದಾರೆ. 2021ರ ಟಿ20 ವಿಶ್ವಕಪ್‌ನಲ್ಲೂ ಅವರಿಗೆ ಅವಕಾಶ ಸಿಕ್ಕಿದೆ. 23 ವರ್ಷ ವಯಸ್ಸಿನವರು ತಮ್ಮ ಅಲ್ಪಾವಧಿಯ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 32 ರ ಸರಾಸರಿಯಲ್ಲಿ 121 ರ ಸ್ಟ್ರೈಕ್ ರೇಟ್‌ನೊಂದಿಗೆ ಉತ್ತಮ ಸಾಧನೆ ಮಾಡಿದ್ದಾರೆ. ಭಾರತ ಪರ 10 ಟಿ20 ಪಂದ್ಯಗಳಲ್ಲಿ 289 ರನ್ ಗಳಿಸಿದ್ದಾರೆ. ಇಶಾನ್ ಕಿಶನ್ ದೊಡ್ಡ ಇನ್ನಿಂಗ್ಸ್ ಆಡುವ ಸಾಮರ್ಥ್ಯ ಹೊಂದಿದ್ದಾರೆ.

ಮೆಗಾ ಹರಾಜಿನಲ್ಲಿ ಕುಲಾಯಿಸಿತ್ತು ಅದೃಷ್ಟ

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಇಶಾನ್ ಕಿಶನ್ ನನ್ನು ಮುಂಬೈ ಇಂಡಿಯನ್ಸ್ 16 ಕೋಟಿ 25 ಲಕ್ಷಕ್ಕೆ ಖರೀದಿಸಿತು. ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ ಪರ ಹಲವು ಪಂದ್ಯಗಳ ಗೆಲುವಿನ ಇನ್ನಿಂಗ್ಸ್ ಆಡಿದ್ದಾರೆ. ಅವರು ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2022 ರ 14 ಪಂದ್ಯಗಳಲ್ಲಿ 418 ರನ್ ಗಳಿಸಿದರು. ಹಾಗೆ, ಚೆನ್ನೈ ಸೂಪರ್ ಕಿಂಗ್ಸ್ ಪರ ರಿತುರಾಜ್ ಗಾಯಕ್ವಾಡ್ 368 ರನ್ ಗಳಿಸಿದರು ಮತ್ತು ವೆಂಕಟೇಶ್ ಅಯ್ಯರ್ ಕೇವಲ 182 ರನ್ ಗಳಿಸಿದರು. ಇಶಾನ್ ಕಿಶನ್ ಕೂಡ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇಶಾನ್ ಕಿಶನ್ ನಾಯಕ ಕೆಎಲ್ ರಾಹುಲ್ ಓಪನಿಂಗ್ ಗೆ ಜೊತೆಯಾಗಬಹುದು.

ಇದನ್ನೂ ಓದಿ : Ind vs SA : ಟೀಂ ಇಂಡಿಯಾದ ಈ ಬ್ಯಾಟ್ಸ್‌ಮನ್ ಗೆ ಹೆದರಿದ್ದಾರಂತೆ ಆಫ್ರಿಕನ್ ಬೌಲರ್‌ಗಳು!

ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ತಂಡ

ಕೆಎಲ್ ರಾಹುಲ್ (ಸಿ), ರಿತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಾಕ್), ದಿನೇಶ್ ಕಾರ್ತಿಕ್ (ವಾಕ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್ , ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News