Asia Cup 2022: ‘ನಾನಿಲ್ಲಿರೋದು ಕೊಹ್ಲಿಗಾಗಿ’: ಪಾಕ್ ಸುಂದರಿಯ ಸಂದೇಶ ಕಂಡು ವಿರಾಟ್ ಏನಂದ್ರು?

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 60 ರನ್‌ಗಳನ್ನು ಸಿಡಿಸಿದ್ದರು. ಇದಾದ ನಂತರ ಜನರು ವಿರಾಟ್ ಕೊಹ್ಲಿಯನ್ನು ಕೊಂಡಾಡುತ್ತಿದ್ದಾರೆ. ವಿರಾಟ್ ಕೊಹ್ಲಿಯ ಅಭಿಮಾನಿಗಳು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಇದ್ದಾರೆ ಎಂಬುದು ನಮಗೆಲ್ಲ ತಿಳಿದ ಸಂಗತಿ.

Written by - Bhavishya Shetty | Last Updated : Sep 5, 2022, 01:33 PM IST
    • ಏಷ್ಯಾ ಕಪ್ 2022ರ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಭಾನುವಾರ ನಡೆದಿದೆ
    • ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 60 ರನ್‌ಗಳನ್ನು ಸಿಡಿಸಿದ್ದರು
    • ವಿರಾಟ್ ಕೊಹ್ಲಿಯ ಪಾಕಿಸ್ತಾನಿ ಅಭಿಮಾನಿಯೊಬ್ಬರು ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ
Asia Cup 2022: ‘ನಾನಿಲ್ಲಿರೋದು ಕೊಹ್ಲಿಗಾಗಿ’: ಪಾಕ್ ಸುಂದರಿಯ ಸಂದೇಶ ಕಂಡು ವಿರಾಟ್ ಏನಂದ್ರು? title=
India Vs Pakistan Match

ಏಷ್ಯಾ ಕಪ್ 2022ರ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಭಾನುವಾರ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು.ಇದರಲ್ಲಿ ಪಾಕಿಸ್ತಾನವು ಭಾರತವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಆದರೆ, ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿರುವುದು ಭಾರತಕ್ಕೆ ಸಂತಸದ ವಿಷಯವಾಗಿತ್ತು. 

ಇದನ್ನೂ ಓದಿ:  Asia up 2022: ಪಾಕಿಸ್ತಾನ ವಿರುದ್ಧದ ಸೋಲಿನ ಬಳಿಕ ಟೀಂ ಇಂಡಿಯಾದ ಈ ಆಟಗಾರನ ವೃತ್ತಿಜೀವನ ಅಂತ್ಯ!

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 60 ರನ್‌ಗಳನ್ನು ಸಿಡಿಸಿದ್ದರು. ಇದಾದ ನಂತರ ಜನರು ವಿರಾಟ್ ಕೊಹ್ಲಿಯನ್ನು ಕೊಂಡಾಡುತ್ತಿದ್ದಾರೆ. ವಿರಾಟ್ ಕೊಹ್ಲಿಯ ಅಭಿಮಾನಿಗಳು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಇದ್ದಾರೆ ಎಂಬುದು ನಮಗೆಲ್ಲ ತಿಳಿದ ಸಂಗತಿ. ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲೂ ಇದೇ ರೀತಿಯ ದೃಶ್ಯ ಕಂಡುಬಂದಿತ್ತು. ಪಂದ್ಯದ ವೇಳೆ ವಿರಾಟ್ ಕೊಹ್ಲಿಯ ಪಾಕಿಸ್ತಾನಿ ಅಭಿಮಾನಿಯೊಬ್ಬರು ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ.

 

 

ಐಎಎಸ್ ಅವನೀಶ್ ಶರಣ್ ಈ ಫೋಟೋವನ್ನು ಟ್ವೀಟ್ ಮಾಡಿ, 'ಟೀಂ ಇಂಡಿಯಾ ಪಂದ್ಯವನ್ನು ಗೆಲ್ಲುತ್ತದೆ, ಆದರೆ ಇವರು ಹೃದಯವನ್ನು ಗೆದ್ದಿದ್ದಾರೆ” ಎಂದು ಬರೆದಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಪಂದ್ಯದ ವೇಳೆ ಐಎಎಸ್ ಅವ್ನಿಶ್ ಶರಣ್ ಈ ಟ್ವೀಟ್ ಮಾಡಿದ್ದಾರೆ. ನಂತರದಲ್ಲಿ ಪಾಕಿಸ್ತಾನ ಪಂದ್ಯ ಗೆದ್ದರೂ ಜನರು ವಿರಾಟ್ ಕೊಹ್ಲಿಯ ಈ ಪಾಕಿಸ್ತಾನಿ ಅಭಿಮಾನಿಯನ್ನು ಹೊಗಳುತ್ತಿದ್ದಾರೆ.

ವಿರಾಟ್ ಕೊಹ್ಲಿಯ ಸುಂದರ ಪಾಕಿಸ್ತಾನಿ ಅಭಿಮಾನಿಯನ್ನು ಹೊಗಳಿ ಮಾಡಿದ ಟ್ವೀಟ್ ಅನ್ನು ಇದುವರೆಗೆ 4500 ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಜೊತೆಗೆ ಈ ಟ್ವೀಟ್ ಅನ್ನು ಸುಮಾರು 300 ಜನರು ರೀಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:  IND vs PAK: ಕೊನೆಯ 2 ಓವರ್‌ನಲ್ಲಿ ಮಹತ್ವದ ತಿರುವು, ಪಾಕಿಸ್ತಾನ ವಿರುದ್ಧ ಸೋಲುಂಡ ಭಾರತ

ವಿರಾಟ್ ಕೊಹ್ಲಿ ಅವರ ಪಾಕಿಸ್ತಾನಿ ಅಭಿಮಾನಿಗೆ ಜನರು ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಒಬ್ಬ ಬಳಕೆದಾರರು ಕ್ರೀಡಾ ಮನೋಭಾವ ಮುಖ್ಯ ಎಂದು ಬರೆದಿದ್ದಾರೆ. ಆಟವನ್ನು ಆಟದಂತೆ ಪರಿಗಣಿಸುವುದು ಸರಿಯಾದ ಉಪಾಯ. ಇದನ್ನು ಮೇಡಂ ಸಾಬೀತು ಮಾಡಿದ್ದಾರೆ ಎಂದು ಇನ್ನೊಬ್ಬರು ಬರೆದಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News