Hardik Pandya : ಸೂರ್ಯಕುಮಾರ್ ಯಾದವ್'ನನ್ನು ಹಾಡಿಹೊಗಳಿದ ಕ್ಯಾಪ್ಟನ್ ಪಾಂಡ್ಯ

ಭಾರತ 191 ರನ್‌ಗಳ ದೊಡ್ಡ ಸ್ಕೋರ್ ನೀಡಿತ್ತು, ಇದನ್ನು ಬೆನ್ನಟ್ಟಲು ಕಿವೀಸ್ ತಂಡಕ್ಕೆ ಸಾಧ್ಯವಾಗಲಿಲ್ಲ. 

Written by - Channabasava A Kashinakunti | Last Updated : Nov 20, 2022, 06:37 PM IST
  • ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 65 ರನ್‌ಗಳ ಭರ್ಜರಿ ಜಯ
  • ಭಾರತದ ಬೌಲರ್‌ಗಳು - ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ
  • ಬಿರುಸಿನ ಆಟವಾಡಿದ ಸೂರ್ಯಕುಮಾರ್
Hardik Pandya : ಸೂರ್ಯಕುಮಾರ್ ಯಾದವ್'ನನ್ನು ಹಾಡಿಹೊಗಳಿದ ಕ್ಯಾಪ್ಟನ್ ಪಾಂಡ್ಯ title=

Hardik Pandya On Suryakumar Yadav : ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು 65 ರನ್‌ಗಳಿಂದ ಸೋಲಿಸಿ ಭರ್ಜರಿ ಜಯ ತನ್ನದಾಗಿಸಿಕೊಂಡಿದೆ. ಇದರೊಂದಿಗೆ ಟೀಂ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಭಾರತದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಇಂದು ಅದ್ಭುತ ಆಟ ಪ್ರದರ್ಶಿಸಿದರು. ಭಾರತ 191 ರನ್‌ಗಳ ದೊಡ್ಡ ಸ್ಕೋರ್ ನೀಡಿತ್ತು, ಇದನ್ನು ಬೆನ್ನಟ್ಟಲು ಕಿವೀಸ್ ತಂಡಕ್ಕೆ ಸಾಧ್ಯವಾಗಲಿಲ್ಲ. 

ಪಂದ್ಯವನ್ನು ಗೆದ್ದ ನಂತರ ಹಾರ್ದಿಕ್ ಪಾಂಡ್ಯ ಹೇಳಿದ್ದು ಹೀಗೆ

ಪಂದ್ಯ ಗೆದ್ದ ನಂತರ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ, 'ಇದಕ್ಕಿಂತ ಉತ್ತಮವಾಗಿರಲು ಸಾಧ್ಯವಿಲ್ಲ'. ಆದರೆ, ಖಂಡಿತವಾಗಿಯೂ ಇದು ಸೂರ್ಯಕುಮಾರ್ ಯಾದವ್ ಅವರ ವಿಶೇಷ ಇನ್ನಿಂಗ್ಸ್. ನಾವು 170-175 ರನ್ ಗಳಿಸುತ್ತಿದ್ದೆವು. ಬೌಲರ್‌ಗಳು ಉತ್ತಮವಾಗಿ ಆಡಿದ್ದಾರೆ. ಇದು ಮನಸ್ಥಿತಿಯನ್ನು ಬದಲಾಯಿಸಿದೆ. ನೀವು ಪ್ರತಿ ಬಾಲ್‌ನಲ್ಲಿ ವಿಕೆಟ್‌ಗಳನ್ನು ಪಡೆಯಲು ಸಾಧ್ಯವಿಲ್ಲ, ಆದರೆ ಪ್ರತಿ ಎಸೆತದಲ್ಲಿ ಆಕ್ರಮಣಕಾರಿಯಾಗಿರುವುದು ಮುಖ್ಯ ಎಂದು ಬೌಲರ್ ಗಳಿಗೆ ಕಿವಿ ಮಾತು ಹೇಳಿದರು.

ಇದನ್ನೂ ಓದಿ : IND vs NZ : ರೋಹಿತ್ ಶರ್ಮಾ ದಾಖಲೆ ಸರಿಗಟ್ಟಿದ ಸೂರ್ಯಕುಮಾರ್ ಯಾದವ್! 

'ಕ್ರೆಡಿಟ್ ಬೌಲರ್‌ಗಳಿಗೆ ಸಲ್ಲುತ್ತದೆ'

ಮುಂದುವರಿದು ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ, 'ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು, ಆದ್ದರಿಂದ ಕ್ರೆಡಿಟ್ ಬೌಲರ್‌ಗಳಿಗೆ ಸಲ್ಲುತ್ತದೆ. ನಾನು ಸಾಕಷ್ಟು ಬೌಲಿಂಗ್ ಮಾಡಿದ್ದೇನೆ, ಮುಂದೆ ನಾನು ಹೆಚ್ಚಿನ ಬೌಲಿಂಗ್ ಆಯ್ಕೆಗಳನ್ನು ನೋಡಲು ಬಯಸುತ್ತೇನೆ. ಇದು ಯಾವಾಗಲೂ ಕೆಲಸ ಮಾಡುವುದಿಲ್ಲ, ಬ್ಯಾಟ್ಸಮನ್ ಗಳು ಕೂಡ ಇಲ್ಲಿ ಬ್ಯಾಟ್ ಬಿಸಲೇಬೇಕು ಎಂದು ಹೇಳಿದರು.

'ಎಲ್ಲರಿಗೂ ಅವಕಾಶ ನೀಡಲು ಬಯಸುತ್ತೇನೆ'

ಹಾರ್ದಿಕ್ ಪಾಂಡ್ಯ, 'ನನಗೆ (ಮುಂದಿನ ಪಂದ್ಯದಲ್ಲಿ ಬದಲಾವಣೆಯ ಬಗ್ಗೆ) ಗೊತ್ತಿಲ್ಲ. ನಾನು ತಂಡದಲ್ಲಿರುವ ಎಲ್ಲರಿಗೂ ಅವಕಾಶ ನೀಡಬೇಕೆಂದು ಬಯಸುತ್ತೇನೆ ಆದರೆ ಈಗ ಒಂದೇ ಒಂದು ಪಂದ್ಯವಿದೆ, ಅದು ಸ್ವಲ್ಪ ಕಷ್ಟ. ಅವರು ವೃತ್ತಿಪರರು ಎಂದು ನಾನು ನಿರೀಕ್ಷಿಸುತ್ತೇನೆ. ಪ್ರತಿಯೊಬ್ಬರೂ ಸಂತೋಷದ ಸ್ಥಳದಲ್ಲಿ ಇರುವಂತಹ ವಾತಾವರಣವನ್ನು ಸೃಷ್ಟಿಸುವುದು. ಈ ತಂಡದಲ್ಲಿ ಎಲ್ಲಾ ಆಟಗಾರರು ಪರಸ್ಪರರ ಯಶಸ್ಸಿನ ಬಗ್ಗೆ ಸಂತೋಷವಾಗಿರುವುದನ್ನು ನಾನು ಅನೇಕ ಬಾರಿ ನೋಡುತ್ತೇನೆ ಮತ್ತು ಇದು ಮುಖ್ಯವಾಗಿದೆ.

ಬಿರುಸಿನ ಆಟವಾಡಿದ ಸೂರ್ಯಕುಮಾರ್

ನ್ಯೂಜಿಲೆಂಡ್ ವಿರುದ್ಧ ಸೂರ್ಯಕುಮಾರ್ ಯಾದವ್ ಬಿರುಸಿನ ಇನ್ನಿಂಗ್ಸ್ ಆಡಿದರು. ಅವರು ನೆಲದ ಮೇಲೆ ಸ್ಟ್ರೋಕ್ಗಳನ್ನು ಹೊಡೆದರು. ಇವರಿಂದಾಗಿಯೇ ಟೀಂ ಇಂಡಿಯಾ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಸೂರ್ಯ ಕೇವಲ 51 ಎಸೆತಗಳಲ್ಲಿ 11 ಬೌಂಡರಿ ಮತ್ತು 7 ಸಿಕ್ಸರ್ ಒಳಗೊಂಡ 111 ರನ್ ಗಳಿಸಿದರು. ಇದು ಟಿ20 ಕ್ರಿಕೆಟ್‌ನಲ್ಲಿ ಅವರ ಎರಡನೇ ಶತಕವಾಗಿದೆ.

ಇದನ್ನೂ ಓದಿ : IND vs NZ : ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 65 ರನ್‌ಗಳ ಭರ್ಜರಿ ಜಯ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News