ಕೊನೆಗೂ ಸ್ಟ್ರೈಕ್ ರೇಟ್ ಬಗ್ಗೆ ಮೌನ ಮುರಿದ ವಿರಾಟ್: ಟೀಕಾಕಾರಿಗೆ ಚಾಟಿ ಬೀಸಿದಂತಿದೆ ಕೊಹ್ಲಿ ಆಡಿದ ಮಾತು

Virat Kohli Breaks Silence on Strike Rate: ಭಾರತದ ದಿಗ್ಗಜ ಬ್ಯಾಟ್ಸ್‌’ಮನ್ ವಿರಾಟ್ ಕೊಹ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದು, ಕೇವಲ 44 ಎಸೆತಗಳಲ್ಲಿ 70 ರನ್‌’ಗಳ ಇನಿಂಗ್ಸ್‌ ಆಡಿದ್ದಾರೆ. ಇದರಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್‌’ಗಳು ಸೇರಿವೆ.

Written by - Bhavishya Shetty | Last Updated : Apr 28, 2024, 07:51 PM IST
    • ಭಾರತದ ದಿಗ್ಗಜ ಬ್ಯಾಟ್ಸ್‌’ಮನ್ ವಿರಾಟ್ ಕೊಹ್ಲಿ ಅದ್ಭುತವಾಗಿ ಬ್ಯಾಟಿಂಗ್
    • ತಮ್ಮ ಸ್ಟ್ರೈಕ್ ರೇಟ್ ಬಗ್ಗೆ ಮಹತ್ವದ ಹೇಳಿಕೆ ನೀಡಿದ ವಿರಾಟ್ ಕೊಹ್ಲಿ
    • ಮೊದಲ ಬಾರಿಗೆ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ ವಿರಾಟ್
ಕೊನೆಗೂ ಸ್ಟ್ರೈಕ್ ರೇಟ್ ಬಗ್ಗೆ ಮೌನ ಮುರಿದ ವಿರಾಟ್: ಟೀಕಾಕಾರಿಗೆ ಚಾಟಿ ಬೀಸಿದಂತಿದೆ ಕೊಹ್ಲಿ ಆಡಿದ ಮಾತು  title=
Virat Kohli

Virat Kohli Breaks Silence on Strike Rate: ಗುಜರಾತ್ ಟೈಟಾನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿದೆ. ಗುಜರಾತ್ ವಿರುದ್ಧ ಆರ್‌’ಸಿಬಿ 201 ರನ್‌’ಗಳ ಗುರಿಯನ್ನು ಸುಲಭವಾಗಿ ಸಾಧಿಸಿದ್ದು, ಈ ಗೆಲುವಿನೊಂದಿಗೆ ಆರ್‌ ಸಿ ಬಿ ಪ್ಲೇಆಫ್‌ ತಲುಪುವ ಭರವಸೆಯನ್ನು ಉಳಿಸಿಕೊಂಡಿದೆ.

ಇದನ್ನೂ ಓದಿ: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ, ಬಹುಮತದಿಂದ ಗೆಲ್ಲಿಸಿ: ಸಿಎಂ

ಈ ಪಂದ್ಯದಲ್ಲೂ ಭಾರತದ ದಿಗ್ಗಜ ಬ್ಯಾಟ್ಸ್‌’ಮನ್ ವಿರಾಟ್ ಕೊಹ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದು, ಕೇವಲ 44 ಎಸೆತಗಳಲ್ಲಿ 70 ರನ್‌’ಗಳ ಇನಿಂಗ್ಸ್‌ ಆಡಿದ್ದಾರೆ. ಇದರಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್‌’ಗಳು ಸೇರಿವೆ.

ಅಂದಹಾಗೆ ಈ ಪಂದ್ಯದ ನಂತರ ವಿರಾಟ್ ಕೊಹ್ಲಿ ತಮ್ಮ ಸ್ಟ್ರೈಕ್ ರೇಟ್ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಐಪಿಎಲ್ ಸೀಸನ್’ನಲ್ಲಿ ಕೊಹ್ಲಿ ಸ್ಟ್ರೈಕ್ ರೇಟ್ ಬಗ್ಗೆ ಪ್ರಶ್ನೆಗಳು ಎದ್ದಿದ್ದು, ಇದೀಗ ಮೊದಲ ಬಾರಿಗೆ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ಮುಂಜಾನೆ ಎದ್ದಂತೆ ಮೊಸರಿಗೆ ಈ ಕಪ್ಪು ಬೀಜ ಬೆರೆಸಿ ತಿನ್ನಿ: ದಿನಪೂರ್ತಿ ನಾರ್ಮಲ್ ಇರುತ್ತೆ ಬ್ಲಡ್ ಶುಗರ್! ಯಾವ ಔಷಧಿಯೂ ಬೇಕಿಲ್ಲ

“ನನ್ನ ಸ್ಟ್ರೈಕ್ ರೇಟ್ ಬಗ್ಗೆ ಕೆಲವರು ಪ್ರಶ್ನೆ ಎತ್ತುತ್ತಾರೆ. ನನಗೆ ಚೆನ್ನಾಗಿ ಸ್ಪಿನ್ ಆಡಲು ಸಾಧ್ಯವಾಗುತ್ತಿಲ್ಲ, ಆದರೆ ನಾನು ಮೈದಾನದಲ್ಲಿರುವಾಗ, ನನ್ನ ಗಮನವು ಪಂದ್ಯವನ್ನು ಗೆಲ್ಲುವುದರ ಮೇಲೆ ಮಾತ್ರವೇ ಹೊರತು ವೈಯಕ್ತಿಕ ದಾಖಲೆಗಳ ಮೇಲೆ ಅಲ್ಲ. ಇನ್ನು ನನ್ನ ಸ್ಟ್ರೈಕ್ ರೇಟ್ ಬಗ್ಗೆ ರೂಮಿನೊಳಗೆ ಕುಳಿತು ಗೇಲಿ ಮಾಡುವವರು ಬಹಳ ಮಂದಿ ಇದ್ದಾರೆ, ಆದರೆ ಇಲ್ಲಿ ಆಡುವವರೇ ಮೈದಾನದಲ್ಲಿ ಏನಾಗುತ್ತಿದೆ ಎಂದು ಹೇಳಬಲ್ಲರು. ವಿಷಯದ ಬಗ್ಗೆ ಕುಳಿತು ಮಾತನಾಡುವುದು ತುಂಬಾ ಸುಲಭ, ಆದರೆ ವಾಸ್ತವ ಬೇರೆಯೇ” ಎನ್ನುತ್ತಾ ವಿರಾಟ್ ಕೊಹ್ಲಿ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News