ಕ್ರಿಕೆಟ್ ಶಿಶು ನೇಪಾಳಕ್ಕೆ ಭಾರತ ಸವಾಲ್: ಪಂದ್ಯ ರದ್ದಾದರೆ ಸೂಪರ್ 4 ಪ್ರವೇಶಿಸುವ ತಂಡ ಯಾವುದು?

India vs Nepal, Pallekele Weather: ಇಂದು ಶ್ರೀಲಂಕಾದ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಳೆ ಬೀಳುವ ಸಂಭವ ಹೆಚ್ಚಾಗಿದ್ದು, ಪಂದ್ಯ ರದ್ದಾದರೆ ಯಾವ ತಂಡ ಸೂಪರ್ 4 ಹಂತಕ್ಕೆ ತಲುಪಲಿದೆ ಎಂಬುದು ಇದೀಗ ಎಲ್ಲರೂ ಕಾಡುತ್ತಿರುವ ಪ್ರಶ್ನೆ.

Written by - Bhavishya Shetty | Last Updated : Sep 4, 2023, 08:43 AM IST
    • ಭಾರತ ತಂಡವು ನೇಪಾಳ ವಿರುದ್ಧ ಏಷ್ಯಾ ಕಪ್-2023ರ ತನ್ನ ಎರಡನೇ ಪಂದ್ಯವನ್ನು ಆಡಲಿದೆ
    • ಶ್ರೀಲಂಕಾದ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ
    • ಭಾರತ ನೇಪಾಳ ಪಂದ್ಯ ರದ್ದಾದರೆ ಸೂಪರ್ 4 ಪ್ರವೇಶಿಸುವ ತಂಡ ಯಾವುದು?
ಕ್ರಿಕೆಟ್ ಶಿಶು ನೇಪಾಳಕ್ಕೆ ಭಾರತ ಸವಾಲ್: ಪಂದ್ಯ ರದ್ದಾದರೆ ಸೂಪರ್ 4 ಪ್ರವೇಶಿಸುವ ತಂಡ ಯಾವುದು? title=
Pallekele Weather Today Report

India vs Nepal, Asia Cup 2023: ಇಂದು ಅಂದರೆ ಸೆಪ್ಟೆಂಬರ್ 4 ರಂದು ಭಾರತ ತಂಡವು ನೇಪಾಳ ವಿರುದ್ಧ ಏಷ್ಯಾ ಕಪ್-2023ರ ತನ್ನ ಎರಡನೇ ಪಂದ್ಯವನ್ನು ಆಡಲಿದೆ. ಈ ಪಂದ್ಯ ಶ್ರೀಲಂಕಾದ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇದನ್ನೂ ಓದಿ:  ನೇಪಾಳ ವಿರುದ್ಧದ ಹಣಾಹಣಿಗೆ ಟೀಂ ಇಂಡಿಯಾ Playing 11 ರೆಡಿ: 3 ಮ್ಯಾಚ್ ವಿನ್ನರ್ಸ್’ಗಿಲ್ಲ ಸ್ಥಾನ

ಭಾರತ ತಂಡ ತನ್ನ ಕೊನೆಯ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಇದೇ ಕ್ರೀಡಾಂಗಣದಲ್ಲಿ ಆಡಿತ್ತು. ಆದರೆ ಮಳೆಯ ಕಾರಣದಿಂದ ಮತ್ತು ಕೆಟ್ಟ ಹವಾಮಾನದಿಂದಾಗಿ ಪಂದ್ಯ ರದ್ದಾಗಿತ್ತು. ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಮಾಡಿದ್ದರೂ ಮಳೆಯಿಂದಾಗಿ ಪಾಕ್ ತಂಡಕ್ಕೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ಪಂದ್ಯ ಡ್ರಾ ಎಂದು ಘೋಷಿಸಬೇಕಾಯಿತು.

ಇದೀಗ ನೇಪಾಳ ವಿರುದ್ಧ ಜಯ ಸಾಧಿಸುವ ಮೂಲಕ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್-4ರಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಟೀಂ ಇಂಡಿಯಾ ಬಯಸಿದೆ. ಆದರೆ ಈ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿದರೆ ಯಾವ ತಂಡ ಸೂಪರ್ 4 ಹಂತಕ್ಕೆ ಕಾಲಿಡಲಿದೆ ಎಂಬುದು ಸದ್ಯದ ಪ್ರಶ್ನೆ.

ಇನ್ನು ಇಂದು ಪಲ್ಲೆಕೆಲೆ ಹವಾಮಾನ ಅಪ್ಡೇಟ್ ಗಮನಿಸಿದರೆ, ಬೆಳಗ್ಗೆ 7 ಗಂಟೆ ಸಮಯಕ್ಕೆ 50 ಶೇಕಡ ಮಳೆ ಬೀಳುವ ಸಂಭವವಿದೆ. ಇನ್ನು 10ಗಂಟೆ ವೇಳೆಗೆ ಶೇ.60ರಷ್ಟು ಮಳೆ ಬೀಳಬಹುದು. ಇನ್ನು ಮಧ್ಯಾಹ್ನ 1 ರಿಂದ 3 ಗಂಟೆ ಸಂದರ್ಭದಲ್ಲಿ ಶೇ.50ರಷ್ಟು ಮಳೆ ಬೀಳುವ ಸಾಧ್ಯತೆ ಇದೆ. ಇನ್ನೊಂದೆಡೆ ಸಂಜೆ 7ರ ವೇಳೆಗೆ ಇದರ ಪ್ರಮಾಣ ಶೇ.40ಕ್ಕೆ ಇಳಿಕೆಯಾಗಲಿದೆ.

ಒಟ್ಟಾರೆ ಇಂದು ಮಳೆ ಬೀಳುವ ಸಂಭವ ಹೆಚ್ಚಾಗಿದ್ದು, ಪಂದ್ಯ ರದ್ದಾದರೆ ಯಾವ ತಂಡ ಸೂಪರ್ 4 ಹಂತಕ್ಕೆ ತಲುಪಲಿದೆ ಎಂಬುದು ಇದೀಗ ಎಲ್ಲರೂ ಕಾಡುತ್ತಿರುವ ಪ್ರಶ್ನೆ.

ಒಂದು ವೇಳೆ ಮಳೆಯಿಂದ ಈ ಪಂದ್ಯವು ವಾಶ್ ಔಟ್ ಆದರೆ ಭಾರತ ಮತ್ತು ನೇಪಾಳ ತಲಾ ಒಂದು ಅಂಕವನ್ನು ಹಂಚಿಕೊಳ್ಳುತ್ತವೆ. ಆ ಮೂಲಕ ಭಾರತವು ಪಾಕಿಸ್ತಾನದೊಂದಿಗೆ ಸೂಪರ್ 4 ಹಂತಕ್ಕೆ ಅರ್ಹತೆ ಪಡೆಯುತ್ತದೆ ಮತ್ತು ನೇಪಾಳವು ಪಂದ್ಯಾವಳಿಯಿಂದ ಹೊರಗುಳಿಯುತ್ತದೆ.

ತಂಡಗಳು:

ಭಾರತ: ರೋಹಿತ್ ಶರ್ಮಾ (ನಾ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉ.ನಾ), ರವೀಂದ್ರ ಜಡೇಜಾ, ಇಶಾನ್ ಕಿಶನ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ

ಇದನ್ನೂ ಓದಿ: ರಕ್ಷಾ ಪಂಚಮಿ ಪುಣ್ಯದಿನ ಇಂದು.. ಈ ರಾಶಿಗಿರಲಿದೆ ಮಹಾಶಿವನ ಶ್ರೀರಕ್ಷೆ- ಸಂಪತ್ತು ವೃದ್ಧಿ

ನೇಪಾಳ: ಕುಶಾಲ್ ಭುರ್ಟೆಲ್, ಆಸಿಫ್ ಶೇಖ್(ವಿ.ಕೀ), ರೋಹಿತ್ ಪೌಡೆಲ್(ನಾ), ಆರಿಫ್ ಶೇಖ್, ಸೋಂಪಾಲ್ ಕಾಮಿ, ಗುಲ್ಸನ್ ಝಾ, ದೀಪೇಂದ್ರ ಸಿಂಗ್ ಐರಿ, ಕುಶಾಲ್ ಮಲ್ಲಾ, ಸಂದೀಪ್ ಲಮಿಚಾನೆ, ಕರಣ್ ಕೆಸಿ, ಲಲಿತ್ ರಾಜಬಂಶಿ, ಭೀಮ್ ಶಾರ್ಕಿ, ಕಿಶೋರ್ ಮಹತೋ, ಸಂದೀಪ್ ಜೋರಾ, ಪ್ರತಿಸ್ ಜಿಸಿ, ಅರ್ಜುನ್ ಸೌದ್, ಮೌಸಮ್ ಧಕಲ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News