India vs England, 4th T20I: ಭಾರತ ತಂಡಕ್ಕೆ 8 ರನ್ ಗಳ ರೋಚಕ ಗೆಲುವು

ಅಹಮದಾಬಾದ್ ನ ಮೋಟೆರಾ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ಟಿ 20 ಪಂದ್ಯದಲ್ಲಿ ಭಾರತ ತಂಡವು ಎಂಟು ರನ್ ಗಳ ರೋಚಕ ಗೆಲುವು ಸಾಧಿಸಿದೆ.

Last Updated : Mar 18, 2021, 11:42 PM IST
India vs England, 4th T20I: ಭಾರತ ತಂಡಕ್ಕೆ 8 ರನ್ ಗಳ ರೋಚಕ ಗೆಲುವು  title=
Photo Courtesy: Twitter

ನವದೆಹಲಿ: ಅಹಮದಾಬಾದ್ ನ ಮೋಟೆರಾ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ಟಿ 20 ಪಂದ್ಯದಲ್ಲಿ ಭಾರತ ತಂಡವು ಎಂಟು ರನ್ ಗಳ ರೋಚಕ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಇಂಗ್ಲೆಂಡ್ ತಂಡವು ಭಾರತಕ್ಕೆ ಬ್ಯಾಟಿಂಗ್ ಅವಕಾಶವನ್ನು ನೀಡಿತು. ಭಾರತದ ಪರವಾಗಿ ಸುರ್ಯಕುಮಾರ್ ಯಾದವ್ 57,ಪಂತ್ 30,ಶ್ರೇಯಸ್ ಅಯ್ಯರ್ 37 ರನ್ ಗಳ ನೆರವಿನಿಂದ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 185 ರನ್ ಗಳನ್ನು ಗಳಿಸಿತು

ಇದನ್ನೂ ಓದಿ: ICC Rankings:ಟಾಪ್ 5 ಗೆ ಏರಿದ ವಿರಾಟ್ ಕೊಹ್ಲಿ, ಕುಸಿದ ಕೆ.ಎಲ್.ರಾಹುಲ್ ರ್ಯಾಂಕ್

ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡವು 8 ವಿಕೆಟ್ ನಷ್ಟಕ್ಕೆ 177 ರನ್ ಗಳನ್ನು ಗಳಿಸಲಷ್ಟೇ ಶಕ್ತವಾಯಿತು ಭಾರತದ ಪರವಾಗಿ ಶಾರ್ದುಲ್ ಠಾಕೂರ್ ಮೂರು ಹಾಗೂ ಹಾರ್ದಿಕ್ ಪಾಂಡ್ಯ ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ಭಾರತದ ಗೆಲುವಿಗೆ ನೆರವಾದರು.

ಇದನ್ನೂ ಓದಿ: Ind vs Eng: ಮೂರನೇ T20 ಪಂದ್ಯದ ಸೋಲಿನ ಕಾರಣ ಹೇಳಿದ ಕೊಹ್ಲಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News