India vs England, 2nd ODI: ಕನ್ನಡಿಗ ಕೆ.ಎಲ್ ರಾಹುಲ್ ಭರ್ಜರಿ ಶತಕ, ಬೃಹತ್ ಗುರಿ ನೀಡಿದ ಭಾರತ

Last Updated : Mar 26, 2021, 05:26 PM IST
  • ಪುಣೆಯಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ರಿಷಬ್ ಪಂತ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದಾಗಿ ಭಾರತ ತಂಡವು 50 ಓವರ್ ಗಳಲ್ಲಿ 6 ವಿಕೆಟ್ ಗಳನ್ನು ಕಳೆದು ಕೊಂಡು 336 ರನ್ ಗಳನ್ನು ಗಳಿಸಿದೆ.
India vs England, 2nd ODI: ಕನ್ನಡಿಗ ಕೆ.ಎಲ್ ರಾಹುಲ್ ಭರ್ಜರಿ ಶತಕ, ಬೃಹತ್ ಗುರಿ ನೀಡಿದ ಭಾರತ  title=
Photo Courtesy: Twitter

ನವದೆಹಲಿ:  ಪುಣೆಯಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ರಿಷಬ್ ಪಂತ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದಾಗಿ ಭಾರತ ತಂಡವು 50 ಓವರ್ ಗಳಲ್ಲಿ  6 ವಿಕೆಟ್ ಗಳನ್ನು ಕಳೆದು ಕೊಂಡು 336 ರನ್ ಗಳನ್ನು ಗಳಿಸಿದೆ.

ಇದನ್ನೂ ಓದಿ: IND vs ENG: ಎರಡನೇ ಪಂದ್ಯದ ಮೊದಲು Team Indiaಗೆ ಎರಡು ದೊಡ್ಡ ಹಿನ್ನಡೆ

ಟಾಸ್ ಗೆದ್ದು ಮೊದಲು ಕ್ಷೇತ್ರ ರಕ್ಷಣೆಯನ್ನು ಆಯ್ದು ಕೊಂಡ ಇಂಗ್ಲೆಂಡ್ ತಂಡದ ಲೆಕ್ಕಾಚಾರ ತಲೆಕೆಳಗಾಗುವಂತೆ ಭಾರತ ತಂಡದ ಬ್ಯಾಟ್ಸ್ಮನ್ ಗಳು ಅಬ್ಬರಿಸಿದರು. ಆರಂಭದಲ್ಲಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಅವರ ವಿಕೆಟ್ ಗಳನ್ನು ತಂಡದ ಮೊತ್ತ 37 ಆಗುವಷ್ಟರಲ್ಲಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ (66) ಹಾಗೂ ಕೆ.ಎಲ್ ರಾಹುಲ್  (108) ನೆರವಾದರು. ತದನಂತರ ವೇಗದ ಬ್ಯಾಟಿಂಗ್ ಮಾಡಿದ ರಿಶಬ್ ಪಂತ್ ಕೇವಲ 40 ಎಸೆತಗಳಲ್ಲಿ ಭರ್ಜರಿ ಏಳು ಸಿಕ್ಸರ್ ಹಾಗೂ ಮೂರು ಬೌಂಡರಿ ಗಳ ಮೂಲಕ 77 ರನ್ ಗಳಿಸಿ ಟಾಮ್ ಕೊರಿನ್ ಅವರಿಗೆ ವಿಕೆಟ್ ಒಪ್ಪಿಸಿದರು.

ಇದನ್ನೂ ಓದಿ: Ind vs Eng: ಒಂದೇ ಓವರ್‌ನಲ್ಲಿ 2 ವಿಕೆಟ್‌ ಕಬಳಿಸಿ ಟ್ವಿಟರ್‌ನಲ್ಲಿ ಹೀರೋ ಆದ ಭಾರತೀಯ ಬೌಲರ್

ಇಂಗ್ಲೆಂಡ್ ತಂಡದ ಪರವಾಗಿ ಟಾಮ್ ಕರನ್ ಅವರು ಎರಡು ವಿಕೆಟ್ ಗಳನ್ನು ಕಬಳಿಸಿದರೂ ಕೂಡ ದುಬಾರಿಯಾಗಿ ಪರಿಣಮಿಸಿದರು. ಈಗಾಗಲೇ ಮೊದಲ ಪಂದ್ಯದಲ್ಲಿ ಸೋಲನ್ನು ಅನುಭವಿಸಿರುವ ಇಂಗ್ಲೆಂಡ್ ತಂಡವು ಈಗ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News