India vs Australia, 5th ODI: ಉಸ್ಮಾನ್ ಖಾವಜಾ ಶತಕ, ಆಸ್ಟ್ರೇಲಿಯಾ 272/9

ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಐದನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು.

Last Updated : Mar 13, 2019, 05:26 PM IST
India vs Australia, 5th ODI: ಉಸ್ಮಾನ್ ಖಾವಜಾ ಶತಕ, ಆಸ್ಟ್ರೇಲಿಯಾ 272/9  title=
Photo courtesy: Twitter

ನವದೆಹಲಿ: ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಐದನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು.

ಉಸ್ಮಾನ್ ಖಾವಜಾ ಅವರ ಶತಕದ(100)ನೆರವಿನಿಂದ ಆಸಿಸ್ ತಂಡವು 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತು.ಪ್ರಾರಂಭದಲ್ಲಿ ಬೃಹತ್ ಮೊತ್ತವನ್ನು ಗಳಿಸುವ ಸೂಚನೆ ನೀಡಿದ್ದ ಆಸ್ಟ್ರೇಲಿಯಾ ತಂಡ, ನಂತರ ಭಾರತದ ಕರಾರುವಕ್ಕಾದ ಬೌಲಿಂಗ್ ದಾಳಿಯಿಂದಾಗಿ ರನ್ ಗತಿ ಮಂದವಾಗಿ ಸಾಗಿತು.

ಆರಂಭದಲ್ಲಿ ಮೊದಲನೇ ವಿಕೆಟ್ ಜೊತೆಯಾಟ 76 ರನ್ ಗಳ ಮೂಲಕ ಬೃಹತ್ ರನ್ ಗಳಿಸುವ ಸೂಚನೆ ನೀಡಿತ್ತಾದರೂ ಕೂಡ, ನಂತರ ಬಂದಂತಹ ಪಿಟರ್ ಹ್ಯಾಂಡ್ಸ್ ಕಾಂಬ್ ಅವರ ಅರ್ಧ ಶತಕವನ್ನು ಬಿಟ್ಟರೆ ಉಳಿದವರು ಯಾರು ಕೂಡ ಮೂವತ್ತರ ಗಡಿ ದಾಟಲಿಲ್ಲ.

ಭಾರತದ ಪರ ಭುವನೇಶ್ವರ್ ಕುಮಾರ್ 3, ಮೊಹಮ್ಮದ್ ಶಮಿ 2 ಹಾಗೂ ರವಿಂದ್ರಾ ಜಡೇಜಾ 2 ವಿಕೆಟ್ ಗಳಿಸುವ ಮೂಲಕ ಆಸಿಸ್ ತಂಡಕ್ಕೆ ಮಾರಕವಾಗಿ ಪರಿಣಮಿಸಿದರು.ಈಗ ಪಂದ್ಯ ಉಭಯ ತಂಡಗಳಿಗೂ ಪ್ರತಿಷ್ಠಿತ ಪಂದ್ಯವಾಗಿದೆ. ಒಂದು ವೇಳೆ ಈ ಪಂದ್ಯವನ್ನು ಗೆದ್ದು ಸರಣಿ ವಶ ಪಡಿಸಿಕೊಂಡಿದ್ದೆ ಆದಲ್ಲಿ ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ತಂಡಕ್ಕೆ ಒಂದು ರೀತಿ ಬೂಸ್ಟ್ ನೀಡಲಿದೆ ಎನ್ನಬಹುದು.

ಕಳೆದ ಪಂದ್ಯದಲ್ಲಿ ಬೃಹತ್ ಮೊತ್ತವನ್ನು ಗಳಿಸಿಯೂ ಕೂಡ ಸೋಲನ್ನು ಅನುಭವಿಸಿದ್ದ ಭಾರತ ತಂಡ ಈಗ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

 

Trending News