IND vs WI: ಟೀಂ ಇಂಡಿಯಾದಲ್ಲಿ 3 ಮಾರಕ ಆಟಗಾರರ ದಿಢೀರ್ ಎಂಟ್ರಿ; , ವೆಸ್ಟ್ ಇಂಡೀಸ್ ತಂಡಕ್ಕೆ ಆಘಾತ

India vs West Indies: ಎರಡನೇ ಏಕದಿನ ಪಂದ್ಯದಲ್ಲೂ ಭಾರತ ಗೆಲುವು ಸಾಧಿಸಿದರೆ ಸರಣಿ ಕೈವಶವಾಗಲಿದೆ. ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಕ್ಕೆ 3 ಮಾರಕ ಆಟಗಾರರು ದಿಢೀರ್ ಎಂಟ್ರಿ ಕೊಟ್ಟಿದ್ದಾರೆ.

Written by - Yashaswini V | Last Updated : Feb 8, 2022, 11:48 AM IST
  • ಟೀಂ ಇಂಡಿಯಾದಲ್ಲಿ ಈ 3 ಮಾರಕ ಆಟಗಾರರ ದಿಢೀರ್ ಎಂಟ್ರಿ
  • ಕ್ರಿಕೆಟಿಗರ ಚಿತ್ರಗಳೊಂದಿಗೆ ಟ್ವೀಟ್ ಮಾಡಿರುವ ಬಿಸಿಸಿಐ
  • ಭಯದಲ್ಲಿ ವೆಸ್ಟ್ ಇಂಡೀಸ್ ತಂಡ
IND vs WI: ಟೀಂ ಇಂಡಿಯಾದಲ್ಲಿ 3 ಮಾರಕ ಆಟಗಾರರ ದಿಢೀರ್ ಎಂಟ್ರಿ; , ವೆಸ್ಟ್ ಇಂಡೀಸ್ ತಂಡಕ್ಕೆ ಆಘಾತ  title=
India vs West Indies

India vs West Indies: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಫೆಬ್ರವರಿ 9 ರಂದು ನಡೆಯಲಿದೆ. ಮೊದಲ ಏಕದಿನ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಎರಡನೇ ಏಕದಿನ ಪಂದ್ಯದಲ್ಲೂ ಭಾರತ ಗೆಲುವು ಸಾಧಿಸಿದರೆ ಸರಣಿ ಕೈವಶವಾಗಲಿದೆ. ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಕ್ಕೆ 3 ಮಾರಕ ಆಟಗಾರರು ದಿಢೀರ್ ಎಂಟ್ರಿ ಕೊಟ್ಟಿದ್ದಾರೆ.

ಟೀಂ ಇಂಡಿಯಾದಲ್ಲಿ ಈ 3 ಮಾರಕ ಆಟಗಾರರ ದಿಢೀರ್ ಎಂಟ್ರಿ:
ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಲೋಕೇಶ್ ರಾಹುಲ್ (Lokesh Rahul), ಮಯಾಂಕ್ ಅಗರ್ವಾಲ್ (Mayank Agarwal) ಮತ್ತು ನವದೀಪ್ ಸೈನಿ (Navdeep Saini) ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಸೋಮವಾರ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದ ಮೊದಲು ನೆಟ್ ಸೆಷನ್‌ನಲ್ಲಿ ಲೋಕೇಶ್ ರಾಹುಲ್ ಮತ್ತು ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅಭ್ಯಾಸ ನಡೆಸಿದರು.

ಭಯದಲ್ಲಿ ವೆಸ್ಟ್ ಇಂಡೀಸ್ ತಂಡ:
ಟೀಮ್ ಇಂಡಿಯಾದ (Team India) ಸದಸ್ಯರಿಗೆ ಇದು ಐಚ್ಛಿಕ ಅಭ್ಯಾಸ ಅವಧಿಯಾಗಿತ್ತು, ಏಕೆಂದರೆ ತಂಡವು ಹಿಂದಿನ ದಿನ ಪಂದ್ಯವನ್ನು ಆಡಿತ್ತು. ಭಾರತ ತಂಡದಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾದ ನಂತರ ಅಗರ್ವಾಲ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿಯನ್ನು ಪ್ರತಿನಿಧಿಸಿದ್ದ 29 ವರ್ಷದ ವೇಗದ ಬೌಲರ್ ನವದೀಪ್ ಸೈನಿ ಕೂಡ ಅಭ್ಯಾಸದ ಭಾಗವಾಗಿದ್ದರು.

ಇದನ್ನೂ ಓದಿ- IPL Auction 2022 : ಈ ಸ್ಟಾರ್ ಆಟಗಾರರನ್ನು ಖರೀದಿಸಲು ಮುಗಿ ಬಿದ್ದ CSK ತಂಡ 

ಕ್ರಿಕೆಟಿಗರ ಚಿತ್ರಗಳೊಂದಿಗೆ ಟ್ವೀಟ್ ಮಾಡಿರುವ ಬಿಸಿಸಿಐ, 'ಇಲ್ಲಿ ಯಾರಿದ್ದಾರೆ ನೋಡಿ. ಮೂವರೂ ತಂಡವನ್ನು ಸೇರಿಕೊಂಡು ಇಂದು ಅಭ್ಯಾಸದ ಅವಧಿಯಲ್ಲಿ ಧಾರಾಕಾರವಾಗಿ ಬೆವರು ಹರಿಸಿದರು ಎಂದು ಅಭ್ಯಾಸದ ಫೋಟೋ, ವಿಡಿಯೋವನ್ನು ಹಂಚಿಕೊಂಡಿದೆ. 

ಲೋಕೇಶ್ ರಾಹುಲ್, ಮಯಾಂಕ್ ಅಗರ್ವಾಲ್ ಮತ್ತು ನವದೀಪ್ ಸೈನಿ (Navdeep Saini) ಅತ್ಯಂತ ಅಪಾಯಕಾರಿ ಆಟಗಾರರಾಗಿದ್ದು, ಇವರಿಂದ ವೆಸ್ಟ್ ಇಂಡೀಸ್ ತಂಡವು ಬೆಚ್ಚಿ ಬಿದ್ದಿದೆ ಎಂದು ಹೇಳಿದೆ.

ಮುಂದಿನ ಪಂದ್ಯದಲ್ಲಿ ಈ ಆಟಗಾರರು ಟೀಂ ಇಂಡಿಯಾದಿಂದ ಹೊರಗುಳಿಯಲಿದ್ದಾರೆ:
ಮೂರು ಪಂದ್ಯಗಳ ಈ ಸರಣಿಯ ಎರಡನೇ ಪಂದ್ಯದಲ್ಲಿ ರೋಹಿತ್ ಜೊತೆ ಅಗರ್ವಾಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಸರಣಿಯ ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ಜೊತೆ ರೋಹಿತ್ ಇನ್ನಿಂಗ್ಸ್ ಆರಂಭಿಸಿದ್ದರು. ಮೊದಲ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಕೇವಲ 28 ರನ್ ಗಳಿಸಿ ಔಟಾದರು. ಇಶಾನ್ ಕಿಶನ್ ಅವರ ಈ ಕಳಪೆ ಪ್ರದರ್ಶನದ ನಂತರ, ಈಗ ಫೆಬ್ರವರಿ 9 ರಂದು ನಡೆಯಲಿರುವ ಎರಡನೇ ODI ನಲ್ಲಿ ಅವರನ್ನು ಕೈಬಿಡಲಾಗಿದೆ. ಮೊದಲ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಉತ್ತಮ ಆಟವಾಡಿದರೂ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ.

ಕ್ಯಾಪ್ಟನ್ ರೋಹಿತ್ ನಂಬಿಕೆ ಮುರಿದಿದೆ:
ಇಶಾನ್ ಕಿಶನ್ ಆರಂಭಿಕ ಆಟಗಾರರಾಗಿ ತಂಡಕ್ಕೆ ನಿರೀಕ್ಷಿತ ಮಟ್ಟದಲ್ಲಿ ನೆರವಾಗಲಿಲ್ಲ. ಇದರೊಂದಿಗೆ ಇಶಾನ್ ಕಿಶನ್ ನಾಯಕ ರೋಹಿತ್ ಶರ್ಮಾ (Rohit Sharma) ನಂಬಿಕೆಯನ್ನು ಮುರಿದಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ಬದಲಿಗೆ ಇಶಾನ್ ಕಿಶನ್ ರೋಹಿತ್ ಶರ್ಮಾ ಜೊತೆ ಓಪನಿಂಗ್ ಮಾಡುವ ಅವಕಾಶ ಪಡೆದರು. ಧವನ್‌ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಶಿಖರ್ ಧವನ್ ಪಂದ್ಯದಲ್ಲಿ ಆಡಲು ಸಾಧ್ಯವಾಗಲಿಲ್ಲ. ಇದು ಇಶಾನ್ ಕಿಶನ್ ವೃತ್ತಿ ಜೀವನದ ಮೂರನೇ ಏಕದಿನ ಪಂದ್ಯವಾಗಿತ್ತು.

ಇದುವರೆಗಿನ ODIಗಳಲ್ಲಿ ಫ್ಲಾಪ್ ಪ್ರದರ್ಶನ:
ಶ್ರೀಲಂಕಾ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ಇಶಾನ್ ಕಿಶನ್ 59 ರನ್ ಗಳಿಸಿದ್ದರು. ಆ ಬಳಿಕ ಎರಡನೇ ಪಂದ್ಯದಲ್ಲಿ ಒಂದು ರನ್ ಗಳಿಸಿ ಔಟಾದರು. ಈಗ ಮೂರನೇ ಏಕದಿನ ಪಂದ್ಯದಲ್ಲಿ ಅವರು 36 ಎಸೆತಗಳಲ್ಲಿ 28 ರನ್ ಗಳಿಸಲಷ್ಟೇ ಶಕ್ತರಾದರು. ಇದೇ ಮೊದಲ ಬಾರಿಗೆ ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕ ಅವಕಾಶ ಪಡೆದಿದ್ದರು ಎಂಬುದು ಗಮನಾರ್ಹವಾಗಿದೆ. ಆದಾಗ್ಯೂ, ಇಶಾನ್ ಕಿಶನ್ ಅವರು ಉತ್ತಮ ಆರಂಭವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ- IPL 2022: ಮೆಗಾ ಹರಾಜಿನಲ್ಲಿ ಈ 3 ಅಪಾಯಕಾರಿ ಬೌಲರ್‌ಗಳನ್ನು ಖರೀದಿಸಲಿದೆ ಮುಂಬೈ!

ಇಶಾನ್ ಕಿಶನ್ 61 ಐಪಿಎಲ್ ಪಂದ್ಯಗಳಲ್ಲಿ 1452 ರನ್ ಗಳಿಸಿದ್ದಾರೆ, ಇದರಲ್ಲಿ ಅವರು 9 ಅರ್ಧ ಶತಕಗಳನ್ನು ಸಹ ಗಳಿಸಿದ್ದಾರೆ. ಇಶಾನ್ ಇದುವರೆಗೆ ಟೀಂ ಇಂಡಿಯಾ ಪರ 3 ODI ಮತ್ತು 5 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದಕ್ಕೂ ಮುನ್ನ ಅವರು 46 ಪ್ರಥಮ ದರ್ಜೆ ಪಂದ್ಯಗಳಲ್ಲಿ 2805 ರನ್ ಗಳಿಸಿದ್ದಾರೆ. ಈ ವೇಳೆ ಇಶಾನ್ ಬ್ಯಾಟ್ ನಲ್ಲಿ 5 ಶತಕ ಹಾಗೂ 16 ಅರ್ಧ ಶತಕ ಸಿಡಿಸಿದ್ದಾರೆ. ಅವರು ಲಿಸ್ಟ್ ಎ 76 ಪಂದ್ಯಗಳಲ್ಲಿ 2609 ರನ್ ಗಳಿಸಿದ್ದಾರೆ. ಇದರಲ್ಲಿ ಇಶಾನ್ 4 ಶತಕ ಹಾಗೂ 13 ಅರ್ಧ ಶತಕ ಸಿಡಿಸಿದ್ದಾರೆ.  

ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಪಂದ್ಯಗಳು:
ಫೆಬ್ರವರಿ 9: ಎರಡನೇ ODI (ಅಹಮದಾಬಾದ್)
ಫೆಬ್ರವರಿ 11: ಮೂರನೇ ODI (ಅಹಮದಾಬಾದ್)
ಫೆಬ್ರವರಿ 16: ಮೊದಲ T20 (ಕೋಲ್ಕತ್ತಾ)
ಫೆಬ್ರವರಿ 18: ಎರಡನೇ T20 (ಕೋಲ್ಕತ್ತಾ)
ಫೆಬ್ರವರಿ 20: ಮೂರನೇ T20 (ಕೋಲ್ಕತ್ತಾ)

ವೆಸ್ಟ್ ಇಂಡೀಸ್ ವಿರುದ್ಧದ ತಂಡಗಳು ಇಂತಿವೆ:
ಏಕದಿನ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಮಯಾಂಕ್ ಅಗರ್ವಾಲ್, ರುತುರಾಜ್ ಗಾಯಕ್ವಾಡ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರಿಷಬ್ ಪಂತ್ (wk), ದೀಪಕ್ ಚಹಾರ್, ಶಾರ್ದೂಲ್ ಠಾಕೂರ್ , ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಅವೇಶ್ ಖಾನ್.

T20 ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ರಿಷಬ್ ಪಂತ್ (WK), ವೆಂಕಟೇಶ್ ಅಯ್ಯರ್, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಅಕ್ಷರ್ ಪಟೇಲ್ ಯುಜ್ವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್. ಸಿರಾಜ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News