IND vs Pak : ಜುಲೈ 31 ರಂದು ಇಂಡಿಯಾ vs ಪಾಕ್ : ತಂಡ ಪ್ರಕಟಿಸಿದ ಪಿಸಿಬಿ

ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುವ ಪ್ರತಿಯೊಂದು ಪಂದ್ಯವೂ ಶ್ರೇಷ್ಠ ಪಂದ್ಯಕ್ಕಿಂತ ಕಡಿಮೆಯಿಲ್ಲ. ಆದ್ರೆ, ಈಗ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಜುಲೈ 31 ರಂದು, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ (IND vs PAK) ನಡುವೆ ಕ್ರಿಕೆಟ್ ಮ್ಯಾಚ್ ನಡೆಯಲಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಕೂಡ ಪಾಕಿಸ್ತಾನ ತಂಡವನ್ನು ಪ್ರಕಟಿಸಿದೆ.

Written by - Channabasava A Kashinakunti | Last Updated : Jun 1, 2022, 01:05 PM IST
  • ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ
  • ಕಾಮನ್‌ವೆಲ್ತ್ ಗೇಮ್ಸ್ ಸ್ಪರ್ಧಿಸಲಿದೆ
  • ಈ ತಂಡಗಳಿಂದಲೇ ಭಾರತದ ಪಂದ್ಯಗಳು ನಡೆಯಲಿವೆ
IND vs Pak : ಜುಲೈ 31 ರಂದು ಇಂಡಿಯಾ vs ಪಾಕ್ : ತಂಡ ಪ್ರಕಟಿಸಿದ ಪಿಸಿಬಿ title=

IND vs PAK Match : ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುವ ಪ್ರತಿಯೊಂದು ಪಂದ್ಯವೂ ಶ್ರೇಷ್ಠ ಪಂದ್ಯಕ್ಕಿಂತ ಕಡಿಮೆಯಿಲ್ಲ. ಆದ್ರೆ, ಈಗ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಜುಲೈ 31 ರಂದು, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ (IND vs PAK) ನಡುವೆ ಕ್ರಿಕೆಟ್ ಮ್ಯಾಚ್ ನಡೆಯಲಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಕೂಡ ಪಾಕಿಸ್ತಾನ ತಂಡವನ್ನು ಪ್ರಕಟಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ

ಮುಂದಿನ ತಿಂಗಳು ಯುನೈಟೆಡ್ ಕಿಂಗ್‌ಡಂನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತ ಮತ್ತು ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡಗಳು ಜುಲೈ 31 ರಂದು ಮುಖಾಮುಖಿಯಾಗಲಿವೆ. ಇದಕ್ಕೂ ಮೊದಲು, ಪಾಕಿಸ್ತಾನ ಮಹಿಳಾ ತಂಡವು ಟಿ20 ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ಆತಿಥೇಯ ಐರ್ಲೆಂಡ್ ವಿರುದ್ಧ ಬೆಲ್‌ಫಾಸ್ಟ್‌ನಲ್ಲಿ ಜುಲೈ 16 ರಿಂದ 24 ರವರೆಗೆ ಸೆಣಸಲಿದೆ. ಎರಡು ಸರಣಿಗಳಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮೂವರು ಮೀಸಲು ಆಟಗಾರರು ಸೇರಿದಂತೆ 18 ಆಟಗಾರರನ್ನು ಆಯ್ಕೆ ಮಾಡಿದೆ.

ಇದನ್ನೂ ಓದಿ : ಗರ್ಲ್ ಫ್ರೆಂಡ್ ಜೊತೆ ನಾಳೆ ಸಪ್ತಪದಿ ತುಳಿಯಲಿರುವ ದೀಪಕ್ ಚಹಾರ್..!

ಕಾಮನ್‌ವೆಲ್ತ್ ಗೇಮ್ಸ್ ಸ್ಪರ್ಧಿಸಲಿದೆ

ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡವು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬಾರ್ಬಡೋಸ್, ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಜುಲೈ 29 ರಿಂದ ಆಗಸ್ಟ್ 3 ರವರೆಗೆ ಆಡಲಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಂಗಳವಾರ, 'ಶ್ರೀಲಂಕಾ ವಿರುದ್ಧದ ಯಶಸ್ವಿ ಸರಣಿಯ ನಂತರ, ನಾವು ಅದೇ ಗೆಲುವಿನ ಟೀಂ ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದೇವೆ. ನಮ್ಮ ಹಿರಿಯ ಕ್ರಿಕೆಟಿಗರು ಭರ್ಜರಿ ಪ್ರದರ್ಶನ ನಿದ್ದು ಮಾತ್ರವಲ್ಲದೆ, ನಮ್ಮ ಯುವ ಆಟಗಾರರು ಕೂಡ ಅದ್ಭುತವಾಗಿ ಆತ ಆಡಿದ್ದಾರೆ ಎಂದು ತಿಳಿಸಿದೆ.

ಈ ತಂಡಗಳಿಂದಲೇ ಭಾರತದ ಪಂದ್ಯಗಳು ನಡೆಯಲಿವೆ

ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಟೀಂ ಇಂಡಿಯಾದ ಮೊದಲ ಪಂದ್ಯ ಆಸ್ಟ್ರೇಲಿಯಾ ವಿರುದ್ಧ 29 ಜುಲೈ 2022 ರಂದು ನಡೆಯಲಿದೆ. ಈ ಪಂದ್ಯದ ನಂತರ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯ ಜುಲೈ 31 ರಂದು ನಡೆಯಲಿದೆ. ಹಾಗೆ, ತಂಡದ ಮೂರನೇ ಪಂದ್ಯವು ಬಾರ್ಬಡೋಸ್ ವಿರುದ್ಧ ನಡೆಯಲಿದೆ. ಈ ಪಂದ್ಯ ಆಗಸ್ಟ್ 3 ರಂದು ನಡೆಯಲಿದೆ.

ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡ

ಬಿಸ್ಮಾ ಮರೂಫ್ (ಸಿ), ಅಮೆನ್ ಅನ್ವರ್, ಆಲಿಯಾ ರಿಯಾಜ್, ಅನಮ್ ಅಮೀನ್, ಆಯೇಶಾ ನಸೀಮ್, ಡಯಾನಾ ಬೇಗ್, ಫಾತಿಮಾ ಸನಾ, ಗುಲ್ ಫಿರೋಜಾ (ವಾಕ್), ಇರಾಮ್ ಜಾವೇದ್, ಕೈನಾತ್ ಇಮ್ತಿಯಾಜ್, ಮುನಿಬಾ ಅಲಿ ಸಿದ್ದಿಕಿ (ವಾಕ್), ನಿದಾ ದಾರ್, ಒಮೈಮಾ ಸೊಹೈಲ್, ಸಾದಿಯಾ ಇಕ್ಬಾಲ್ ಮತ್ತು ತುಬಾ ಹಸನ್.

ಇದನ್ನೂ ಓದಿ : India-South Africa T20: ದ.ಆಫ್ರಿಕಾಗೆ ಮಾರಕವಾಗುತ್ತಾರಾ ಭಾರತದ ಈ ಕ್ರಿಕೆಟ್‌ ಆಟಗಾರ?

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News