Ind vs Eng: 4 ಓವರ್‌ಗಳ ನಾಯಕತ್ವದಲ್ಲಿ 'ಹಿಟ್ಮ್ಯಾನ್' ಎಂದು ಸಾಬೀತು ಪಡಿಸಿದ Rohit Sharma

India vs England 4th T20: ಇಂಗ್ಲೆಂಡ್‌ನ ಇನ್ನಿಂಗ್ಸ್‌ನ 16 ಓವರ್‌ಗಳು ಮುಗಿದ ನಂತರ ನಾಯಕ ವಿರಾಟ್ ಕೊಹ್ಲಿ ಮೈದಾನದಿಂದ ಹೊರನಡೆದರು, ನಂತರ ರೋಹಿತ್ ಶರ್ಮಾ 4 ಓವರ್‌ಗಳಿಗೆ ಟೀಮ್ ಇಂಡಿಯಾದ ನಾಯಕತ್ವವನ್ನು ವಹಿಸಿಕೊಂಡರು.

Written by - Yashaswini V | Last Updated : Mar 19, 2021, 11:30 AM IST
  • ರೋಹಿತ್ ಶರ್ಮಾ ಅವರ ಚಾಣಾಕ್ಷ ನಾಯಕತ್ವವನ್ನು ಜಯಿಸಲು ಇಂಗ್ಲೆಂಡ್‌ಗೆ ಸಾಧ್ಯವಾಗಲಿಲ್ಲ
  • ರೋಹಿತ್ ಶರ್ಮಾ 4 ಓವರ್‌ಗಳ ನಾಯಕತ್ವದಲ್ಲಿ ಹಿಟ್ ಎಂಬುದು ಸಾಬೀತಾಯಿತು
  • ಟಿ 20 ಸರಣಿಯ ನಿರ್ಣಾಯಕ ಪಂದ್ಯ ಶನಿವಾರ ಅಹಮದಾಬಾದ್‌ನಲ್ಲಿ ನಡೆಯಲಿದೆ
Ind vs Eng: 4 ಓವರ್‌ಗಳ ನಾಯಕತ್ವದಲ್ಲಿ 'ಹಿಟ್ಮ್ಯಾನ್' ಎಂದು ಸಾಬೀತು ಪಡಿಸಿದ Rohit Sharma title=
Image courtesy: Twitter

ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ 20 ಪಂದ್ಯದಲ್ಲಿ 'ಹಿಟ್ಮ್ಯಾನ್' ರೋಹಿತ್ ಶರ್ಮಾ (Rohit Sharma) ನಾಯಕತ್ವದ ವಿಷಯದಲ್ಲಿ ವೀರ ಎಂದು ಮತ್ತೊಮ್ಮೆ ಸಾಬೀತಾಯಿತು. ಈ ಪಂದ್ಯದ ಸಮಯದಲ್ಲಿ, ರೋಹಿತ್ ಶರ್ಮಾ ಕೇವಲ 4 ಓವರ್‌ಗಳ ನಾಯಕತ್ವದಲ್ಲಿ ತಮ್ಮ ತಂತ್ರಗಳ ಮುಖಾಂತರ ಇಂಗ್ಲೆಂಡ್‌ಗೆ ಭಾರತದ ಮುಂದೆ ಮಂಡಿಯೂರುವಂತೆ ಮಾಡಿದರು. 

ರೋಹಿತ್ ಶರ್ಮಾ ನಾಯಕತ್ವದಡಿಯಲ್ಲಿ ಟೀಂ ಇಂಡಿಯಾ ಸೋಲಿನ ದವಡೆಯಿಂದ ಪಾರಾಗಿ ಜಯದ ಹಾದಿ ಹಿಡಿಯಿತು. ವಾಸ್ತವವಾಗಿ, ಇಂಗ್ಲೆಂಡ್‌ನ ಇನ್ನಿಂಗ್ಸ್‌ನ 16 ಓವರ್‌ಗಳ ಅಂತ್ಯದ ನಂತರ ನಾಯಕ ವಿರಾಟ್ ಕೊಹ್ಲಿ (Virat Kohli) ಮೈದಾನದಿಂದ ಹೊರನಡೆದರು, ನಂತರ ರೋಹಿತ್ ಶರ್ಮಾ 4 ಓವರ್‌ಗಳಿಗೆ ಟೀಮ್ ಇಂಡಿಯಾದ ನಾಯಕತ್ವವನ್ನು ವಹಿಸಿಕೊಂಡರು.

ಟೀಂ ಇಂಡಿಯಾವನ್ನು  ಸೋಲಿನ ದವಡೆಯಿಂದ ಹೊರತಂದ ರೋಹಿತ್ ತಂತ್ರ :
ರೋಹಿತ್ ಶರ್ಮಾ ತಮ್ಮ ತಂತ್ರಗಳಿಂದ ಸೋಲಿನ ದವಡೆಯಲ್ಲಿದ್ದ ತಂಡವನ್ನು ಗೆಲುವಿನ ಗುರಿ ಮುಟ್ಟುವಂತೆ ಮಾಡಿದರು. ರೋಹಿತ್ ಶರ್ಮಾ (Rohit Sharma) 16 ನೇ ಓವರ್‌ನಲ್ಲಿ ಬೌಲಿಂಗ್‌ಗಾಗಿ ಶಾರ್ದುಲ್ ಠಾಕೂರ್ ಅವರನ್ನು ಕರೆದರು. ಬೌಲಿಂಗ್ ಮಾಡುವ ಮೊದಲು ರೋಹಿತ್ ಶರ್ಮಾ ಶಾರ್ದುಲ್ ಠಾಕೂರ್‌ಗೆ ಸಲಹೆಯನ್ನೂ ನೀಡಿದ್ದರು ಮತ್ತು ಅವರು ಬೆನ್ ಸ್ಟೋಕ್ಸ್ ಅವರನ್ನು ಔಟ್ ಮಾಡಿದರು. 

ಇದನ್ನೂ ಓದಿ - India vs England, 4th T20I: ಭಾರತ ತಂಡಕ್ಕೆ 8 ರನ್ ಗಳ ರೋಚಕ ಗೆಲುವು

ಇದರ ನಂತರ, ಮುಂದಿನ ಎಸೆತದಲ್ಲಿ ಇಯೊನ್ ಮೋರ್ಗಾನ್ ಅವರು  ವಾಷಿಂಗ್ಟನ್ ಸುಂದರ್‌ ಕೈಚಳಕಕ್ಕೆ ಬಲಿಯಾದರು. ಇದು ಪಂದ್ಯದ ಮಹತ್ವದ ತಿರುವು ಎಂದು ಸಾಬೀತಾಯಿತು. ಬೆನ್ ಸ್ಟೋಕ್ಸ್ ಮತ್ತು ಇಯೊನ್ ಮೋರ್ಗಾನ್ ಔಟಾದ ನಂತರ, ಇಂಗ್ಲೆಂಡ್ ತಂಡದ ಲಯವು ಹದಗೆಟ್ಟಿತು ಮತ್ತು ಅವರು ಪಂದ್ಯವನ್ನು 8 ರನ್‌ಗಳಿಂದ ಕಳೆದುಕೊಂಡರು. ಈ ರೀತಿಯಾಗಿ, ಶಾರ್ದುಲ್ ಠಾಕೂರ್ ಅವರ ಈ ಓವರ್ ಪಂದ್ಯದ ಅತಿದೊಡ್ಡ ತಿರುವು ಎಂದು ಸಾಬೀತಾಯಿತು, ಇಲ್ಲದಿದ್ದರೆ ಭಾರತವು ಈ ಪಂದ್ಯ ಮತ್ತು ಸರಣಿಯನ್ನು ಕಳೆದುಕೊಳ್ಳುತ್ತಿತ್ತು.

ಇದನ್ನೂ ಓದಿ - VIDEO: ಮತ್ತೊಮ್ಮೆ ಒಂದೇ ಓವರ್‌ನಲ್ಲಿ 4 ಸಿಕ್ಸರ್‌ಗಳನ್ನು ಬಾರಿಸಿ ಘರ್ಜಿಸಿದ Yuvraj Singh

ಕೊನೆಯ ಓವರ್‌ನಲ್ಲಿ ಅದ್ಭುತ:
ಇದಾದ ನಂತರ ರೋಹಿತ್ ಶರ್ಮಾ 17 ನೇ ಓವರ್ ಅನ್ನು ಹಾರ್ದಿಕ್ ಪಾಂಡ್ಯ (Hardik Pandya) ಅವರಿಗೆ ನೀಡಿದರು ಮತ್ತು ಓವರ್‌ಗೆ ಮುಂಚಿತವಾಗಿ ಅವರೊಂದಿಗೆ ಸಂವಹನ ನಡೆಸಿದರು. ಆ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಕೊನೆಯ ಎಸೆತದಲ್ಲಿ ಸ್ಯಾಮ್ ಕುರ್ರನ್ ಅವರನ್ನು ಬೋಲ್ಡ್ ಮಾಡಿದರು. ಕೊನೆಯ ಓವರ್‌ನಲ್ಲಿ ಜೋಫ್ರಾ ಆರ್ಚರ್ ಆಟದ ವರಸೆ ಈ ಪಂದ್ಯವನ್ನೂ ಇಂಗ್ಲೆಂಡ್ ಗೆಲ್ಲುತ್ತದೆ ಎಂದೆನಿಸುತ್ತಿತ್ತು.  ಆದರೆ ರೋಹಿತ್ ಶರ್ಮಾ ಅವರ ಬುದ್ಧಿವಂತಿಕೆ ಎದುರು ಅವರ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಭಾರತ 8 ರನ್‌ಗಳಿಂದ ಜಯಗಳಿಸಿತು. 'ಡು ಆರ್ ಡೈ' ಪಂದ್ಯದಲ್ಲಿ ಭಾರತ ಐದು ಪಂದ್ಯಗಳ ಸರಣಿಯಲ್ಲಿ 2-2 ಗೋಲುಗಳಿಂದ ಜಯ ಸಾಧಿಸಿತು. ಸರಣಿಯ ನಿರ್ಣಾಯಕ ಟಿ 20 ಪಂದ್ಯ ಶನಿವಾರ ಅಹಮದಾಬಾದ್‌ನಲ್ಲಿ ನಡೆಯಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News