ಆಂಗ್ಲರ ವಿರುದ್ಧ ಟೀಂ ಇಂಡಿಯಾಗೆ ದಾಖಲೆ ಜಯ : ದಾದಾ, ಧೋನಿ, ಕೊಹ್ಲಿಯನ್ನೇ ಮೀರಿಸಿದ ಹಿಟ್‌ಮ್ಯಾನ್‌  

IND vs ENG 03rd Test : ಕಳೆದ ವರ್ಷ ಏಕದಿನ ಕ್ರಿಕೆಟ್​ನಲ್ಲಿ ಶ್ರೀಲಂಕಾ ವಿರುದ್ಧ ಎರಡು ಬಾರಿ 300ಕ್ಕೂ ಅಧಿಕ ರನ್​ಗಳ ಅಂತರದಿಂದ ಭಾರತ ಗೆಲುವು ಸಾಧಿಸಿತ್ತು. ಇದೀಗ ಟೆಸ್ಟ್​ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲೇ ಮೊದಲ ಬಾರಿಗೆ 400 ಕ್ಕಿಂತ ಹೆಚ್ಚು ರನ್​ಗಳಿಂದ ಗೆದ್ದು ಬೀಗಿದೆ.

Written by - VISHWANATH HARIHARA | Edited by - Krishna N K | Last Updated : Feb 18, 2024, 08:41 PM IST
  • ಇದೇ ಮೊದಲ ಬಾರಿಗೆ 400ಕ್ಕಿಂತ ಅಧಿಕ ರನ್​ಗಳ ಅಂತರದಲ್ಲಿ ಗೆದ್ದು ಬೀಗಿದೆ.
  • ಈ ಗೆಲುವುನೊಂದಿಗೆ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮ ವಿಶೇಷ ದಾಖಲೆಯೊಂದನ್ನು ಬರೆದಿದೆ.
  • ಏಕದಿನ ಹಾಗೂ ಟೆಸ್ಟ್​ ಎರಡೂ ಮಾದರಿಯಲ್ಲಿ ಅತೀ ಹೆಚ್ಚು ರನ್​ಗಳ ಜಯ ರೋಹಿತ್​ ನಾಯಕತ್ವದಲ್ಲಿ ಬಂದಿದೆ.
ಆಂಗ್ಲರ ವಿರುದ್ಧ ಟೀಂ ಇಂಡಿಯಾಗೆ ದಾಖಲೆ ಜಯ : ದಾದಾ, ಧೋನಿ, ಕೊಹ್ಲಿಯನ್ನೇ ಮೀರಿಸಿದ ಹಿಟ್‌ಮ್ಯಾನ್‌   title=

Rohit Sharma : ಭಾರತ ತಂಡ ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 400ಕ್ಕಿಂತ ಅಧಿಕ ರನ್​ಗಳ ಅಂತರದಲ್ಲಿ ಗೆದ್ದು ಬೀಗಿದೆ. ಈ ಗೆಲುವುನೊಂದಿಗೆ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮ ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಲ್ಲಿ ಬರೆದುಕೊಂಡಿದ್ದಾರೆ.

ಏಕದಿನ ಹಾಗೂ ಟೆಸ್ಟ್​ ಎರಡೂ ಮಾದರಿಯಲ್ಲಿ ಅತೀ ಹೆಚ್ಚು ರನ್​ಗಳ ಜಯ ರೋಹಿತ್​ ನಾಯಕತ್ವದಲ್ಲಿ ಬಂದಿದೆ. ಇವತ್ತಿನ ಜಯಕ್ಕಿಂತ ಮೊದಲು ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ 372 ರನ್​ಗಳ ವಿನ್‌ ಆಗಿದ್ದು, ಗರಿಷ್ಠ ರನ್​ಗಳ ವಿಜಯವಾಗಿತ್ತು. 

ಇದನ್ನೂ ಓದಿ : ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 434 ರನ್ ಗಳ ಅಂತರದಿಂದ ದಾಖಲೆಯ ಜಯ

ಕಳೆದ ವರ್ಷ ಏಕದಿನ ಕ್ರಿಕೆಟ್​ನಲ್ಲಿ ಶ್ರೀಲಂಕಾ ವಿರುದ್ಧ ಎರಡು ಬಾರಿ 300ಕ್ಕೂ ಅಧಿಕ ರನ್​ಗಳ ಅಂತರದಿಂದ ಭಾರತ ಗೆಲುವು ಸಾಧಿಸಿತ್ತು. ಇದೀಗ ಟೆಸ್ಟ್​ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲೇ ಮೊದಲ ಬಾರಿಗೆ 400 ಕ್ಕಿಂತ ಹೆಚ್ಚು ರನ್​ಗಳಿಂದ ಗೆದ್ದು ಬೀಗಿದೆ. ಟಿ20 ಕ್ರಿಕೆಟ್​ನಲ್ಲಿ ಈ ದಾಖಲೆ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಕಿವೀಸ್​ ವಿರುದ್ಧ ಭಾರತ ಕಳೆದ ವರ್ಷ 168 ರನ್​ಗಳ ಜಯ ಸಾಧಿಸಿದೆ. 

ಮತ್ತೊಂದು ವಿಶೇಷವೆಂದರೆ ರೋಹಿತ್ ಶರ್ಮಾ ಟೆಸ್ಟ್​ ಕ್ರಿಕೆಟ್​ನಲ್ಲಿ ಶತಕ ಬಾರಿಸಿದ ಎಲ್ಲಾ ಪಂದ್ಯದಲ್ಲೂ ಭಾರತ ಗೆದ್ದಿದೆ. ಟೆಸ್ಟ್ ಕ್ರಿಕೆಟ್​ನಲ್ಲಿ ರೋಹಿತ್ ಶರ್ಮಾ ಇದುವರೆಗೂ 11 ಶತಕ ಸಿಡಿಸಿದ್ದು, ಎಲ್ಲಾ ಪಂದ್ಯಗಳಲ್ಲೂ ಭಾರತ ಜಯ ಸಾಧಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News