IND vs AUS: ಇಂಡೋ-ಆಸೀಸ್ ಪಂದ್ಯ ಧರ್ಮಶಾಲಾದಿಂದ ಸ್ಥಳಾಂತರ: ಹಾಗಾದ್ರೆ 3ನೇ ಟೆಸ್ಟ್ ಕ್ರಿಕೆಟ್ ನಡೆಯೊದೆಲ್ಲಿ ಗೊತ್ತಾ?

IND vs AUS 3rd Test Match: 2017 ರಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ ಧರ್ಮಶಾಲಾದಲ್ಲಿ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿತ್ತು. ಅಜಿಂಕ್ಯ ರಹಾನೆ ನೇತೃತ್ವದ ತಂಡವು 4 ನೇ ಟೆಸ್ಟ್ ಪಂದ್ಯವನ್ನು ಗೆದ್ದು 2-1 ರಿಂದ ಸರಣಿಯನ್ನು ವಶಪಡಿಸಿಕೊಂಡಿತು. ಅಂದಿನಿಂದ ಈ ಸ್ಥಳದಲ್ಲಿ ಟೆಸ್ಟ್ ಪಂದ್ಯವನ್ನು ಆಯೋಜಿಸಿಲ್ಲ.

Written by - Bhavishya Shetty | Last Updated : Feb 12, 2023, 05:51 PM IST
    • ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯ
    • ಪಿಚ್ ಸಮಸ್ಯೆ ಹಿನ್ನೆಲೆಯಲ್ಲಿ ಸದ್ಯ ಬೇರೆಡೆಗೆ ಸ್ಥಳಾಂತರಿಸಲಾಗಿದೆ
    • ಆಯೋಜಿಸಲು ಮೈದಾನವು ಯೋಗ್ಯವಾಗಿಲ್ಲದ ಕಾರಣ BCCI ಸ್ಥಳವನ್ನು ಬದಲಾಯಿಸಿದೆ
IND vs AUS: ಇಂಡೋ-ಆಸೀಸ್ ಪಂದ್ಯ ಧರ್ಮಶಾಲಾದಿಂದ ಸ್ಥಳಾಂತರ: ಹಾಗಾದ್ರೆ 3ನೇ ಟೆಸ್ಟ್ ಕ್ರಿಕೆಟ್ ನಡೆಯೊದೆಲ್ಲಿ ಗೊತ್ತಾ? title=
India Australia

IND vs AUS 3rd Test Match: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯವನ್ನು ಈ ಹಿಂದೆ ಧರ್ಮಶಾಲಾದ ಕ್ರಿಕೆಟ್ ಮೈದಾನದಲ್ಲಿ ಆಯೋಜನೆ ಮಾಡಲಾಗಿತ್ತು. ಆದರೆ ಪಿಚ್ ಸಮಸ್ಯೆ ಹಿನ್ನೆಲೆಯಲ್ಲಿ ಸದ್ಯ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಮಾರ್ಚ್ 1 ರಿಂದ 5 ರವರೆಗೆ ಪಂದ್ಯವನ್ನು ಆಯೋಜಿಸಲು ಸ್ಥಳವನ್ನು ನಿಗದಿಪಡಿಸಲಾಗಿತ್ತು. ಟೆಸ್ಟ್ ಪಂದ್ಯವನ್ನು ಆಯೋಜಿಸಲು ಮೈದಾನವು ಯೋಗ್ಯವಾಗಿಲ್ಲದ ಕಾರಣ BCCI ಸ್ಥಳವನ್ನು ಬದಲಾಯಿಸಿದೆ.

ಇದನ್ನೂ ಓದಿ: ‘ನನ್ನ ಮುಖ ಏನ್ ತೋರಿಸೋದು ಅಲ್ಲಿ ತೋರಿಸಿ’ ಮೈದಾನದಲ್ಲಿಯೇ ಕೋಪಗೊಂಡ Rohit Sharma ಬೈದಿದ್ದು ಯಾರಿಗೆ?

ಮುಂದಿನ ಪಂದ್ಯವನ್ನು ವಿಶಾಖಪಟ್ಟಣ, ರಾಜ್‌ಕೋಟ್, ಮುಂಬೈ, ಇಂದೋರ್, ಪುಣೆ ಅಥವಾ ಬೆಂಗಳೂರಿನಲ್ಲಿ ಆಯೋಜಿಸಬೇಕೇ ಎಂದು ಚಿಂತನೆ ನಡೆಸಲಾಗುತ್ತಿದೆ.

“ಪಿಚ್‌ನ ಪಕ್ಕದ ಪ್ರದೇಶದ ಬಳಿ ಇನ್ನೂ ಕೆಲವು ಕೆಲಸಗಳನ್ನು ಮಾಡಬೇಕಾಗಿದೆ. ಆಟಕ್ಕೆ ಮೊದಲು ಪಿಚ್ ಸಿದ್ಧವಾಗುತ್ತವೆ ಎಂದು ಭಾವಿಸುತ್ತೇವೆ. ಸದ್ಯ ಬಿಸಿಸಿಐ ತಪಾಸಣೆಯ ನಂತರ ಎಚ್‌ಪಿಸಿಎ ನಿರ್ಧಾರ ತೆಗೆದುಕೊಳ್ಳುತ್ತದೆ. ಕೆಲವು ಕೆಲಸಗಳು ಇನ್ನೂ ಬಾಕಿ ಉಳಿದಿವೆ. ಮೂರು ವಾರಗಳು ಉಳಿದಿರುವುದರಿಂದ ಕೆಲಸವು ಪೂರ್ಣಗೊಳ್ಳುತ್ತದೆ ಎಂಬ ಭರವಸೆ ಇದೆ” ಎಂದು ಮೂಲಗಳು ತಿಳಿಸಿವೆ.

2017 ರಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ ಧರ್ಮಶಾಲಾದಲ್ಲಿ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿತ್ತು. ಅಜಿಂಕ್ಯ ರಹಾನೆ ನೇತೃತ್ವದ ತಂಡವು 4 ನೇ ಟೆಸ್ಟ್ ಪಂದ್ಯವನ್ನು ಗೆದ್ದು 2-1 ರಿಂದ ಸರಣಿಯನ್ನು ವಶಪಡಿಸಿಕೊಂಡಿತು. ಅಂದಿನಿಂದ ಈ ಸ್ಥಳದಲ್ಲಿ ಟೆಸ್ಟ್ ಪಂದ್ಯವನ್ನು ಆಯೋಜಿಸಿಲ್ಲ. 2019 ರಲ್ಲಿ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ T20I ಮಳೆಯಿಂದಾಗಿ ಅಲ್ಲಿ ರದ್ದುಗೊಂಡಿತ್ತು. ಫೆಬ್ರವರಿ 2022 ರಲ್ಲಿ ಧರ್ಮಶಾಲಾ ಕೊನೆಯ ಬಾರಿಗೆ ಅಂತರಾಷ್ಟ್ರೀಯ ಪಂದ್ಯವನ್ನು ಆಯೋಜನೆ ಮಾಡಿತ್ತು.

ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯವನ್ನು ನಾಗ್ಪುರದಲ್ಲಿ ಆಯೋಜಿಸಿದ್ದು, ಫೆಬ್ರವರಿ 17 ರಿಂದ 21 ರವರೆಗೆ ದೆಹಲಿಯಲ್ಲಿ 2 ನೇ ಟೆಸ್ಟ್ ನಡೆಯಲಿದೆ. ಇನ್ನು ಅಹಮದಾಬಾದ್ ನಲ್ಲಿ ಮಾರ್ಚ್ 9 ರಿಂದ 13 ರವರೆಗೆ 4 ನೇ ಟೆಸ್ಟ್ ಪಂದ್ಯ ಆಯೋಜನೆಯಾಗಲಿದೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ‘RRR’ ಬಲ: ಸಖತ್ ವೈರಲ್ ಆಗ್ತಿರೋ ಸಚಿನ್ ತೆಂಡೂಲ್ಕರ್ ಟ್ವೀಟ್ ಹೇಳುತ್ತಿರೋದೇನು?

ರೋಹಿತ್ ಶರ್ಮಾ ನೇತೃತ್ವದ ತಂಡ ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಮತ್ತು 132 ರನ್‌ಗಳ ಅಂತರದಿಂದ ಗೆದ್ದುಕೊಂಡಿತು. ಗೆಲುವಿನಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜಾ ಕೊಡುಗೆ ಹೆಚ್ಚಿದ್ದ ಕಾರಣ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಅವರು ಭಾಜನರಾದರು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News