48 ವರ್ಷದ ಈ ಆಟಗಾರನ ಮೇಲೆ ಹಣ ಸುರಿದ ಐಪಿಎಲ್ ತಂಡ ! ಲೀಗ್‌ನ ಇತಿಹಾಸದಲ್ಲಿ ಹಿರಿಯ ಆಟಗಾರ ಇವರೇ !

IPL 2024 Auction:ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಹಿರಿಯ ಆಟಗಾರ ಯಾರು ಎನ್ನುವುದು ತಿಳಿದಿದೆಯೇ? ಹೌದು, ಈ ಆಟಗಾರನನ್ನು  48 ನೇ ವಯಸ್ಸಿನಲ್ಲಿ ಹರಾಜಿನ ಮೂಲಕ  ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.   

Written by - Ranjitha R K | Last Updated : Dec 7, 2023, 09:27 AM IST
  • 48 ನೇ ವಯಸ್ಸಿನಲ್ಲಿಯೂ ಈ ಆಟಗಾರನ ಮೇಲೆ ಬಿಡ್
  • 20 ಲಕ್ಷ ರೂ ಮೂಲ ಬೆಲೆಗೆ ಈ ಆಟಗಾರನ ಖರೀದಿ
  • ಲೀಗ್‌ನ ಇತಿಹಾಸದಲ್ಲಿ ಅತ್ಯಂತ ಹಿರಿಯ ಆಟಗಾರ
48 ವರ್ಷದ ಈ ಆಟಗಾರನ ಮೇಲೆ ಹಣ ಸುರಿದ ಐಪಿಎಲ್ ತಂಡ  ! ಲೀಗ್‌ನ ಇತಿಹಾಸದಲ್ಲಿ ಹಿರಿಯ ಆಟಗಾರ ಇವರೇ ! title=

IPL 2024 Auction : ಇಂಡಿಯನ್ ಪ್ರೀಮಿಯರ್ ಲೀಗ್ 2024 ಹರಾಜು ಕೆಲವೇ ದಿನಗಳಲ್ಲಿ ನಡೆಯಲಿದೆ. ಇದಕ್ಕಾಗಿ ಆಟಗಾರರಿಂದ ಹಿಡಿದು ಅಭಿಮಾನಿಗಳು ಕಾಯುತ್ತಿದ್ದಾರೆ. ಐಪಿಎಲ್ 2024 ರ ಹರಾಜು ದುಬೈನಲ್ಲಿ ನಡೆಯಲಿದೆ. ಮುಂಬರುವ ಋತುವಿನ ಹರಾಜು ಡಿಸೆಂಬರ್ 19 ರಂದು ನಡೆಯಲಿದೆ. ಈ ಹರಾಜಿನಲ್ಲಿ 1166 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಹಿರಿಯ ಆಟಗಾರ ಯಾರು ಎನ್ನುವುದು ತಿಳಿದಿದೆಯೇ? ಹೌದು, ಈ ಆಟಗಾರನನ್ನು  48 ನೇ ವಯಸ್ಸಿನಲ್ಲಿ ಹರಾಜಿನ ಮೂಲಕ  ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. 

48 ನೇ ವಯಸ್ಸಿನಲ್ಲಿಯೂ ಈ ಆಟಗಾರನ ಮೇಲೆ  ಬಿಡ್ :
ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಸ್ಪಿನ್ನರ್ ಪ್ರವೀಣ್ ತಾಂಬೆ ಈ ಲೀಗ್‌ನ ಇತಿಹಾಸದಲ್ಲಿ ಅತ್ಯಂತ  ಹಿರಿಯ ಆಟಗಾರ. 2020 ರ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅವರನ್ನು ತಮ್ಮ ತಂಡಕ್ಕೆ 20 ಲಕ್ಷ ರೂ ಮೂಲ ಬೆಲೆಗೆ ಸೇರಿಸಿಕೊಂಡಿತ್ತು.  ಆ ವೇಳೆ ಪ್ರವೀಣ್ ತಾಂಬೆ ವಯಸ್ಸು  48 ವರ್ಷ, 2 ತಿಂಗಳು ಮತ್ತು 11 ದಿನಗಳು. ಆದರೆ,  ಇಡೀ ಸೀಸನ್ ನಲ್ಲಿ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಕ್ಕಿರಲಿಲ್ಲ. ಅವರು ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನು 2016 ರಲ್ಲಿ ಆಡಿದ್ದರು.

ಇದನ್ನೂ ಓದಿ : IND vs PAK: ಹೊಸ ವರ್ಷ ಆರಂಭಕ್ಕೂ ಮೊದಲೇ ಇಂಡಿಯಾ ವರ್ಸಸ್ ಪಾಕಿಸ್ತಾನ್ ಪಂದ್ಯ- ಯಾವಾಗ ಗೊತ್ತಾ?

 44 ನೇ ವಯಸ್ಸಿನಲ್ಲಿ ಈ ಅಂತಾರಾಷ್ಟ್ರೀಯ ಆಟಗಾರನಿಗೆ ಬೇಡಿಕೆ :
2015 ರ ಐಪಿಎಲ್ ಹರಾಜಿನಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ಬ್ರಾಡ್ ಹಾಗ್ ಅವರನ್ನು  ಖರೀದಿಸಿತ್ತು. ಅವರಿಗೆ ಆ ಸಂದರ್ಭದಲ್ಲಿ 44 ವರ್ಷ, 10 ದಿನಗಳಾಗಿತ್ತು . 50 ಲಕ್ಷ ನೀಡಿ ಕೆಕೆಆರ್ ಅವರನ್ನು ತಂಡಕ್ಕೆ ಸೇರಿಸಿತ್ತು. ಅದೇ ಸಮಯದಲ್ಲಿ, ಈ ಪಟ್ಟಿಯಲ್ಲಿ ಮೂರನೇ ಹೆಸರು ಭಾರತದ ಅಮಿತ್ ಮಿಶ್ರಾ ಅವರದ್ದು.  40 ವರ್ಷದ ಅಮಿತ್ ಮಿಶ್ರಾ ಅವರನ್ನು ಕಳೆದ ಋತುವಿನಲ್ಲಿ 50 ಲಕ್ಷ ರೂ.ಗೆ ಲಕ್ನೋ ಸೂಪರ್‌ಜೈಂಟ್ಸ್ ಖರೀದಿಸಿತ್ತು. 

ಈ ಇಬ್ಬರು ದಿಗ್ಗಜ ಸ್ಪಿನ್ನರ್‌ಗಳೂ ಸೇರಿದ್ದಾರೆ :
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಶ್ರೀಲಂಕಾದ ಲೆಜೆಂಡರಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರನ್ನು 39 ವರ್ಷ, 9 ತಿಂಗಳು ಮತ್ತು 18 ದಿನಗಳ ವಯಸ್ಸಿನಲ್ಲಿ ಖರೀದಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿತ್ತು. 1.12 ಕೋಟಿ ಪಾವತಿಸಿ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿತ್ತು. ಐದನೇ ಹೆಸರು ದಕ್ಷಿಣ ಆಫ್ರಿಕಾದ ದಂತಕಥೆ ಇಮ್ರಾನ್ ತಾಹಿರ್ ಅವರದ್ದು. 38 ವರ್ಷ ಮತ್ತು 10 ತಿಂಗಳ ವಯಸ್ಸಿನಲ್ಲಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 1 ಕೋಟಿ ಕೊಟ್ಟು ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು.

ಇದನ್ನೂ ಓದಿ : ಕೇವಲ 43 ಎಸೆತಗಳಲ್ಲಿ 193 ರನ್... ಬರಿ 4,6,6,4,6,6,4,6 ಗಳೇ... ಆಟಗಾರ ಯಾರು ತಿಳಿಯಲು ವಿಡಿಯೋ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News